ವೈದ್ಯ ನಮ್ಮ ದೇವರು
ಸ್ವಾಸ್ಥ್ಯಕಿವರೆ ತವರು
ಆರೋಗ್ಯಕ್ಕೆ ಶ್ರೀರಕ್ಷೆ
ಉಪಶಮನಕೆ ಸದಾ ಮುಂದು
ಹಗಲಿರುಳು ಲೆಕ್ಕಿಸದೆ
ಜೀವಧಾತರು ಎಂದೆಂದು.
ರೋಗ ಪತ್ತೆಹಚ್ಚಲು
ಭೋಗಜೀವನಕೆ ತಿಳುವಳಿಕೆ
ಮದ್ದು ನೀಡುತ
ದುಗುಡದ ಸದ್ದಡಗಿಸುವ.
ಮಾತೃ ವಾತ್ಸಲ್ಯದಿ
ಮಂದಹಾಸದಿ ಎಲ್ಲ ಮರೆಸಿ
ಉತ್ಸಾಹ ತುಂಬುತ
ಜೀವಯಾನಕೆ ಸಹಚರ.
ಹಿತಮಿತದ ಸುವಿಚಾರ
ಅಪಘಾತದಿ ಉಪಚರಿಸಿ
ಆಘಾತವ ಸರಿಪಡಿಸಿ
ಆಪತ್ಭಾಂದವ ನೀನಂತೆ.
ಶಕ್ತಿ ಸ್ವರೂಪಿಯಾಗಿ
ಯುಕ್ತಿಯ ಬಳಸಿ
ನಿಶಕ್ತಿಯ ಗುಣಪಡಿಸುತ
ವೈದ್ಯರೆಂಬ ಸೇವಕರು.
- ರೇಷ್ಮಾ ಕಂದಕೂರ ,ಶಿಕ್ಷಕಿ
ಸಿಂಧನೂರು




















