ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಇಲಕಲ್ಲ ಕೋಟೆಗಳು ಅಪರೂಪದ ಕೃತಿಯಾಗಿದೆ :- ಡಾ || ಎಸ್. ಆರ್.ಗೋಲಗುಂಡ

ಹುನಗುoದ : ನಾವು ರಾಜ್ಯದ ಇತಿಹಾಸ ದೇಶದ ಇತಿಹಾಸ ಪ್ರಪಂಚದ ಇತಿಹಾಸವನ್ನು ತಿಳಿದುಕೋಳ್ಳಲು ಬಯಸುತ್ತೇವೆ ಆದರೆ ನಮ್ಮೂರಿನ ಇತಿಹಾಸವನ್ನು ನಮ್ಮ ಹತ್ತಿರದ ಪರಿಸರವನ್ನು ತಿಳಿದುಕೊಳ್ಳಲು ಆಸಕ್ತಿ ಹೊಂದಿರುವುದಿಲ್ಲ ಎಂದು ನಗರದ ವಿ.ಎಂ.ಕೆ.ಎಸ್.ಆರ್.ವಿ.ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಆರ್.ಗೋಲಗುಂಡ ಹೇಳಿದರು.
ನಗರದ ವಿ.ಎಂ.ಕೆ.ಎಸ್.ಆರ್.ವಿ. ಕಲಾ ಹಾಗೂ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಹೊನ್ನಕುಸುಮ ಸಾಹಿತ್ಯ ವೇದಿಕೆ ಇಲಕಲ್ಲಿನ ಸಾಹಿತಿ ತಿಂಗಳ ಬೆಳಕು ಮಾಲಿಕೆಯ ೩೩ ನೇ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಅಂಗಡಿ ಅವರ ಇಲಕಲ್ಲ ಕೋಟೆಗಳು ಮತ್ತು ಇತರ ಲೇಖನಗಳು ಎಂಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ
ಆದರೆ ಮಲ್ಲಿಕಾರ್ಜುನ ಅಂಗಡಿಯವರು ಪರಿಸರದಲ್ಲಿ ಹಾಗಿ ಹೋದ ಅಪರೂಪದ ಇತಿಹಾಸವನ್ನು ಇಲಕಲ್ಲ ಕೋಟೆಗಳು ಹಾಗೂ ಇತರ ಲೇಖನಗಳ ಈ ಕೃತಿಯಲ್ಲಿ ಬರೆದಿರುವದು ಶ್ಲಾಘನೀಯವಾಗಿದೆ.
ಮುಂದುವರೆದು ಈ ಕೃತಿ ಸಂಶೋಧನಾತ್ಮಕ ಕೃತಿಯಾಗಿದ್ದು ಅಂಗಡಿಯವರು ಶ್ರಮ ಹಾಗೂ ಸ, ಸಂಶೋಧನನ್ಮಾತಕ ಅಪರೂಪದ ಕೃತಿಯಾಗಿದೆ ಎಂದು ಬಣ್ಣಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಪಟ್ಟಣದ ವಿ.ಎಂ.ಕೆ.ಎಸ್.ಆರ್.ವಿ. ಕಲಾ ಹಾಗೂ ವಿಜ್ಞಾನ ಮತ್ತು ವಾಣಿಜ್ಯ ಮಹಾವಿಧ್ಯಾಲಯದ ಇತಿಹಾಸ ಪ್ರಾಧ್ಯಾಪಕರಾದ ಡಾ|| ಎಸ್. ಆರ್. ನಾಗಣ್ಣನವರ ಪುಸ್ತಕದ ಬಗ್ಗೆ ಅನುಭವ ನೀಡಿ ಕೋಟೆ ಕೊತ್ತಲಗಳು ಕಟ್ಟಿಸಿ ನಮ್ಮ ರಾಜರು ಗ್ರಾಮಗಳನ್ನು ರಕ್ಷಿಸಿದರು.
ಅವು ಈಗ ಇತಿಹಾಸದ ಭಾಗವಾಗಿ ಉಳಿದಿವೆ. ಅವುಗಳ ಸಂಯೋಧನೆ ಇಂದು ಬಹಳ ಅವಶ್ಯವಾಗಿದೆ ಲೇಖಕ ಮಲ್ಲಿಕಾರ್ಜುನ ಅಂಗಡಿಯವರು ಇಳಕಲ್ಲಿನ ಕೋಟೆಗಳು ಹಾಗೂ ಇತರ ಲೇಖನಗಳು ಬಂದು ಸಂಯೋಧನಾ ಕೃತಿಯಾಗಿದ್ದು ಈ ನಾಡಿನ ಜನ ಪ್ರತಿಯೋಬ್ಬರು ಇಲ್ಲಿಯ ವಿಷಯಗಳನ್ನು ತಿಳಿಯುದಕ್ಕಾಗಿ ಈ ಕೃತಿಯನ್ನು ಓದಬೇಕು ಯಾರಿಗೂ ಗೊತ್ತಿರದ ಸಂಗತಿಗಳು ಹಾಗೂ ಭಾರತೀಯ ಸಾಂಸ್ಕೃತಿಕ ಪರಂಪರೆ ಈ ಕೃತಿಯಲ್ಲಿ ಅನಾವರಣಗೊಂಡಿದೆ ಎಂದರು.
ಮಲ್ಲಿಕಾರ್ಜುನರವರ ಈ ಕೃತಿಯು ಇಂದೆ೦ದೂ ಅತ್ತುತ್ತಮ ಕೃತಿಯಾಗಿದೆ ಎಂದು ಹೇಳಬಹುದು ಇದರಿಂದ ಅಂಗಡಿಯವರ ಶ್ರಮ ಸಾರ್ಥಕವಾಗಿದೆ ಎಂದು ಕೃತಿಯನ್ನು ಪರಿಚರಿಸಿದ ಡಾ|| ಶಿವಾನಂದ ನಾಗಣ್ಣನವರ ಅಭಿಪ್ರಾಯಪಟ್ಟರು.
ಕೃತಿಕಾರ ಮಲ್ಲಿಕಾರ್ಜುನ ಅಂಗಡಿ ಮಾತಾನಾಡಿ ಈ ಕೃತಿಯನ್ನು ಬರೆಯಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ ಈ ಕೃತಿ ನನಗೆ ಸಂತಸ ತಂದಿದ್ದಲ್ಲದೇ ನನಗೆ ಹೆಸರನ್ನು ತಂದುಕೋಟ್ಟಿದೆ ಎಂದು ಅಭಿಪ್ರಾಯ ಪಟ್ಟರು. ಈ ಕೃತಿ ಬರೆಯಲು ಸಾಕಷ್ಟು ಜನ ಹಲವಾರು ಸಂಗತಿಗಳನ್ನು ಹೇಳಿ ನನಗೆ ಪ್ರೇರಣೆ ಹಾಗೂ ಸಹಕಾರ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕೆ.ಎ.ಬನ್ನಟ್ಟಿ ವ್ಹಿ.ಆರ್ ಜನಾದ್ರಿ ಬಸವರಾಜ ಕೊನ್ನೂರು ಎಂ.ಎನ್. ತೆನಹಳ್ಳಿ ಸಿದ್ದಲಿಂಗಪ್ಪ ಬೀಳಗಿ ನಾಗರಾಜವಾಡಗೌಡರ ಶರಣಪ್ಪ ಹೋಲಿಗೇರಿ ಎಸ್ .ಎಸ್. ಹಳ್ಳೂರ. ಜಗದೀಶ ಹದ್ಲಿ. ವಿಜಯಕುಮಾರ ಕುಲಕರ್ಣಿ ವಸಂತಕುಮಾರ ಕಡ್ಲಿಮಟ್ಟಿ ಅಶೋಕ ಬಳ್ಕಾ. ಶ್ರೇಯಾಂಶ ಕೇಲಾರ ರಾಘುವಡ್ಡರ. ಮುರ್ತುಜಾಟೇಗಂ ಕೊಡಗಲಿ . ಇಂದುಪತಿ ಪುರಾಣಿಕ ಗೀತಾ ತಾರಿವಾಳ ನಿರೂಪಿಸಿ ವಂದಿಸಿದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!