ಹುನಗುಂದ: ಬದಲಾಗಿರುವ ಶಿಕ್ಷಣ ಪದ್ಧತಿ ವಿದ್ಯಾರ್ಥಿಗಳಿಗೆ ಅಂಕ ಪಡೆಯಲು ಸೀಮಿತವಾಗಿದೆಯೇ ಹೊರತು ಅವರ ಬದುಕಿನ ವಿಕಾಸಕ್ಕೆ ಪೂರಕವಾಗಿಲ್ಲ ಎಂದು ಜಿಲ್ಲಾ ಹೆಚ್ಚುವರಿ ಹಾಗೂ ಸಂಚಾರಿ ನ್ಯಾಯಾಧೀಶ ಜಿ.ಎ. ಮೂಲಿಮನಿ ಹೇಳಿದರು.
ಪಟ್ಟಣದ ವಿಎಂಎಸ್ಆರ್. ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್. ಬೆಳ್ಳಿಹಾಳ ವಾಣಿಜ್ಯ ಪದವಿ-ಪೂರ್ವ ಮಹಾವಿದ್ಯಾಲಯ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹುನಗುಂದ ಮತ್ತು ಇಳಕಲ್, ಹುಬ್ಬಳ್ಳಿಯ ವರದ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಕಾಲೇಜು ಓಕ್ಕೂಟದ ಉದ್ಘಾಟನೆ, ಪ್ರಥಮ ಪಿಯುಸಿ, ವಿದ್ಯಾರ್ಥಿಗಳ ಸ್ವಾಗತ ಸಮಾರಂಭ, ವಿದ್ಯಾರ್ಥಿಗಳಿಗೆ ಕಾನೂನು ಅರಿವು-ನೆರವು ಹಾಗೂ ಪಂಚವಟಿ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಾಲೇಜು ಜೀವನ ಭವಿಷ್ಯದ ಬುನಾದಿಯಾಗಿದ್ದು, ವಿದ್ಯಾರ್ಥಿಗಳು ಸಮಯವನ್ನು ಸದುಪಯೋಗ ಪಡಿಸಿಕೊಂಡು ಗುರಿ ಸಾಧನೆಗೆ ಶ್ರಮಿಸಬೇಕು. ಶಿಕ್ಷಣ ಎಂದರೆ ಕೇವಲ ಓದು ಬರಹವಲ್ಲ, ಓದು ಬರಹ ಬರದವರು ಜಗತ್ತಿನಲ್ಲಿ ಅನೇಕ ಸಾಧನೆ ಮಾಡಿದ ನಿದರ್ಶನಗಳಿವೆ. ಕಾನೂನು ಅರಿವು ಪ್ರತಿಯೊಬ್ಬರ ಬದುಕಿನ ಅವಿಭಾಜ್ಯ ಅಂಗ ಎಂದು ಹೇಳಿದರು. ವಕೀಲರ ಸಂಘದ ಅಧ್ಯಕ್ಷ ಮಾಧವರಾವ್ ದೇಶಪಾಂಡೆ ಮಾತನಾಡಿ, ವಿದ್ಯಾರ್ಥಿಗಳು ಸಂವಿಧಾನದ ಆಶಯಗಳನ್ನು ತಿಳಿದುಕೊಳ್ಳಬೇಕು. ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಸಾಮಾಜಿಕ ಹೊಣೆಗಾರಿಕೆ ಅಳವಡಿಸಿಕೊಂಡಾಗ ಮಾತ್ರ ಆದರ್ಶ ನಾಗರಿಕರಾಗಲು ಸಾಧ್ಯಎಂದರು. ವರದಶೀ ಫೌಂಡೇಶನ ಸಂಸ್ಥಾಪಕ ಹುನಗುಂದದ ವಿಎಂಎಸ್ಆರ್ ವಸ್ತ್ರದ ಕಾಲೇಜಿನಲ್ಲಿ ಜರುಗಿದ ಕಾಲೇಜು ಓಕ್ಕೂಟದ ಕಾರ್ಯಕ್ರಮವನ್ನು ಹೆಚ್ಚುವರಿ ಜಿಲ್ಲಾ ಹಾಗೂ ಸಂಚಾರಿ ನ್ಯಾಯಾಧೀಶ ಜಿ.ಎ.ಮೂಲಿಮನಿ ಉದ್ಘಾಟಿಸಿದರು. ಮಲ್ಲಿಕಾರ್ಜುನ ರಡ್ಡೆರ್ ಮಾತನಾಡಿ, ಪಂಚವಟಿ ಸಸ್ಯ ಅಮೃತಬಿಂದು ಮತ್ತು ಆಕ್ಸಿಜನ ಟವರ್ ಕುರಿತು ಮಾತನಾಡಿ ಆಯುರ್ವೇದ ಗಿಡಮೂಲಿಕೆಗಳಿಂದಾಗುವ ಪ್ರಯೋಜನಗಳ ಕುರಿತು ಉಪನ್ಯಾಸ ನೀಡಿದರು. ಪದವಿಪೂರ್ವ ಕಾಲೇಜು ಪ್ರಾಚಾರ್ಯ ಎಚ್.ಎಸ್. ಬೋಳಿಶೆಟ್ಟರ ಪ್ರಸ್ತಾವಿಕವಾಗಿ ಮಾತನಾಡಿದರು. ಇಳಕಲ್ ದ ಗುರುಮಹಾಂತ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಡಾ. ಮಹಾಂತೇಶ ಕಡಪಟ್ಟಿ, ನ್ಯಾಯಾಧೀಶರಾದ ಮಹಾಂತೇಶ ಮಠದ, ಪದ್ಮಾವತಿ ಮಾದಿಗ, ಇಳಕಲ್ ವಕೀಲರ ಸಂಘದ ಅಧ್ಯಕ್ಷ ಎಂ.ಎಸ್. ಹೊಸೂರ, ಪದವಿ ಕಾಲೇಜು ಪ್ರಾಚಾರ್ಯ ಎಸ್.ಆರ್. ಗೋಲಗೊಂಡ ಉಪಸ್ಥಿತರಿದ್ದರು. ಪದವಿ ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಎಸ್.ಬಿ. ಚಳಗೇರಿ ಸ್ವಾಗತಿಸಿದರು. ಎಸ್.ಎಸ್. ಮುಡಪಲದಿನ್ನಿ ಹಾಗೂ ಎಸ್.ಆರ್. ನಾಗಣ್ಣವರ ನಿರೂಪಿಸಿದರು.ಎಫ್. ಎಂ. ರಾಮವಾಡಗಿ ವಂದಿಸಿದರು.
- ಕರುನಾಡ ಕಂದ ಸುದ್ದಿ




















