
ಕೊರಟಗೆರೆ. ತಾಲೂಕಿನ ಇತಿಹಾಸ ಪ್ರಸಿದ್ಧಿ ತಪೋಭೂಮಿ ಸಿದ್ದಿ ಪುರುಷರ ಸಿದ್ದೇಶ್ವರ ಸ್ವಾಮಿಯ ಕ್ಷೇತ್ರದಲ್ಲಿ ಇಂದು ಶ್ರೀಗಳ ಹುಟ್ಟು ಹಬ್ಬದ ದಿನವನ್ನು ಹಬ್ಬದ ದಿನವಾಗಿ ಆಚರಣೆ ಮಾಡಲಾಯಿತು. ಶ್ರೀಗಳ ಮಾರ್ಗದರ್ಶನದಲ್ಲಿ ಸರಳವಾಗಿ ಸುಂದರ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮುಖಾಂತರ ಪ್ರಾರಂಭಿಸಲಾಯಿತು.
ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿ ಒಂದು ಮಠವನ್ನು ಕಟ್ಟುವಂತ ಕೆಲಸವನ್ನ ಮಾಡಿಲ್ಲಾ ಒಂದು ಮನಸ್ಸನ್ನ ಕಟ್ಟುವಂತ ಕೆಲಸ ಮಾಡಿದ್ದಾರೆ . ಶ್ರೀಗಳು ಕ್ಷೇತ್ರದ ಎಲ್ಲಾ ವರ್ಗದ ಜಾತಿಯ ಭೇದವಿಲ್ಲದೆ ತಾಯಿ ಹೃದಯದಿಂದ ಬಂದ ಸದ್ಭಕ್ತರಿಗೆ ಆಶೀರ್ವದಿಸಿ ಇಂದು ಕ್ಷೇತ್ರದ ಕಳಶವಾಗಿ ರಾಜ್ಯಕ್ಕೆ ಸಿದ್ದರಬೆಟ್ಟ ಕ್ಷೇತ್ರವು ಪ್ರಸಿದ್ಧಿ ಪಡೆಯುವಂತೆ ಮಾಡಿರುವ ಸಿದ್ದಿಪುರುಷರು ಶ್ರೀ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಯವರು ಎಂದರೆ ತಪ್ಪಾಗಲಾರದು.
ಈ ಭಾಗದ ಬಡವರ ಅನುಕೂಲಕ್ಕಾಗಿ ಒಂದು ಸಮುದಾಯ ಭವನ.
ಸುಮಾರು ಒಂದೂವರೆ ವರ್ಷಗಳಲ್ಲಿ ಸಿದ್ದರಬೆಟ್ಟ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿ ಮಠದ ಆವರಣದಲ್ಲಿ ಸುಮಾರು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ ಕೊಡುತ್ತೇನೆ ಎಂದು ಹೇಳಿದ ಕೊರಟಗೆರೆ ತಾಲ್ಲೂಕಿನ ಕೋಳಾಲ ಕ್ಷೇತ್ರ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಕ್ಷೇತ್ರ ಜನರ ನೆಚ್ಚಿನ ನಾಯಕ ಯಾರಿಗೆ ಎಷ್ಟೇ ಕಷ್ಟದಲ್ಲಿದ್ದರೂ ತಕ್ಷಣವೇ ಅವರ ಕಷ್ಟಗಳಿಗೆ ಸ್ಪಂದಿಸುವ ಆಪತ್ಬಾಂಧವ ಯುವ ಪೀಳಿಗೆಯ ಜನನಾಯಕ ಪಿಎನ್ ಕೃಷ್ಣಮೂರ್ತಿ ರವರು..
ಪಿ ಎನ್ ಕೃಷ್ಣಮೂರ್ತಿ ಮಾತನಾಡಿ ಈ ಒಂದು 45ನೇ ವರ್ಷದ ವದಂತಿ ಅಂಗವಾಗಿ ವೀರಭದ್ರ ಶಿವಾಚಾರ್ಯ ಪಾದಗಳಿಗೆ ನಮಿಸುತ್ತಾ ಈ ಪುಣ್ಯಕ್ಷೇತ್ರದಲ್ಲಿ ಇಬ್ಬರು ಸ್ವಾಮೀಜಿಗಳು ಯಾರೇ ಎಲ್ಲಿಗೆ ಕರೆದರೂ ಯಾವ ಜಾತಿ ಭೇದವನ್ನು ಕೇಳದೆ ಇಬ್ಬರೂ ಒಟ್ಟಿಗೆ ಹೋಗಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುತ್ತಾರೆ.
ವರ್ಷ ವರ್ಷ ಹೆಚ್ಚಿನದಾಗಿ ನವ ವಧುಗಳು ಈ ಕ್ಷೇತ್ರಕ್ಕೆ ಬಂದು ವಿವಾಹವಾಗುತ್ತಿದ್ದಾರೆ. ಅದಕ್ಕೆ ಜಗದ್ಗುರು ರೇಣುಕಾ ಶಿವಾಚಾರ್ಯರ ಆಶೀರ್ವಾದ ಇದೆ. ಇದೇ ಆವರಣದಲ್ಲಿ ಒಂದು ದೊಡ್ಡ ಮಟ್ಟದ ಸಮುದಾಯ ಭವನ ( ಕಲ್ಯಾಣ ಮಂಟಪ) ಕ್ಷೇತ್ರದ ಬಡವರು ಸಾರ್ವಜನಿಕರು ಉಚಿತವಾಗಿ ಸ್ವಾಮೀಜಿ ಅವರ ಸಮ್ಮುಖದಲ್ಲಿ ವಿವಾಹ ಮಾಡಿಕೊಳ್ಳುವ ಕುಟುಂಬಗಳಿಗೆ ಅನುಕೂಲವಾಗಲೆಂದು. ನಮ್ಮ ಗುರುಗಳನ್ನು ಕರೆಸಿ ಇದೇ ವರ್ಷ ಶ್ರಾವಣ ಮಾಸದಲ್ಲಿ ಗುದ್ದಲಿ ಪೂಜೆಯನ್ನು ನಡೆಸಿ ಒಂದುವರೆ ವರ್ಷದಲ್ಲಿ ಇಲ್ಲಿ ಒಂದು ಸಮುದಾಯ ಭವನವನ್ನು ನಿರ್ಮಿಸಬೇಕೆಂದು ನನ್ನ ಮನಸ್ಸಿನಲ್ಲಿ ಆಸೆ ಇದೆ ಎಂದು ಹೇಳಿದರು.
45ನೇ ವರ್ಷದ ವರ್ಧಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಪಾರ ಭಕ್ತಾದಿಗಳ ತಿಳಿಸಿದರು. ಶ್ರೀಗಳ ಪರಿಶುದ್ಧವಾದ ಅವರ ಆಶೀರ್ವಾದವೂ ವಿದ್ಯೆ, ಧ್ಯಾನ, ಆಹಾರ ಕ್ಷೇತ್ರಗಳಲ್ಲಿ ಅಪಾರವಾಗಿದ್ದು. ಈ ಸೇವಾ ಕಾರ್ಯಗಳು ಮುಂದೆ ದೊಡ್ಡಮಟ್ಟದಲ್ಲಿ ಬೆಳೆದು ಭಕ್ತರ ಸಂಖ್ಯೆ ಹೆಚ್ಚಾಗಿ ಸಿದ್ಧರಬೆಟ್ಟದ ಸಿದ್ದೇಶ್ವರರ ಆಶೀರ್ವಾದ ಪಡೆಯಲು ಸದಾ ಸಿದ್ದರಾಗಿರುತ್ತೇವೆ ನಮ್ಮಿಂದ ಮಠಕ್ಕೆ ಯಾವುದೇ ಸಹಾಯ ಬೇಕಿದ್ದರೂ ಮಾಡುವುದಾಗಿ ಪಿಎನ್ ಕೃಷ್ಣಮೂರ್ತಿಯವರು ಹೇಳಿದರು.
ಕಾರ್ಯಕ್ರಮದಲ್ಲಿ ಶಶಿ ಹುಲಿಕುಂಟೆ ಮಠ ಮಾತನಾಡಿ ಶ್ರೀಗಳ ಆಶೀರ್ವಾದ ಜಿಲ್ಲೆಯ ಎಲ್ಲಾ ಸದ್ಭಕ್ತರಿಗೂ ದೊರೆಯಲಿ. ಅವರ ಮಾರ್ಗದರ್ಶನವು ನಮಗೆ ಮುಂದಿನ ದಾರಿಯಾಗಿ ನಾವು ಬೆಳೆಯಲು ಸಹಕಾರಿಯಾಗುತ್ತದೆ. ಶ್ರೀಗಳ ಮಾರ್ಗದರ್ಶನವು ನಮ್ಮಗಳ ದಾರಿಗೆ ಸೂರ್ಯನಂತೆ ಬೆಳಕು ತೋರುವ ಪ್ರಬುದ್ಧ ಮಾರ್ಗದರ್ಶಕರಾಗಿದ್ದಾರೆ. ಮುಂದೆ ಮಠದಲ್ಲಿ ವಿದ್ಯಾಭ್ಯಾಸಕ್ಕಾಗಿ ಒಂದು ಶಾಲೆಯನ್ನು ನಿರ್ಮಿಸಿ ಕೊಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು ಶ್ರೀಗಳಿಗೆ ವದಂತಿಯ ಶುಭಾಶಯಗಳು ತಿಳಿಸಿ ಆಶೀರ್ವಾದವನ್ನು ಪಡೆದರು.
ಶ್ರೀಗಳ ವರ್ಧಂತಿ ಕಾರ್ಯಕ್ರಮದಲ್ಲಿ ಪಿಎನ್ ಕೃಷ್ಣಮೂರ್ತಿಯವರು, ಶಶಿ ಹುಲಿಕುಂಟೆಮಠ ,ರುದ್ರೇಶ್ ಬಿಜೆಪಿ ತಾಲೂಕು ಅಧ್ಯಕ್ಷರು ,ಕಾಮರಾಜು ಜೆಡಿಎಸ್ ತಾಲೂಕ್ ಅಧ್ಯಕ್ಷರು, ಪರ್ವ ಗ್ರೂಪ್ ಸಂಸ್ಥಾಪಕರಾದ ನೀಲೇಶ್, ದರ್ಶನ್, ಬದ್ರಣ್ಣ ,ರೋಟರಿಯಾನ್ ಸದಸ್ಯರು ಭಾಗಿಯಾಗಿದ್ದರು.
ವರದಿ. ಪ್ರಸನ್ನಕುಮಾರ್. ಎಸ್. ಕೊರಟಗೆರೆ




















