ಬೆಂಗಳೂರು : ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ಅಕ್ರಮದ ವಿರುದ್ಧ ವಿದ್ಯಾರ್ಥಿಗಳು ನಡೆಸಿದ್ದ ಪ್ರತಿಭಟನೆ ಅಂತ್ಯವಾಗುತ್ತಿದ್ದಂತೆಯೇ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತೆ ಮುನ್ನೆಲೆಗೆ ಬಂದಿದ್ದು, ಹೈಕಮಾಂಡ್ ಬುಲಾವ್ ಮೇರೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ದೆಹಲಿಗೆ ತೆರಳುತ್ತಿದ್ದು, ಬುಧವಾರ ಸಂಪುಟ ವಿಸ್ತರಣೆಯಾಗು
ವುದು ಬಹುತೇಕ ನಿಶ್ಚಿತ.
ಕಳೆದ ಸೋಮವಾರ ದೆಹಲಿಯಲ್ಲಿ ಸಂಪುಟ ವಿಸ್ತರಣೆ ಚರ್ಚೆ ನಿಗದಿಯಾಗಿತ್ತಾದರೂ ನೀಟ್ ಅಕ್ರಮದ ವಿರುದ್ಧ ವಿದ್ಯಾರ್ಥಿಗಳ ಚಳವಳಿ ಭುಗಿಲೆದ್ದು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಸಹ ಹೋರಾಟದಲ್ಲಿ ಭಾಗಿಯಾಗಿದ್ದರಿಂದ ಸಂಪುಟ ವಿಸ್ತರಣೆ ಚರ್ಚೆಗಳು ಮುಂದಕ್ಕೆ ಹೋಗಿದ್ದವು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯಿಂದ ವಿದ್ಯಾರ್ಥಿಗಳ ಪ್ರತಿಭಟನೆ
ಮುಗಿದಿದ್ದು, ಕಾಂಗ್ರೆಸ್ ವರಿಷ್ಠರು ಈಗ ರಾಜ್ಯ ಸಚಿವ ಸಂಪುಟ ವಿಸ್ತರಣೆ ಚರ್ಚೆಗೆ ಮನಸ್ಸು ಮಾಡಿದ್ದಾರೆ. ಹಾಗಾಗಿ ದೆಹಲಿಗೆ ಬರುವಂತೆ ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ.
ಎರಡು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ಸಂಘ ಟನೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ರವರು ಯಾವುದೇ ಕ್ಷಣದಲ್ಲಿ ಸಂಪುಟ ವಿಸ್ತರಣೆಯಾಗ ಬಹುದು ಎಂದು ಹೇಳಿದ್ದರು. ಇವರ ಜತೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಷ್ಟೇ ಬಾಕಿಯಿದ್ದು, ಸಚಿವರ ಪಟ್ಟಿ ಬಹುತೇಕ ಅಂತಿಮಗೊಂಡಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಈ ಬಗ್ಗೆ ಹೈಕಮಾಂಡ್‌ಗೆ ಈಗಾಗಲೇ ಪಟ್ಟಿ ನೀಡಿದ್ದಾರೆ. ಹೈಕಮಾಂಡ್ ಈ ಇಬ್ಬರು ನಾಯಕರ ಪಟ್ಟಿಯನ್ನು ಗಮ ನದಲ್ಲಿಟ್ಟುಕೊಂಡು ತನ್ನದೇ ಆದ ಒಂದು ಪಟ್ಟಿಯನ್ನು ಸಿದ್ಧಿದಗೊಳಿಸಿದೆ.
ಸಚಿವರ ಪಟ್ಟಿಯ ಬಗ್ಗೆ ಚರ್ಚೆಗಳು ನಡೆದು ಕೆಲವೊಂದು ಹೆಸರುಗಳ ಸೇರ್ಪಡೆ, ತೆಗೆದು ಹಾಕುವಿಕೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ನೂತನ ಸಚಿವರುಗಳ ಪಟ್ಟಿಯನ್ನು ರಾಹುಲ್ ಗಾಂಧಿಯವರ ಗಮನಕ್ಕೆ ತಂದು ಪಟ್ಟಿಯನ್ನು ಹೈಕಮಾಂಡ್ ಪ್ರಕಟಿಸಲಿದೆ.ಬುಧವಾರ ಬೆಳಿಗ್ಗೆಯೇ ರಾಜಭವನದಲ್ಲಿ ನೂತನ ಸಚಿವರ ಪದಗ್ರಹಣ ನಡೆಯುವುದು ಬಹುತೇಕ ಖಚಿತ.
ಶಾಸಕರು ದೆಹಲಿಗೆ ದೌಡು :
ಸಚಿವ ಸಂಪುಟ ವಿಸ್ತರಣೆಯ ಸಂಬಂಧ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರ ಜತೆ ಸಭೆ ನಡೆಸುವುದು ಖಚಿತವಾಗುತ್ತಿದ್ದಂತೆಯೇ 20ಕ್ಕೂ ಹೆಚ್ಚು ಸಚಿವಾಕಾಂಕ್ಷಿ ಶಾಸಕರುಗಳು ಈಗಾಗಲೇ ದೆಹಲಿಗೆ ದೌಡಾಯಿಸಿದ್ದಾರೆ.
ಶತಾಯ-ಗತಾಯ ಸಚಿವ ಸ್ಥಾನ ಪಡೆಯಲೇಬೇಕು ಎಂಬ ಉಮೇದಿನಲ್ಲಿರುವ ಶಾಸಕರುಗಳು ಈಗಾಗಲೇ ಹಲವು ಬಾರಿ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ.
ನಾಳೆ ಸಂಪುಟ ವಿಸ್ತರಣೆಯ ಅಂತಿಮ ಹಂತದ ಚರ್ಚೆಗಳು ನಡೆದು ಸಚಿವರ ಪಟ್ಟಿ ಬಹುತೇಕ ಅಂತಿಮಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಚಿವಾ ಕಾಂಕ್ಷಿ ಶಾಸಕರುಗಳು ಇಂದು ದೆಹಲಿಗೆ ತೆರಳಿದ್ದು, ಹೈಕಮಾಂಡ್ ಮಟ್ಟದಲ್ಲಿ ತಮ್ಮ ಗಾಡ್ ಫಾದರ್‌ಗಳ ಮೂಲಕ ಲಾಬಿ ನಡೆಸಿ ಸಚಿವ ಸ್ಥಾನಕ್ಕಾಗಿ ಕಸ ರತ್ತು ನಡೆಸಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷಿಗಳಾಗಿ ರುವ ಶಾಸಕರುಗಳಾದ ವಿಜಯಾ ನಂದ ಕಾಶಪ್ಪನವರ್, ಎಸ್.ಎಸ್. ಪಾಟೀಲ್, ಅಶೋಕ್ ಪಟ್ಟಣ, ಬಸವರಾಜರಾಯರೆಡ್ಡಿ, ಪಾಟೀಲ್,ಗುಬ್ಬಿ ಶ್ರೀನಿವಾಸ್, ಪಿ. ನರೇಂದ್ರ ಸ್ವಾಮಿ, ಶಿವಾನಂದ ಪಾಟೀಲ್, ಚೆಲುವರಾ ಯಸ್ವಾಮಿ. ಎನ್.ಎ. ಹ್ಯಾರೀಸ್, ರಿಜ್ವಾನ್ ಹರ್ಷದ್, ಬಾಲಕೃಷ್ಣ, ಪುಟ್ಟರಂಗಶೆಟ್ಟಿ, ಆನೇಕಲ್ ಶಿವಣ್ಣ, ಬಸವರಾಜ ನೀಲಣ್ಣ ಶಿವಣ್ಣನವರ್, ಲಕ್ಷ್ಮಣ ಸವದಿ, ಜೆ. ಎನ್. ಗಣೇಶ, ಹಂಪನಗೌಡ ಬಾದ ರ್ಲಿ,ಬಸವನಗೌಡ ದದ್ದಲ್ ಸೇರಿದಂತೆ 15ಕ್ಕೂ ಹೆಚ್ಚು ಶಾಸಕರು ದೆಹಲಿಗೆ ತೆರಳಿದ್ದು, ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಬಯ್ಯಾಪುರ, ಎ. ವಸಂತಕುಮಾರ್, ಸುಧಾಮ್ ದಾಸ್,ಮಂಜು ನಾಥ್ ಭಂಡಾರಿ, ಎಂ ಆರ್ ಸೀತಾರಾಮ್ ಸೇರಿದಂತೆ ಹಲವು ವಿಧಾನ ಪರಿಷತ್ ಸದಸ್ಯರು ದೆಹಲಿಗೆ ತೆರಳಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















