ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರು ಗ್ರಾಮದ ಸರಕಾರಿ ಶತಮಾನ ಶಾಲೆಯ ಗೌರವ ಶಿಕ್ಷಕ, ನಿರೂಪಕ, ಸಂಪನ್ಮೂಲ ವ್ಯಕ್ತಿ ಎಸ್. ರಾಮಪ್ಪ ಅವರ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ವಿಜಯನಗರ ಜಿಲ್ಲೆ ಹೊಸಪೇಟೆ
ಚಿತ್ತವಾಡಿಗೆಯ ಅತ್ಯುತ್ತಮ ಸಂಘಟನಾ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಸೇವಾ ಸಂಸ್ಥೆ ಸಂಗೀತ ಭಾರತಿ ವತಿಯಿಂದ 415ನೇ ಮಾಸಿಕ ಚಿಂತನ ಸಂಭ್ರಮ ಕಾರ್ಯಕ್ರಮದಲ್ಲಿ ಸಂಗೀತ ಭಾರತಿ ಸಮಾಜ ಸೇವಾ ಭಾರ್ಗವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಂತರ ಪ್ರಶಸ್ತಿ ಸ್ವೀಕರಿಸಿ ಎಸ್. ರಾಮಪ್ಪ ಮಾತನಾಡಿ, ಸಂಸ್ಥೆಯ ವ್ಯವಸ್ಥಾಪಕರಾದ ಎಚ್. ಪಿ. ಕಲ್ಲಂಭಟ್, ಅವರು ಎಲೆಮರೆಕಾಯಿಯಂತಿರುವ ಸಾಧಕರನ್ನು ಗುರುತಿಸಿ, ಪ್ರಶಸ್ತಿ ನೀಡುತ್ತಿರುವುದು ಪ್ರಶಂಶನೀಯವಾದುದು, ನನ್ನ ಸಾಧನೆ ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತಸದೊಂದಿಗೆ ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡಲು ಪ್ರೇರಣೆ ನೀಡಿದೆ ಎಂದರು.
ಈ ಸಂದರ್ಭದಲ್ಲಿ ಸಂಗೀತ ಭಾರತೀಯ ವ್ಯವಸ್ಥಾಪಕರಾದ ಎಚ್. ಪಿ. ಕಲ್ಲಂಭಟ್, ರೈತಪರ ಹೋರಾಟಗಾರರಾದ ಬಸವರಾಜ್ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















