
ಕೊಟ್ಟೂರು : ಪಟ್ಟಣದ ತಾಲೂಕು ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಕುವುದರ ಮೂಲಕ ಜಯಂತಿ ಆಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರರಾದ ಎಂ. ಪ್ರತಿಭಾ ಇವರು ಮಾತನಾಡಿ ಅಪ್ಪಣ್ಣನವರು, 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಗುರುತಾಗಿದ್ದ ಅನುಭವ ಮಂಟಪದ ರೂವಾರಿ ವಿಶ್ವಗುರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಅಪ್ಪಣ್ಣನವರು ಪ್ರಮುಖ ಶರಣರಾಗಿದ್ದು, ಪ್ರಾಮಾಣಿಕ ಕಾಯಕ ಮತ್ತು ದಾಸೋಹದ ಮಹತ್ವದ ಬಗ್ಗೆ ತಮ್ಮ ವಚನಗಳ ಮೂಲಕ ತಿಳಿಸಿದ್ದಾರೆ. ಸುಮಾರು 250 ವಚನಗಳು ಲಭ್ಯವಿದ್ದು, ಇವರ ಪತ್ನಿ ಲಿಂಗಮ್ಮನು ಸಹಾ ವಚನಗಳನ್ನು ರಚಿಸಿದ್ದಾರೆ.
ಅಂದು ಸಮಾಜದಲ್ಲಿದ್ದ ಮೂಢ ನಂಬಿಕೆಯನ್ನು ಹೋಗಲಾಡಿಸಲು ಬಸವಣ್ಣನವರು ತಮ್ಮನ್ನು ಭೇಟಿಯಾಗಲು ಯಾರಾದರೂ ಬಂದರೆ ಮೊದಲು ಅಪ್ಪಣ್ಣನನ್ನು ನೋಡಿಕೊಂಡು ಬರುವಂತೆ ತಿಳಿಸುತ್ತಿದ್ದರು. ಒಬ್ಬ ಕಾರ್ಯದರ್ಶಿ ಹೇಗಿರಬೇಕೆನ್ನುವುದಕ್ಕೆ ಅಪ್ಪಣ್ಣನವರು ಉದಾಹರಣೆಯಾಗಿದ್ದರು. ಇಂತಹ ಶಿವ ಶರಣರು ತಮ್ಮ ಬದುಕಿನ ಮೂಲಕ, ವಚನಗಳ ಮೂಲಕ ಸಮಾಜಕ್ಕೆ ನೀಡಿದ ಸಂದೇಶಗಳನ್ನು ನಾವು ಪಾಲಿಸಿಕೊಂಡು ಹೋಗಬೇಕು ಎಂದರು.
ಕಾರ್ಯಕ್ರಮದಲ್ಲಿ ಹಡಪದ ಸಮಾಜದ ಮುಖಂಡರಾದ ಅಪ್ಪಾಜಿ, ಗುರುಬಸವರಾಜ, ವಿಕ್ರಮ, ಚನ್ನಪ್ಪ, ನಾಗರಾಜ, ಬಸವರಾಜ, ಅಜ್ಜಯ್ಯ, ರವಿ ಕುಮಾರ ಇಸಿಒ ಸಿ ನಿಂಗಪ್ಪ, ಗ್ರಾಮ ಆಡಳಿತ ಅಧಿಕಾರಿ ಹರೀಶ ಮುಂತಾದವರು ಇದ್ದರು. ಸಿ. ಮ. ಗುರುಬಸವರಾಜ ಸ್ವಾಗತಿಸಿ ನಿರೂಪಿಸಿದರು.
ವರದಿ: ಕೆ. ಗೋಣೆಪ್ಪ




















