
ಕರ್ನಾಟಕ ಸರಕಾರ ಪುಸ್ತಕ ಪ್ರಾಧಿಕಾರದ 2025ನೇ ಸಾಲಿನ ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಭಾಜನರಾಗಿರುವ ಪೂಜ್ಯ ಶ್ರೀ ಡಾ.ಚನ್ನವೀರ ಶಿವಾಚಾರ್ಯರು, ಹಾರಕೂಡ ಪೂಜ್ಯರಿಗೆ ಚಿಂಚೋಳಿಯಲ್ಲಿ ಗುರುಪೂರ್ಣಿಮೆಯಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ವೇದಿಕೆ ವತಿಯಿಂದ ಪೂಜ್ಯರಿಗೆ ಅಭಿನಂದನಾ ಪತ್ರ, ಸ್ಮರಣಿಕೆ ನೀಡಿ ಸತ್ಕರಿಸಿ ಗೌರವಿಸಲಾಯಿತು.
ಕನ್ನಡ ಸಾಹಿತ್ಯಕ್ಕೆ ಹಾರಕೂಡ ಮಠದ ಸೇವೆ ಅಮೂಲ್ಯವಾಗಿದೆ.
ಶ್ರೀ ಮಠದ ವತಿಯಿಂದ ಹಲವಾರು ಮೌಲಿಕ ಕನ್ನಡ ಗ್ರಂಥಗಳು ಹೊರಬಂದಿವೆ. ಶ್ರೀಗಳ ಕನ್ನಡ ಸೇವೆ ಗುರುತಿಸಿ, ಜಿ.ಪಿ.ರಾಜರಾತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ ನೀಡಿರುವುದಕ್ಕೆ ಕರ್ನಾಟಕ ಸರಕಾರಕ್ಕೆ ಅಭಿನಂದಿಸುತ್ತೇನೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಪಾಲಾಮೂರ್ ಹೇಳಿದರು.
ಈ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಬಸವರಾಜ ಐನೋಳಿ, ಕದಳಿ ವೇದಿಕೆಯ ತಾಲೂಕಾ ಅಧ್ಯಕ್ಷರಾದ ಶ್ರೀಮತಿ ಗೀತಾರಾಣಿ ಐನೋಳಿ, ಶ್ರೀಮತಿ ಶಾಮಲಾ ಮಠಪತಿ, ವೀರೇಶ ಎಂಪಳ್ಳಿ, ಸುಭಾಸ ಸೀಳಿನ ಮುಂತಾದವರು ಉಪಸ್ಥಿತರಿದ್ದರು.
- ಕರುನಾಡ ಕಂದ ಸುದ್ದಿ




















