ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಉದ್ಯೋಗಕ್ಕಾಗಿ ಬೇರೆಯವರನ್ನು ಆಶ್ರಯಿಸುವ ಬದಲು, ತಾವೇ ಬಿಸಿನೆಸ್ ಮಾಲೀಕರಾಗಿ : ರಾಘವೇಂದ್ರ ಕೆ.

ಬಳ್ಳಾರಿ / ಕಂಪ್ಲಿ : ಗ್ರಾಮೀಣ ಮತ್ತು ನಗರ ಪ್ರದೇಶಗಳ ನಿರುದ್ಯೋಗಿ ಯುವಕ-ಯುವತಿಯರು ಹಾಗೂ ಮಹಿಳೆಯರಲ್ಲಿ ಉದ್ಯಮಶೀಲತೆಯ ಅರಿವು ಮೂಡಿಸಿ, ಅವರು ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಅಗತ್ಯವಿರುವ ಮಾರ್ಗದರ್ಶನ ಮತ್ತು ಧೈರ್ಯವನ್ನು ನೀಡುವ ತರಬೇತಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ನ ಕಾರ್ಯಕ್ರಮವಾಗಿದೆ.
ಆರ್ಥಿಕ ಸಂಕಷ್ಟಕ್ಕೆ ದುಡಿಮೆಯೇ ಮದ್ದು ಎನ್ನುವುದನ್ನು ಮಹಿಳೆಯರು ಅರಿತುಕೊಳ್ಳಬೇಕು ಎಂದು ಇಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಯೋಜನಾಧಿಕಾರಿ ರಾಘವೇಂದ್ರ ಹೇಳಿದರು. ಅವರು ಎಮ್ಮಿಗನೂರು ಸಾವಿತ್ರಿಬಾಯಿಫುಲೆ ಜ್ಞಾನ ವಿಕಾಸ ಕೇಂದ್ರದ ಸ್ವ- ಉದ್ಯೋಗ ಪ್ರೇರಣಾ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಲಿಗೆ ಯಂತ್ರ ಬಳಸಿಕೊಂಡು ಕೌಶಲದಿಂದ ನಾನಾ ವಸ್ತಗಳನ್ನು ತಯಾರಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮುಂದಾಗಬೇಕು ಎಂದರು.

ಗ್ರಾಮದ 50 ಜನ ಮಹಿಳೆಯರಿಗೆ ಬಟ್ಟೆ ಚೀಲ, ಬಟ್ಟೆ ಹೂ ತಯಾರಿಸುವ ಕೌಶಲವನ್ನು ತರಬೇತುದಾರರಾದ ಅರಳಿ ಸುಧಾ, ರಾಮುಲಮ್ಮ ಕಲಿಸಿಕೊಟ್ಟರು. ಗ್ರಾಮದ ಪ್ರಮುಖ ಶಾಶ್ವತ ರೆಡ್ಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೇಂದ್ರದ ಅಧ್ಯಕ್ಷೆ ಬನಶಂಕರಿ, ಸಮನ್ವಯ ಅಧಿಕಾರಿ ಆರ್.ಎನ್.ಮಂಜುಳಾ, ಮೇಲ್ವಿಚಾರಕ ಈಶ್ವರ್, ಪ್ರಮುಖರಾದ ರಾಘವೇಂದ್ರ, ರಾಮಪ್ಪ ಇತರರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!