ಮಂಗಳೂರು: ಕವಿ, ಸಾಹಿತಿ ವಿ.ಸೀತಾಲಕ್ಷ್ಮೀವರ್ಮ ವಿಟ್ಲ ಅರಮನೆ ಇವರಿಗೆ ಅಭಿನಂದನೆ.
ಕನ್ನಡ ಪುಸ್ತಕ ಪ್ರಾಧಿಕಾರ ವಾರ್ಷಿಕ ಪ್ರಶಸ್ತಿಗೆ ಕವಿ,ಸಾಹಿತಿ ವಿ.ಸೀತಾಲಕ್ಷ್ಮೀವರ್ಮ ವಿಟ್ಲ ಅರಮನೆ ಇವರ ಬೊಗಸೆ ಒಳಗಿನ ಚುಟುಕು ಸಾಗರ ಕೃತಿ ಆಯ್ಕೆ ಆಗಿರುತ್ತದೆ. ರೂಪಾಯಿ ಆರು ಸಾವಿರ ನಗದು ಒಳಗೊಂಡಿರುವುದಾಗಿದೆ ಎಂಬುದಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾಕ್ಟರ್.ಮಾನಸರವರು ತಿಳಿಸಿರುತ್ತಾರೆ. ಮೈಸೂರು ಕೇಂದ್ರ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಪ್ರಧಾನ ಸಂಚಾಲಕರಾದ ಡಾಕ್ಟರ್.ಎಂ.ಜಿ.ಆರ್ ಅರಸು ಇವರು ಸುಮಾರು ಎರಡೂವರೆ ದಶಕಗಳಿಂದ ಚುಟುಕು ಸಾಹಿತ್ಯವನ್ನು ಶ್ರೀಮಂತ ಮಾಡಲು ಮಾಡಿರುವ ಶ್ರಮ ಅಪಾರ. ಇದೀಗ ಕೇಂದ್ರ ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಯನ್ನು ಕರ್ನಾಟಕ ಸರಕಾರದ ಪುಸ್ತಕ ಪ್ರಾಧಿಕಾರ ಗಮನಿಸಿದೆ. ಡಾಕ್ಟರ್ ಎಂ.ಜಿ.ಆರ್ ಅರಸು ಮೈಸೂರು ರವರ ಶ್ರಮಕ್ಕೆ ಸಂದ ಗೌರವ ಆಗಿದೆ. ಪ್ರತಿ ವರುಷ ಚುಟುಕು ಸಾಹಿತ್ಯ ಪರಿಷತ್ತಿನ ಒಬ್ಬರು ಪುರುಷರಿಗೆ ಮತ್ತು ಒಬ್ಬರು ಮಹಿಳೆಯವರ ಆಯ್ಕೆ ಆದ ಕೃತಿಗೆ ನಗದು ಹಣ ಸಿಗಲಿದೆ. ಪುಸ್ತಕ ಪ್ರಾಧಿಕಾರಕ್ಕೂ ಡಾಕ್ಟರ್ ಎಂ.ಜಿ.ಆರ್ ಅರಸು ಮೈಸೂರು ಇವರಿಗೂ ಅನೇಕ ಕೃತಿ ರಚನೆ ಮಾಡಿರುವ ಕವಿ ,ಸೀತಾಲಕ್ಷ್ಮೀವರ್ಮ ವಿಟ್ಲ ಅರಮನೆ ಇವರಿಗೂ ತುಂಬು ಹೃದಯದ ಅಭಿನಂದನೆಯನ್ನು ದ. ಕ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಗೌರವ ಅಧ್ಯಕ್ಷರಾದ ಇರ ನೇಮೂ ಪೂಜಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















