ಅನಾನಸ್ ಹಣ್ಣಿನ ಪಕಳೆಗಳಲಿ ಅರಳಿರುವ ಕಲೆ
ಸೃಜನಶೀಲ ಸುಲಲಿತ ಚಿತ್ತಾರದಿ ವಿನೂತನ ಬಲೆ
ಓದುಗ ಸುಮನಗಳಿಗಿದೊ ಕಾವ್ಯದಾ ಸಂಕೋಲೆ
ತರುತಿದೆ ಕಲಾರಾಧಕರಲ್ಲಿಗೆ ಸಂಭ್ರಮದ ಅಲೆ
ಎಂದಿನಂತೆ ಸ್ಪಂದಿಸುತ ಸಾಗೋಣ ಜೊತೆ ಜೊತೆಯಲೆ
ಆಸ್ವಾದಿಸುತ ತೊಡಗಿಸಿಕೊಳ್ಳೋಣ ಖುಷಿ ಖುಷಿಯಲೆ
ಸಾಧನೆಯ ಹಾದಿಯಲಿ ದಾವಿಸೋಣ ಅವಕಾಶಗಳತ್ತಲೆ
ಸದುಪಯೋಗ ಪಡಿಸಿಕೊಳ್ಳೋಣ ಜಯ ವಿಜಯಗಳಲೆ
- ಲಲಿತಾ ಕೆ ಆಚಾರ್, ಬೆಂಗಳೂರು




















