ಶಿವಮೊಗ್ಗ : ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಮಾರ್ನಾಮಿಬೈಲ್ ಕಿರುಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪತ್ರಕರ್ತ ಹಾಗೂ ಲೇಖಕರಾದ ಗಾರಾ.ಶ್ರೀನಿವಾಸ್ ತಿಳಿಸಿದ್ದಾರೆ
ಕಳೆದ ೨೧ ವರುಷಗಳಿಂದ ಪತ್ರಿಕಾ ವಲಯದಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಾಮಾಜಿಕ ಸೇವೆ, ಸಾಹಿತ್ಯ, ಸಿನಿಮಾ, ಮಾರುಕಟ್ಟೆ ಹೀಗೆ ಬಹುತ್ವ ಹಾದಿಗಳನ್ನ ಒಳಗೊಂಡ ಗಾರಾ ಗ್ರೂಪ್ ಎಂಬುವ ಸಂಸ್ಥೆಯ ಮೊದಲ ಹೆಜ್ಜೆಯ ಮುನ್ನುಡಿಯಾಗಿ ಹೊಸ ತಲೆಮಾರಿನ ಸಾಂಸ್ಕೃತಿಕ ಪ್ರಯತ್ನಕ್ಕೆ ಮಾರ್ನಾಮಿಬೈಲ್ ಕಿರುಚಿತ್ರೋತ್ಸವ ವೇದಿಕೆಯನ್ನು ರೂಪಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ,
ಈ ಕಾರ್ಯಕ್ರಮವನ್ನು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಚೆನ್ನಬಸಪ್ಪ (ಚೆನ್ನಿ) ಅವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ.ಜಿ, ಶಿವಮೊಗ್ಗ ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರಾದ ಎಂ.ಶ್ರೀಕಾಂತ್, ಕೃಷಿಕರಾದ ಎಸ್.ವಿ ದಯಾನಂದ್, ಪ್ರವೀಣ್ ಕುಮಾರ್ ಶೆಟ್ಟಿ ಬಣದ ಕರವೇ ಜಿಲ್ಲಾ ಉಪಾಧ್ಯಕ್ಷರಾದ ಎಂ.ಪರಮೇಶ್ ಅವರು ಆಗಮಿಸಲಿದ್ದಾರೆ.
ಈ ಮಾರ್ನಾಮಿಬೈಲ್ ಕಿರುಚಿತ್ರೋತ್ಸವದ ತೀರ್ಪುದಾರರಾಗಿ ಚಲನಚಿತ್ರ ಸಾಹಸ ನಿರ್ದೇಶಕರಾದ ಡಿಫರೆಂಟ್ ಡ್ಯಾನಿ, ಪಂಚಭಾಷಾ ನಟ ಶ್ರೀನಿವಾಸ್ ಶರ್ಮಾ, ವಕೀಲರು ಹಾಗೂ ರಂಗಕರ್ಮಿಗಳಾದ ಗೀತಾ ಮಾನೆ, ಚಲನಚಿತ್ರ ನಿರ್ದೇಶಕರಾದ ಯಶೋಧರ್ ಅವರು ನಿರ್ವಹಿಸಲಿದ್ದಾರೆ ಎಂದು ಗಾರಾ.ಶ್ರೀನಿವಾಸ್ ಹೇಳಿದ್ದಾರೆ,
ಹಾಗೂ ಮಾರ್ನಾಮಿಬೈಲ್ ಕಿರುಚಿತ್ರೋತ್ಸವಕ್ಕೆ ಶಿವಮೊಗ್ಗ ನಗರದ ಕನ್ನಡಾಭಿಮಾನಿಗಳಿಗೆ, ಕಲಾ ಮನಸುಗಳಿಗೆ, ಹಾಗೂ ನಾಗರೀಕರಿಗೆ ಮುಕ್ತವಾಗಿ ಆಹ್ವಾನಿಸುತ್ತೇವೆ ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ವರದಿ : ಕೊಡಕ್ಕಲ್ ಶಿವಪ್ರಸಾದ್ , ಶಿವಮೊಗ್ಗ -ಬೆಂಗಳೂರು




















