ಬಳ್ಳಾರಿ : ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಇಂದು ನಗರದ ಆರಾಧ್ಯ ದೇವತೆ ಕನಕ ದುರ್ಗಮ್ಮ ವಿಗ್ರಹಕ್ಕೆ ಬಂಗಾರದ ಆಭರಣಗಳ ವಿಶೇಷ ಅಲಂಕಾರ ಹಾಗೂ ವಿಶೇಷ ಪೂಜೆ ನಡೆಸಲಾಗಿದೆ.
ಭಕ್ತರು ಸಹ ಬೆಳಗಿನಿಂದ ದುರ್ಗಮ್ಮ ದೇವರ ದರ್ಶನವನ್ನು ಸಾಲಿನಲ್ಲಿ ನಿಂತು ಪಡೆಯುತ್ತಿದ್ದಾರೆ.
ಹಬ್ಬದ ಅಂಗವಾಗಿ ಇಂದು ಸಂಜೆ 6.30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನವನ್ನು ದೇವಸ್ಥಾನದ ಆವರಣದಲ್ಲಿ ಹಮ್ನಿಕೊಳ್ಳಲಾಗಿತ್ತು. ಧರ್ಮಕರ್ತರೂ ಆಗಿರುವ ಮೇಯರ್ ಪಿ.ಗಾದೆಪ್ಪ ತೀರ್ವಂತೆ ಗಣ್ಯರು ಹಾಗೂ ಭಕ್ತಾದಿಗಳು ದರ್ಶನ ಭಾಗ್ಯ ಪಡೆದರು.
ವರದಿ : ಜಿಲಾನಸಾಬ್ ಬಡಿಗೇರ್




















