ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನೂತನ ವಿಧಾನಸಭಾ ಅಧ್ಯಕ್ಷರಾದ ಜಿ ಎಸ್ ಪಾಟೀಲರಿಗೆ ಅಭಿಮಾನಿಗಳಿಂದ ಗೌರವದ ಸ್ವಾಗತ

ಕರ್ನಾಟಕದ 18ನೇ ವಿಧಾನಸಭಾ ಅಧ್ಯಕ್ಷರಾದ ಶ್ರೀ ಜಿ.ಎಸ್. ಪಾಟೀಲರು ತವರಿಗೆ ಆಗಮಿಸಿದರಿಂದ ರೋಣ ಮತಕ್ಷೇತ್ರದ ಅಭಿಮಾನಿಗಳು ಹಾಗೂ ತಾಯಂದಿರು ಆರತಿ ಎತ್ತಿ ಅದ್ದೂರಿಯಾಗಿ ಗೌರವದಿಂದ ಬರಮಾಡಿಕೊಂಡರು.
ರೋಣ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಜಿ. ಎಸ್. ಪಾಟೀಲ್ ರವರು 40 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಬೆಳೆಸಿ ಜೊತೆಗೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳ ಕಡೆಗೆ ಗಮನ ಹರಿಸಿದ್ದಾರೆ.
ಈ ಸಂದರ್ಭದಲ್ಲಿ ನೂತನ ವಿಧಾನಸಭಾ ಸ್ಪೀಕರ್ ಶ್ರೀ ಗುರುಪಾದಗೌಡ ಸಂಗನಗೌಡ ಪಾಟೀಲ್ ಮಾತನಾಡಿ ರೋಣ ತಾಲೂಕಿನಲ್ಲಿ ನನ್ನ ಮತ ಕ್ಷೇತ್ರದ ಅಭಿಮಾನಿಗಳು ಪಕ್ಷ, ಜಾತಿ ಪಂಥ ಅಂತ ಭೇದ ಭಾವ ಇಲ್ಲದೆ ಎಲ್ಲಾ ಅಭಿಮಾನಿಗಳು ಇಲ್ಲಿ ಇಷ್ಟು ಗೌರವಿಸಿದ್ದಕ್ಕೆ ನಾನು ಹಾಗೂ ನಮ್ಮ ಕುಟುಂಬದವರು ನಮ್ಮ ರೋಣ ಮತಕ್ಷೇತ್ರದ ಜನರಿಗೆ ಎಂದೆಂದಿಗೂ ನಾವು ಚಿರಋಣಿಯಾಗಿರುತ್ತೇವೆ ನನ್ನ ರೋಣ ಜನತೆ ಇವತ್ತು ದೇವರಿಗೆ ಉರುಳು ಸೇವೆ ಮಾಡಿ, ದೇವರಿಗೆ ಹರಕೆ ಹೊತ್ತು ವಿಧಾನಸಭಾದವರೆಗೆ ಪಾದಯಾತ್ರೆ ಸಲ್ಲಿಸಿದ್ದಾರೆ ಇದು ಜನರು ಕೊಟ್ಟ ಭಾಗ್ಯವಾಗಿದೆ ಇನ್ನು ಮುಂದೆ ರೋಣ ತಾಲೂಕಿನ ಗ್ರಾಮಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವುದೇ ನನ್ನ ಗುರಿ ಎಂದು ಹೇಳಿದರು.
ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಮಿಥುನ್ ಜಿ ಪಾಟೀಲ್, ವೀರಣ್ಣ ಶೆಟ್ಟರ್, ಅಭಿಷೇಕ್ ನವಲಗುಂದ, ಅಪ್ಪು ಗಿರೆಡ್ಡಿ ,ಸಂಗು ನವಲಗುಂದ, ಬಸವರಾಜ್ ನವಲಗುಂದ, ಸಂಜಯ್ ದೊಡ್ಮನೆ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಯುವಕ ಮಿತ್ರರು ಪಾಲ್ಗೊಂಡಿದ್ದರು.

ವರದಿ ಶರಣಪ್ಪಗೌಡ ಸಕ್ಕರಗೌಡರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!