ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬದುಕು-ಬವಣೆ…

ಆಡಂಬರದ ಬದುಕು ತೋರಿಕೆಗೆ ಸೀಮಿತವಾಗುತ್ತಿದೆಯೇ
ಹೌದು ಬದುಕು ಬ್ರ್ಯಾಂಡ್ ಎಂಬ ಕಲ್ಪನೆಯ ಮಾಯಾ ಜಿಂಕೆಯ ಬೆನ್ನತ್ತಿ ಮುಳುಗುತ್ತಿದೆಯೇ…

ನಿಜ ಮಹಾರಾಷ್ಟ್ರದಲಿ ನೆನ್ನೆ ನಡೆದ ಘಟನೆ ಇಡೀ ದೇಶವನ್ನೆ ಬೆಚ್ಚಿ ಬೀಳಿಸಿದೆ ಕೇವಲ ಒಂದು IPhone ಎಂಬ ಮಾಯಾವಿಗೆ ಇಡೀ ಕುಟುಂಬವೇ ಸರ್ವ ನಾಶವಾಗಿದೆ…

ಮಹಾರಾಷ್ಟ್ರದ ಸಂಭಾಜಿನಗರ ಜಿಲ್ಲೆಯ ಖಾವಡ್ ಬೆಟ್ಟದಲ್ಲಿ IPhone EMI ವಿಚಾರವಾಗಿ ತಂದೆ ಮಗ ಮತ್ತು ತಾಯಿ 250 ಅಡಿ ಆಳದ ಬೆಟ್ಟದ ಮೇಲಿಂದ ಬಿದ್ದು ಮೃತಪಟ್ಟಿದ್ದಾರೆ…

ಈ ಮೊದಲು ಮಗ ಮನೆಯಲ್ಲಿ ಇದೆ ವಿಚಾರವಾಗಿ ತಂದೆತಾಯಿಯೊಡನೆ ಜಗಳವಾಡಿ ಮನಸ್ತಾಪ ಮಾಡಿಕೊಂಡು ಬೆಟ್ಟದ ಬಳಿ ಬಂದಿದ್ದಾನೆ ಸುಮಾರು ಮೂರು ಗಂಟೆಯ ಮನವೋಲಿಸುವ ಕಾರ್ಯ ಮಾಡಿದರೂ ಬೆಟ್ಟದ ತುದಿಗೆ ನಿಂತಾಗ ತಂದೆ ಮಗನನ್ನು ಕಾಪಾಡುವ ಭರದಲಿದ್ದಾಗ ಆಯ ತಪ್ಪಿ ಮಗ ಮತ್ತು ತಂದೆ ಪ್ರಪಾತಕ್ಕೆ ಬಿದ್ದಿದ್ದಾರೆ ಅಲ್ಲೆ ಇದ್ದ ತಾಯಿ ಕೂಡ ತಕ್ಷಣ ಆಕೆ ಕೂಡ ಪ್ರಪಾತಕ್ಕೆ ಹಾರಿದ್ದಾಳೆ… ಸದ್ಯ ಇದು ಸಂಪೂರ್ಣ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ರೆಕಾರ್ಡ್ ಆಗಿ ವೈರಲ್ ಆಗಿದೆ..

ಸಂವಹನ ಎಂಬುದು ಮನುಷ್ಯನ ಮಾತಿನಿಂದ ಶುರುವಾಗಿ ಈಗಿನ ಜಾಲತಾಣದ ವರೆಗೆ ಬೆಳೆದ ಪರಿ ಅತ್ಯದ್ಭುತ….ಅದು ಹಿತ ಮಿತ ವಾಗಿರದೆ ದೂರಗಾಮಿ ಪರಿಣಾಮಗಳಿಗಿಂತ ಅಡ್ಡಪರಿಣಾಮಗಳ ಹೆಚ್ಚು ಎನ್ನಬಹುದು…
ಸದ್ಯ ಈ ಜಾಲತಾಣಗಳ ಮೂಲಕ ಶಾಪಿಂಗ್ ಎಂಬ ಗೀಳು ಮಾನವನ ಕೊಳ್ಳುಬಾಕ ಸಂಸ್ಕೃತಿಯನ್ನ ತಲೆಯಲಿ ತುಂಬುವ ಕೆಲಸಮಾಡುತಿದೆ ಒಂದು ಬೇಕೆನ್ನುವ ಜಾಗದಲಿ ಹತ್ತು ಮಾರುವ ಕಂಪನಿಗಳು ಕೊಳ್ಳುವ ಶಕ್ತಿಯಿಲ್ಲದಿದ್ದರೂ EMI , credit ಎಂಬ ಇತ್ಯಾದಿ ಮಾಯಾ ಬಲೆಯೋಳಗೆ ಸ್ವತಃ ನುಸುಳುವಂತೆ ಮಾಡಿ ಗ್ರಾಹಕ ಹೈರಾಣಾದ್ರು ಗೊಚರಿಸದಂತೆ ಮಾಡುವ ಕಲೆ ಅತ್ಯಧ್ಬುತ…

ಹಿಂದೆ ವೇದಾಂತಿ ಹೇಳಿದ್ದ… ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ ಆದ್ರೆ ಸದ್ಯ ಜೇಬು ಹರಿದು ಹನ್ನೆರಡು ಆದ್ರೂ ಬ್ರ್ಯಾಂಡೆಡ್ ಬಟ್ಟೆನೇ ಬೇಕು ನನ್ನ ಮಾನ ಮುಚ್ವೊಕೆ ಅನ್ನುವ ಸ್ಥಿತಿ…

ಕಾಲ ಬದಲಾಗಿದೆ ಅಂದು ಕಾಲನ‌ ಮೇಲೆ ಹಾಕಿ ದಿನ ದೂಡುವ ಬದಲು …
ಮನೆಯಲಿ ಮಕ್ಕಳಿಗೆ ನೈತಿಕ ಶಿಕ್ಷಣ ದಿನಾಲೂ ಸಂವಹನ…ಪ್ರತಿಯೊಬ್ಬರು ಮನೆಯಲಿ ಕೂತು ಮೊಬೈಲ್ TV ಇಂಟರನೆಟ್ ಮುಕ್ತ …ವಾತಾವರಣ ನಿರ್ಮಿಸಿ ಪ್ರತಿಯೊಬ್ಬರಿಗೂ ಸಮಯಾವಕಾಶ ನೀಡಿ ಮುಕ್ತವಾಗಿ ಬೆರೆತು ಮನಸ್ಸಿನ ಭಾವನೆಗಳಿಗೆ ಪ್ರತಿಸ್ಪಂದನ ಕೊಟ್ರೆ ಖಂಡಿತ ಬದಲಾವಣೆ ಸಾಧ್ಯ… ಇಂದಿನ ಪೀಳಿಗೆಯನ್ನು ನೆಂಟರು ಬೀಗರ ಬಿಜ್ಜರ ಸಮಾರಂಭಗಳಿಗೆ ಮದುವೆ ಮುಂಜಿ ಮುಂತಾದ ಕಾರ್ಯಗಳಿಗೆ ಕರೆದೊಯ್ದು ಅಲ್ಲಿನ ವಾತಾವರಣ ಪರಿಚಯಿಸುವ ಕೆಲಸ ವಾಗಬೇಕು…ಆವಾಗ ಮನುಷ್ಯ ಎಲ್ಲ ವಾತಾವರಣಕ್ಕೂ ಸೂಕ್ತವಾಗಿ ಬದುಕಲು ಸಾಧ್ಯ…

  • ಸಿದ್ಧಲಿಂಗಯ್ಯ ಹಿರೇಮಠ
    ಹವ್ಯಾಸಿ ಲೇಖಕರು
    ಯುವ ಉದ್ಯಮಿಗಳು
    ಕೊಪ್ಪಳ-583231
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!