ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಣ್ಣ ಬಣ್ಣದ ಆಹಾರ -ಆರೋಗ್ಯಕ್ಕೆ ಆಧಾರ ಡಾ. ಅನುಷಾ ಭಾಗವತ

ಶಿರಸಿ: ಯಾವುದೇ ಆಹಾರ ಹೊಟ್ಟೆ ತುಂಬಿಸಬಹುದು; ಆದರೆ ಪೋಷಕಾಂಶಯುಕ್ತ ಆಹಾರ ಮಾತ್ರ ದೇಹವನ್ನು ನಿಜವಾಗಿ ಪೋಷಿಸುತ್ತದೆ.
ಬಣ್ಣಬಣ್ಣದ ಹಣ್ಣು ಮತ್ತು ತರಕಾರಿಗಳು ಪ್ರಕೃತಿಯು ನಮಗೆ ನೀಡಿರುವ ಆರೋಗ್ಯದ ಕೊಡುಗೆಗಳಾಗಿವೆ. ಅವುಗಳ ಬಣ್ಣಗಳ ಮೂಲಕವೇ ಪ್ರಕೃತಿ ಅವುಗಳಲ್ಲಿರುವ ವಿವಿಧ ಪೋಷಕಾಂಶಗಳ ಬಗ್ಗೆ ನಮಗೆ ಸೂಚನೆ ನೀಡುತ್ತದೆ.
ಟೊಮ್ಯಾಟೊದಲ್ಲಿನ ಲೈಕೋಪೀನ್, ಹಸಿರು ತರಕಾರಿಗಳಲ್ಲಿನ ಕ್ಲೋರೊಫಿಲ್ ಹಾಗೂ ಹಳದಿ-ಕಿತ್ತಳೆ ಬಣ್ಣದ ಆಹಾರದಲ್ಲಿನ ಕ್ಯಾರೋಟಿನಾಯ್ಡ್‌ಗಳು ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತವೆ.
ಇವುಗಳಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ದೇಹದ ಕೋಶಗಳನ್ನು ಹಾನಿಯಿಂದ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಾಲ್ಕು ಬಂಗಾರದ ಪದಕ ಗಳೊಂದಿಗೆ ತರಕಾರಿ ವಿಜ್ಞಾನದಲ್ಲಿ ಡಾಕ್ಟರೇಟ್ ಮಾಡಿದ ಅನುಷಾ ಭಾಗವತ ತಿಳಿಸಿದರು. ಅವರು ಶಿರಸಿಯ ಗಾಯತ್ರಿ ಬಳಗದಲ್ಲಿ ಜಸ್ಟಿಸ್ ಜಿ ಎನ್ ಸಭಾಹಿತ , ಜಸ್ಟಿಸ್ ವಿಷ್ಣು ಸಭಾಹಿತ ಸ್ಮರಣೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಮುಂದುವರಿದು ಅವರು, ಇಂತಹ ಆರೋಗ್ಯಕರ ಆಹಾರಕ್ಕಾಗಿ ದುಬಾರಿ ವಸ್ತುಗಳ ಅಗತ್ಯವಿಲ್ಲ; ನಮ್ಮ ಮನೆಯ ಅಡುಗೆಮನೆಯಲ್ಲಿಯೇ ಪ್ರಕೃತಿಯ ಸಂಪತ್ತು ಲಭ್ಯವಿದೆ.
“Eat the Rainbow” ಎಂಬುದು ಪ್ರತಿದಿನ ವಿವಿಧ ಬಣ್ಣಗಳ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವ ಸರಳ ಆರೋಗ್ಯ ಸಂದೇಶವಾಗಿದೆ.
ಪ್ರಕೃತಿ ತನ್ನ ಬಣ್ಣಗಳ ಮೂಲಕ ನಮ್ಮೊಂದಿಗೆ ಮಾತನಾಡುತ್ತದೆ; ಆ ಸಂದೇಶವನ್ನು ಅರಿತು ಬಣ್ಣಬಣ್ಣದ ಆಹಾರ ಸೇವಿಸಿ ಆರೋಗ್ಯಕರ ಜೀವನ ನಡೆಸೋಣ ಎಂದು ನುಡಿದು ಸಭಿಕರ ಅನೇಕ ಸಂದೇಹಗಳಿಗೆ ಪರಿಹಾರ ನೀಡಿದರು.

ಇನ್ನೊಂದು ಉಪಾನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕ, ಅಂಕಣಕಾರ, ತೆರಿಗೆ ಸಲಹೆಗಾರ ಶಿವಾನಂದ ಪಂಡಿತ ಗೋವಾ ಅವರು ಶಂಕರ ಭಗವದ್ಪಾದರ 31 ಶ್ಲೋಕಗಳ ಭಜಗೋವಿಂದಂ ಕುರಿತು ಮಾತನಾಡುತ್ತಾ, ಕೇವಲ ಹಣ, ಸಂಪತ್ತು ಮತ್ತು ಭೌತಿಕ ಸುಖಗಳ ಹಿಂದೆ ಓಡಬಾರದು. ಮನುಷ್ಯನು ತನ್ನ ಅಹಂಕಾರವನ್ನು ತೊರೆದು ಸರಳ ಜೀವನ ನಡೆಸಬೇಕು. ಜ್ಞಾನ ಮತ್ತು ವಿವೇಕವನ್ನು ಬೆಳೆಸಿಕೊಂಡು ಸತ್ಯದ ಮಾರ್ಗದಲ್ಲಿ ನಡೆಯಬೇಕು. ಜೀವನವು ಶಾಶ್ವತವಲ್ಲ; ಮರಣವು ಎಲ್ಲರಿಗೂ ಅನಿವಾರ್ಯ. ದೇವರ ಭಕ್ತಿಯು ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯನ್ನು ನೀಡುತ್ತದೆ. ಆಸೆ, ಮೋಹ ಮತ್ತು ಲೋಭಗಳನ್ನು ನಿಯಂತ್ರಿಸಬೇಕು. ಸತ್ಸಂಗ ಮತ್ತು ಸತ್ಕಾರ್ಯಗಳು ಮನುಷ್ಯನ ಜೀವನವನ್ನು ಉತ್ತಮಗೊಳಿಸುತ್ತವೆ. ಆತ್ಮಜ್ಞಾನವನ್ನು ಪಡೆಯುವುದೇ ಮಾನವ ಜೀವನದ ಪರಮ ಗುರಿ. ಆದ್ದರಿಂದ ಭಕ್ತಿ, ಜ್ಞಾನ, ವೈರಾಗ್ಯ ಮತ್ತು ಸದಾಚಾರದಿಂದ ಜೀವನ ನಡೆಸುವುದು ಭಜಗೋವಿಂದಂನ ಮುಖ್ಯ ಸಂದೇಶವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪನ್ಯಾಸಕರನ್ನು ಬಳಗದ ಮುಖ್ಯಸ್ಥ ಎಂ ಎಸ್ ಹೆಗಡೆ, ಎಸ್ ಮಂಜುನಾಥ್, ಎಸ್ ಎಸ್ ಹೆಗಡೆ ಸನ್ಮಾನಿಸಿದರು.
ತ್ರಿವೇಣಿ ಹೆಗಡೆಯವರು ಗಣ್ಯರ ಪರಿಚಯ ಮಾಡಿಕೊಟ್ಟರು, ಪ್ರಿಯಾಂಕಾ ಹೆಗಡೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಸಾಹಿತಿಗಳಾದ ಲಕ್ಷ್ಮಣ ಶಾನಭಾಗ , ವಾಸುದೇವ ಶಾನಭಾಗ, ಜಯಪ್ರಕಾಶ್ ಹಬ್ಬು, ಜಿ ಎಂ ಹೆಗಡೆ ತಾರ್ಗೋಡ, ಆರ್ ಎಸ್ ಹೆಗಡೆ , ಲಕ್ಷ್ಮಿ ನಾಯ್ಕ್, ಸಿ ಎಸ್ ಹೆಗಡೆ, ಐ.ಜಿ ಗಿಡ್ಡನ್ ,ದಿನೇಶ ಪಾಲೇಕರ್, ಕಾಶಿನಾಥ ಹೆಗಡೆ, ಡಿ ಜಿ ಹೆಗಡೆ, ಎನ್ ಎಂ ಶೆಟ್ಟಿ, ಪದ್ಮಾವತಿ ಹೆಗಡೆ, ಅನಿತಾ ಹೆಗಡೆ, ರಾಧಾ ಹೆಗಡೆ , ಆಶಾ ಸಭಾಹಿತ, ಕೃಷ್ಣವೇಣಿ ಹೆಗಡೆ, ಪಾರ್ವತಿ ಹೆಗಡೆ, ಪ್ರಭಾತ ಹೆಗಡೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ವರದಿ: ಶಿವಪ್ರಸಾದ್ ಕೊಡಕ್ಕಲ್, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!