” ಬಾಲ್ಯದಿಂದಲೆ ಗಾಯನದಿಂದ ಜೀವನ ರೂಪಿಸಿಕೊಂಡ ಸಾಧಕರಾದ ಶ್ರೀ ಪಂಪಾಪತಿ ಇಂಗಳಗಿ ಇವರಿಗೆ ಒಲಿದು ಬಂದ
Reality Book of word Records ಪ್ರಶಸ್ತಿ. “
ಶ್ರೀ ಪಂಪಾಪತಿ ಇಂಗಳಗಿ ಇವರು
ಬಾಲ್ಯದಿಂದಲೂ ನಾಡಿನ ನಾನಾ ಬಾಗಗಳಲ್ಲಿ VIP ಮೆಲೋಡಿಸ್ ಆರ್ಕೆಸ್ಟ್ರಾ ಮುಖಾಂತರ ಭಕ್ತಿಗೀತೆ ,ಭಾವಗೀತೆ, ಜಾನಪದ ಗೀತೆ, ಚಲನಚಿತ್ರ ಗೀತೆಗಳನ್ನು ಹಾಡುತ್ತಾ ಹೆಸರು ಮಾಡಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ರೈತ ಕುಟುಂಬದ ಹಿನ್ನೆಲೆಯ ಇವರು ಆಟಗಳಲ್ಲಿ ಬಲ್ಲೆ ಎಸತದಲ್ಲಿ ಪಿ. ಯು. ಸಿ ಓದುತ್ತಿರುವಾಗ ಜಿಲ್ಲಾ ಮಟ್ಟದಲ್ಲಿ ಗೆದ್ದು ಸ್ಟೇಟ್ ಲೆವೆಲ್ ಭಾಗವಹಿಸಿ ಕೊಟ್ಟೂರೇಶ್ವರ ಪದವಿ ಪೂರ್ವ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಹೈಸ್ಕೂಲ್ ಕಾಲೇಜು ಓದುತ್ತಿದ್ದಾಗ ಆಲ್ ರೌಂಡರ್ ಚಾಂಪಿಯನ್ ಆಗಿ ಹೆಸರು ಮಾಡಿರುವ ಪಂಪಾಪತಿ ಇಂಗಳಗಿ ಕನ್ನಡ ಸಾಹಿತ್ಯ ಸಮ್ಮೇಳನ, ಆನೆಗುಂದಿ ಉತ್ಸವ, ಹಂಪಿ ಉತ್ಸವಗಳಲ್ಲಿ ಹಾಡುಗಳನ್ನು ಹಾಡಿ ಜನರನ್ನು ರಂಜಿಸುತ್ತಾ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
1) KRSS (ರಿ.) ಅವರಿಂದ ಕರುನಾಡ ಗಾನ ಕೋಗಿಲೆ. 2)ಸ್ವರತರಂಗ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು. ಅವರು ಡಾ. ಶ್ರೀ ಶ್ರೀ ಶಿವಕುಮಾರ್ ಸ್ವಾಮಿ ರಾಷ್ಟ್ರ ಪ್ರಶಸ್ತಿ.
3)ರಾಷ್ಟ್ರ ಮಟ್ಟದ ಬೆಳಕು ಸಂಸ್ಥೆ (ರಿ.) ರಾಯಚೂರು ಅವರಿಂದ ಗಾನ ಗಂಧರ್ವ ಪ್ರಶಸ್ತಿ.
4) ಕರ್ನಾಟಕ ಗ್ರಾಮೀಣ ಯುವ ಕನ್ನಡ ಸಾಹಿತ್ಯ ಕ್ರಿಯಾ ಸಮಿತಿ (ರಿ.) ಹೂವಿನ ಹಡಗಲಿ ಸುಕ್ಷೇತ್ರ ಮೈಲಾರ ವಿಜಯನಗರ ಜಿಲ್ಲೆ. ಗಿರಿಜಾ ಶಂಕರ ಕನ್ನಡ ಗ್ರಾಮೀಣ ರತ್ನ ಪ್ರಶಸ್ತಿಯನ್ನು ಇಂಗಳಗಿ ದಂಪತಿಗಳಿಗೆ ನೀಡಿ ಗೌರವಿಸಿದ್ದಾರೆ.
5)ಸಮೀಕ್ಷೆ ಕಲಾ ಸೇವಾ ಟ್ರಸ್ಟ್ (ರಿ.) ಬೆಂಗಳೂರು ಅವರಿಂದ ಡಾ. ಎ ಪಿ ಜೆ ಅಬ್ದುಲ್ ಕಲಾಂ ಸದ್ಭಾವನಾ ಪ್ರಶಸ್ತಿ.
6)ಅಖಿಲ ಭಾರತ ಮರಾಠ ಮಹಾಸಭಾ (ರಿ.) ಬೆಂಗಳೂರು ಶ್ರೀ ಮಹಾರಾಜ ಛತ್ರಪತಿ ಶಿವಾಜಿ ಅವಾರ್ಡ್.
7)ಅಖಿಲ ಕರ್ನಾಟಕ ಅಂಗವಿಕಲರ ಸೇವಾ ಟ್ರಸ್ಟ್ (ರಿ)ಬೆಂಗಳೂರು ಅವರು ಗಾಯಕ ರತ್ನ ಪ್ರಶಸ್ತಿ. 8)ಎಸ್.ಎಸ್. ಕೆ.ಸಮಾಜ (ರಿ.) ಗಂಗಾವತಿ ಅವರ ವತಿಯಿಂದ ಕರುನಾಡ ಗಾನ ಸಿರಿ ಪ್ರಶಸ್ತಿ. 9)ರಾಜಋಷಿ ಶ್ರೀ ಭಗೀರಥ ಉಪ್ಪಾರ ಸಮಾಜ (ರಿ.)ಕಂಪ್ಲಿ ತಾಲೂಕ ಬಳ್ಳಾರಿ ಜಿಲ್ಲೆ. ಅವರಿಂದ ಶ್ರೀ ಭಗೀರಥ ಪ್ರಶಸ್ತಿ.
10) ಹಿರೇ ಬೆಣಕಲ್ ಮೊರೇರ ಪ್ರತಿಷ್ಠಾನ ಗಂಗಾವತಿ. ಪರಿಸರ ಸೇವಾ ಟ್ರಸ್ಟ್ (ರಿ.) ಗಂಗಾವತಿ ಕೊಪ್ಪಳ ಜಿಲ್ಲೆ. ಅವರಿಂದ ಕನ್ನಡ ಗಾನ ಕೋಗಿಲೆ ಪ್ರಶಸ್ತಿ.
11)ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನಿಂದ ಭಗೀರಥ ಸಮಾಜ ಗೌರವ ಸನ್ಮಾನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
12)ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುವ ಕರೋಕೆ ಗಾಯನದಲ್ಲಿ ಗೋಲ್ಡನ್ ಸಿಂಗರ್ಸ್ ಅವಾರ್ಡ್ ಸೇರಿದಂತೆ ಇನ್ನೂ ಹಲವಾರು ಪ್ರಶಸ್ತಿ ದೊರಕಿವೆ.
ಇಷ್ಟೆಲ್ಲಾ ಸಾಧನೆ ಮಾಡಿದ ಇವರಿಗೆ Reality Achievers Award -190 ರಾಷ್ಟ್ರಗಳಲ್ಲಿ ಪ್ರಶಸ್ತಿ ಕೊಡಲ್ಪಡುವ ಸಂಸ್ಥೆಯು ದೆಹಲಿ ಮೂಲದ್ದಾಗಿದ್ದು ಈ ಸಂಸ್ಥೆಯ ವತಿಯಿಂದ Reality Book of Records ಪ್ರಶಸ್ತಿಯನ್ನು ದಿನಾಂಕ :22-08-2026 ಶನಿವಾರ ದಂದು ಬೆಂಗಳೂರಿನ ಮಲ್ಲೇಶ್ವರಂ -18 ನೇ ಕ್ರಾಸ್ ಹತ್ತಿರವಿರುವ ರೇಣುಕಾಂಬಾ ಸ್ಟುಡಿಯೋದಲ್ಲಿ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು.
ಇವರಿಗೆ ಶುಭ ಕೋರುವವರು : ಶ್ರೀ S. P. ಆಚಾರ್ಯ ಮತ್ತು ಶ್ರೀ Dr. ವೆಂಕಟೇಶ ಪ್ರಾಚಾರ್ಯರು ಶ್ರೀ ಸಂಜೀವ ಶಿಕ್ಷಣ ಮಹಾವಿದ್ಯಾಲಯ (ಬಿ. ಎಡ್ )ಕಾಲೇಜು ಲಿಂಗಸೂಗೂರ.
ವರದಿ : ಶ್ರೀ ವೆಂಕಟೇಶ ನವಲಕಲ್




















