ಶಿವಮೊಗ್ಗ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ (ನೋಂ.), ಶಿವಮೊಗ್ಗ ಜಿಲ್ಲಾ ಶಾಖೆ ಹಾಗೂ ಯಜ್ಞ ಪ್ರಕಾಶನದ ಸಹಯೋಗದಲ್ಲಿ ಖ್ಯಾತ ಕವಿ, ಸಾಹಿತಿ, ಹಿರಿಯ ಅಂಕಣಕಾರರು ಹಾಗೂ ನವಜಾತ ಶಿಶು ಮತ್ತು ಮಕ್ಕಳ ತಜ್ಞರಾದ ಡಾ|| ಸಿ. ಜಿ. ರಾಘವೇಂದ್ರ ವೈಲಯ ಅವರ ಅಂಕಣ ಬರಹಗಳ ಸಂಕಲನವಾದ ‘ಖಾರಾ-ಬಾತ್’ ಪುಸ್ತಕ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 05 ಸೆಪ್ಟೆಂಬರ್ 2026, ಶನಿವಾರ ಸಂಜೆ 5:00ಕ್ಕೆ (ಸಂಜೆ 4:30ಕ್ಕೆ ಉಪಹಾರ) ಆಯೋಜಿಸಲಾಗಿದ್ದು ಶಿವಮೊಗ್ಗ ತಿಲಕ್ ನಗರ ದಲ್ಲಿರುವ ಸನ್ ಸ್ಪೆಷಾಲಿಟಿ ಆಸ್ಪತ್ರೆ (SUN Speciality Hospital) ಇಲ್ಲಿ ಶ್ರೀ ಡಾ|| ಆಕಾಶ್ ಹೊಸತೋಟ (ಕೀಲು ಮೂಳೆ ತಜ್ಞರು, ನಿರ್ದೇಶಕರು, ಸನ್ ಸ್ಪೆಷಾಲಿಟಿ ಹಾಸ್ಪಿಟಲ್) ಕಾರ್ಯಕ್ರಮ ಉದ್ಘಾಟಿಸುವರು.
ಪುಸ್ತಕ ಲೋಕಾರ್ಪಣೆಯನ್ನು ಶ್ರೀ ರಂಗಸ್ವಾಮಿ ಮೂಕನಹಳ್ಳಿ (ಖ್ಯಾತ ಅಂಕಣಕಾರರು ಹಾಗೂ ಆರ್ಥಿಕ ತಜ್ಞರು, ಮೈಸೂರು) ಇವರು ನೆರವೇರಿಸಿ
ಪುಸ್ತಕ ಪರಿಚಯವನ್ನು ಶ್ರೀ ಹೆಚ್. ಯು. ವೈದ್ಯನಾಥ್ (ವೈದ್ಯ) (ಅಧ್ಯಕ್ಷರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಶಿವಮೊಗ್ಗ) ಇವರು ನಡೆಸಿ ಕೊಡುವರು.
ಮುಖ್ಯ ಅತಿಥಿಗಳಾಗಿ ‘ಕಗ್ಗ’ ಖ್ಯಾತಿಯ ವಿದ್ವಾನ್ ಶ್ರೀ ಜಿ. ಎಸ್. ನಟೇಶ್ (ನಿವೃತ್ತ ಪ್ರಾಧ್ಯಾಪಕರು, ಶಿವಮೊಗ್ಗ)ಇವರು ಆಗಮಿಸುವರಲ್ಲದೆ ಕಾರ್ಯಕ್ರಮ ಅಧ್ಯಕ್ಷತೆಯನ್ನು ಶ್ರೀ ಡಾ|| ಎನ್. ಸುಧೀಂದ್ರ (ಅಧ್ಯಕ್ಷರು, ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಶಿವಮೊಗ್ಗ) ಇವರು ವಹಿಸಿಕೊಳ್ಳುವರು.
ಸಂಜೆ 4:30ಕ್ಕೆ ಉಪಹಾರ ವ್ಯವಸ್ಥೆ ಇರುತ್ತದೆ.
ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿಯಾಗಿ ಶ್ರೀ ಡಾ|| ಸಿ. ಜಿ. ರಾಘವೇಂದ್ರ ವೈಲಯ (ಕೃತಿ ಕರ್ತೃ, ನವಜಾತ ಶಿಶು & ಮಕ್ಕಳ ತಜ್ಞರು, ನಿರ್ದೇಶಕರು, ಜನನಿ ನ್ಯೂಲೈಫ್ ಆಸ್ಪತ್ರೆ) ಹಾಜರಿರುವರಲ್ಲದೆ
ವೇದಿಕೆ ನಿರೂಪಣೆಯನ್ನು ಶ್ರೀಮತಿ ಸುಪ್ರಿಯ ಬಿ.ಕಾಂ., ಖ್ಯಾತ ನಿರೂಪಕರು ಇವರು ನಡೆಸಿಕೊಡುವರು.
ಈ ಸಂದರ್ಭದಲ್ಲಿ ವಿಶೇಷ ಸಾಂಸ್ಕೃತಿಕ
ಕಾರ್ಯಕ್ರಮದಲ್ಲಿ ಸಾಹಿತ್ಯಿಕ ಚಟುವಟಿಕೆಗಳ ಜೊತೆಗೆ ಶ್ರೀ ಶಾರದಾ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಲೇಖಕ ಡಾ|| ಸಿ. ಜಿ. ರಾಘವೇಂದ್ರ ವೈಲಯ ಅವರು ರಚಿಸಿರುವ ಆಯ್ದ ಕವನಗಳ ಗಾನ ಪ್ರಸ್ತುತಿ ನಡೆಸಲಿದ್ದು ಮಾಜಿ ಪ್ರಕಾಶನ ಮತ್ತು (Yaji Prakashana) ಜನನಿ ನ್ಯೂಲೈಫ್ ಆಸ್ಪತ್ರೆ ಹಾಗೂ ಸಿಬ್ಬಂದಿ ವರ್ಗದವರು ಸ್ವಾಗತಿಸುವರು ಎಂದು ಪ್ರಕಟಣೆ ತಿಳಿಸಿದೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ ಬೆಂಗಳೂರು




















