ವಿರಾಜಪೇಟೆ: 18ನೇ ಓಣಂ ಆಚರಣೆ ಕಾರ್ಯಕ್ರಮದಲ್ಲಿ, ವಿರಾಜಪೇಟೆ ಶಾಸಕರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು ಭಾಗವಹಿಸಿದರು. ವಿರಾಜಪೇಟೆ ಪುರಸಭೆ ವ್ಯಾಪ್ತಿಯ ಮೀನುಪೇಟೆಯಲ್ಲಿ, ಶ್ರೀ ಮುತ್ತಪ್ಪ ಮಲೆಯಾಳಿ ಸಮಾಜದವರು ಈ ಕಾರ್ಯಕ್ರಮವನ್ನು ಆಯೋಜಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಶಾಸಕರು, ಓಣಂ ಆಚರಣೆಯು ವಿಶ್ವಾದ್ಯಂತ ಪ್ರಖ್ಯಾತಿಯನ್ನು ಪಡೆದಿದೆ. ಕೇರಳದ ವಿಭಿನ್ನ ಸಂಸ್ಕೃತಿಯ ವಿಶಿಷ್ಟ ಆಚರಣೆಯು, ನಮ್ಮ ನಾಡಿನಲ್ಲೂ ಪಸರಿಸುತ್ತಿರುವುದು ಈ ದೇಶದ ಸಮೃದ್ಧ ಸಾಂಸ್ಕೃತಿಕ ಇತಿಹಾಸಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮಲಯಾಳಿ ಸಮಾಜದವರು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸುವ ಓಣಂ ಹಬ್ಬವೂ ಸಕಲ ಮನುಕುಲಕ್ಕೆ ಒಳಿತನ್ನು ಮಾಡಲಿ ಹಾಗೂ ನಾಡಿನ ಎಲ್ಲರಿಗೂ ಸುಖ, ಸಮೃದ್ಧಿ ಹಾಗೂ ಸುಭಿಕ್ಷೆಯನ್ನು ನೀಡಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಲಯಾಳಿ ಸಮಾಜದ ಅಧ್ಯಕ್ಷರಾದ ಸುಮೇಶ್, ಸದಸ್ಯರು, ಪದಾಧಿಕಾರಿಗಳು, ವಿರಾಜಪೇಟೆ ತಾಲೂಕು ಎಸ್ ಎನ್ ಡಿ ಪಿ ಅಧ್ಯಕ್ಷರು ನಾರಾಯಣ, ವಿರಾಜಪೇಟೆ ತಾಲೂಕು ಕೆಡಿಪಿ ಸದಸ್ಯರು ಮಾಳೆಟೀರ ಪ್ರಶಾಂತ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಉಪಾಧ್ಯಕ್ಷರು ನಾಸಿರ್, ನಾಪೋಕ್ಲು ಬ್ಲಾಕ್ ಅಧ್ಯಕ್ಷರು ಸೌಕತ್ ಆಲೀ, ಹಾಗೂ ಮಲಯಾಳಿ ಸಮಾಜದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ವರದಿ: ಪ್ರಿತುನ್ ಪೂವಣ್ಣ




















