ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕೆಂಗಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗದಳ್ಳಿ ಗ್ರಾಮದ ಎಸ್ ಸಿ ಕಾಲೋನಿ ಹಿಂದುಗಡೆಯಲ್ಲಿರುವ ಮಲಪ್ರಭಾ ನದಿ ದಡದಲ್ಲಿ ದೈತ್ಯಾಕಾರದ ಮೊಸಳೆ ಕಂಡು ಬಂದಿದ್ದು ಗ್ರಾಮಸ್ಥರು ಆತಂಕಗೊಂಡು ದನಕರುಗಳಿಗೆ ನೀರು ಕುಡಿಸಲು, ಮೈತೊಳೆಯಲು ಹೋಗಲು ಕೂಡಾ ಭಯ ಪಡುತ್ತಿದ್ದಾರೆ. ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೋ ಬಾರಿ ವಿಷಯ ತಿಳಿಸಿದರೂ ಕ್ಯಾರೆ ಎನ್ನದೆ ಇರುವ ಅಧಿಕಾರಿಗಳಿಗೆ ಧಿಕ್ಕಾರ ಹಾಕುವುದಲ್ಲದೆ ಮುಂದಾಗುವ ಅನಾಹುತಗಳಿಗೆ ಇಲಾಖೆಯ ಅಧಿಕಾರಿಗಳೇ ಹೊಣೆ ಎಂದು ವಿಷಯ ವ್ಯಕ್ತಪಡಿಸಿದ್ದಾರೆ.
ವರದಿ ಮಂಜು ಎಂ. ಚಿಕ್ಕಣ್ಣವರ




















