ಗಂಗಾವತಿ : ಸರಕಾರದ ಸೌಲಭ್ಯಗಳನ್ನು ಬಳಸಿಕೊಂಡು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಪ್ರಾಚಾರ್ಯ ಡಾ. ಶಿವರಾಜ ಗುರಿಕಾರ ತಿಳಿಸಿದರು.
ನಗರದ ಶ್ರೀ ಕೊಲ್ಲಿ ನಾಗೇಶ್ವರ ರಾವ್ ಗಂಗಯ್ಯ
ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ದ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಹೈದರಾಬಾದ್ ಕರ್ನಾಟಕ ವಿಮೋಚನೆಗಾಗಿ ಸರ್ದಾರ್ ವಲ್ಲಭಾಯಿ ಪಟೇಲ್, ಅಲವಂಡಿ ಶಿವಮೊರ್ತಿ ಶರಣರು, ಮುಂಡರಗಿ ಭೀಮರಾಯ, ಮುರಡಿ ಭೀಮಜ್ಜ, ರಾಮತೀರ್ಥರು ಸೇರಿದಂತೆ ಹಲವಾರು ಹೋರಾಟಗಾರರು ತನು, ಮನ, ಧನ ಅರ್ಪಿಸಿದ್ದಾರೆ. ಅವರ ತ್ಯಾಗವನ್ನು ನೆನೆಯೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ಇತಿಹಾಸ, ಅಭಿವೃದ್ಧಿ, 371ಜೆ ಮೀಸಲಾತಿ, ಉದ್ಯೋಗ ಮತ್ತು ಶಿಕ್ಷಣ ಕುರಿತು ಕಾಲೇಜಿನ ಸಿಡಿಸಿ ಸದಸ್ಯರಾದ ಸೋಮಶೇಖರ್ ಕಂಪ್ಲಿ, ಕಾಲೇಜಿನ ಪ್ರಾಧ್ಯಾಪಕರದಾ ಡಾ. ಕೃಷ್ಣ, ಡಾ. ಇಬ್ರಾಹಿಂ, ಪ್ರೊ. ಬಾರೀಕೆರ ಫಣಿರಾಜ್, ಪ್ರೊ
ಮಂಜುನಾಥ ಕೆ. ಎಚ್ ಈ ಮೇಲಿನ ಎಲ್ಲರೂ ವಿವರವಾಗಿ ಮಾತಾಡಿದರು.
ಕಾರ್ಯಕ್ರಮವನ್ನು ಕಾಲೇಜಿನ ದೈಹಿಕ ಶಿಕ್ಷಣ ಭೋಧಕರಾದ ಡಾ. ಅನಿಲ್ ಎಡವರ್ಡ್, ಶೋಭಾ ಕೆ. ಎಸ್. ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಮುಮ್ತಾಜ್ ಬೇಗಂ, ಡಾ. ಉಮಾಕಾಂತ್ ಅವುರೆಡ್ಡಿ, ಡಾ. ಅಣ್ಣೋಜಿ ರೆಡ್ಡಿ, ಡಾ. ಶಿಲ್ಪಾ ಕುಲಕರ್ಣಿ, ಡಾ. ಅನ್ನಪೂರ್ಣ ಗುಡದೂರು, ರಾಗಮ್ಮ, ಪ್ರತಿಭಾ, ಡಾ. ಮಹೇಶ್ ಶರ್ಮಾ, ರವಿಕುಮಾರ್, ಅನಿಲ್ ಕುಮಾರ, ರವಿ, ಮಲ್ಲಿಕಾರ್ಜುನ, ಡಾ ನರಸಿಂಹ, ದೊರೆಬಾಬು, ಅಶ್ರಫ್ ಅಲ್ಲಳ್ಳಿ, ಅಕ್ಕಿ ಮಾರುತಿ, ತಬಸ್ಸಾಮ್ ಅಂಜುಮ್, ಡಾ. ಅಶೋಕ ಕುಮಾರ, ಸಲೀಮ್, ಭೂಮಿಕಾ, ಗಿರೀಶ್ ಕುಮಾರ ಸೇರಿದಂತೆ ಕಾಲೇಜಿನ ಎಲ್ಲ ಅತಿಥಿ ಉಪನ್ಯಾಸಕರು, ಭೋಧಕ ಭೋದಕೇತರ ಸಿಬ್ಬಂದಿಗಳು, ಎನ್ ಸಿಸಿ ಮತ್ತು ಎನ್. ಎಸ್. ಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




















