ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

“ವಚನ ಸಾಹಿತ್ಯದ ತೊಟ್ಟಿಲು ಉಳವಿಯನ್ನು ನೋಡಬನ್ನಿ “

ಕಲ್ಯಾಣ ಕ್ರಾಂತಿಯ ನಂತರ ವಚನ ಭಂಡಾರ ಉಳಿಸಿದ ಕಥೆ – ಹಲವು ಶರಣರು ಚಿನ್ಮಯ ಜ್ಞಾನಿ ಚನ್ನ ಬಸವಣ್ಣ ನವರ ನೇತೃತ್ವದಲ್ಲಿ ಉಳವಿಯತ್ತ  ಪಯಣ ಬೆಳೆಸಿದರು.

ಸಂದರ್ಭ: 1167-68ರ ಕಲ್ಯಾಣ ಕ್ರಾಂತಿ

ಬಸವಣ್ಣನವರು ಕಟ್ಟಿದ *ಮಹಾಮನೆ ಸರಸ್ವತಿ ಭಂಡಾರ* – ಅಲ್ಲಿ ವಚನಗಳ ಕಟ್ಟು, ಶಿವಾನುಭವದ ಗೋಷ್ಠಿಯ ವರದಿಗಳು, ಶೈವಾಗಮಗಳು, ಕಾಶ್ಮೀರದಿಂದ ತಂದಿದ್ದ ಗ್ರಂಥಗಳು ತುಂಬಿದ್ದವು. ಅದು ಶರಣ ಧರ್ಮದ ಜೀವಾಳ ವಾಗಿದ್ದವು ಮುಂದಿನ ಪೀಳಿಗೆಗೆ ಈ ಸಂಪತ್ತು ಉಳಿಸುವ ಪಣ ಶರಣರು ತೊಟ್ಟರು ತಮ್ಮ ಪ್ರಾಣವನ್ನೇ ಪಣಕಿಟ್ಟು ಹೋರಾಡಿದರು ವೀರ ಗಣಾಚಾರಿ ಅಂಬಿಗರ ಚೌಡಯ್ಯ ಶರಣರ ರಕ್ಷಣೆ ಮಾಡುತ್ತಾ ವಚನ ಸಾಹಿತ್ಯ ಶರಣರು ತಮ್ಮ ಬೆನ್ನಿಗೆ ಕಟ್ಟಿಕೊಂಡು ಕಲ್ಯಾಣದಿಂದ ಹೊರಟೆ ಬಿಟ್ಟರು.

ಬಿಜ್ಜಳನ ಕೊಲೆಯ ನಂತರ ಕಲ್ಯಾಣದಲ್ಲಿ ಹಿಂಸೆಯ ಬೆಂಕಿ ಹೊತ್ತಿತು. ಬಸವಣ್ಣನವರು ಕೂಡಲಸಂಗಮದತ್ತ ಹೊರಟರು. ಮಡಿವಾಳ ಮಾಚಿದೇವ, ಹರಳಯ್ಯ-ಮಧುವಯ್ಯನಂತಹ ಶರಣರಿಗೆ ಕಣ್ಣು ಕೀಳುವ, ಎಳೆಹೊಟ್ಟೆ ಶಿಕ್ಷೆ ವೈದಿಕ ರಾಕ್ಷಸರಾದ ಕೊಂಡಿ ಮಂಚಣ್ಣನಂತಹ ಮಂತ್ರಿಗಳು ಅರಸ ಬಿಜ್ಜಳ ನ ಕೊಂದರು. ಶರಣರು ನಿಲೆಸಿದ ಭೂ ಕೈಲಾಸವಾಗಿದ್ದ ಕಲ್ಯಾಣ, ಕಟುಕರ ಕೇಂದ್ರವಾಯಿತು ಕಂಡಲ್ಲಿ ಶರಣರ ಶಿವ ಭಕ್ತರ ತಲೆ ಕತ್ತರಿಸಲಾರoಭಿಸಿದರು. “ವಚನ ಕಟ್ಟುಗಳನ್ನು ಬೆಂಕಿಗೆ ಹಾಕಿ” ಸುಟ್ಟು ಹಾಕಿ ಎಂದು ಅಬ್ಬರಿಸಿದರು. ಹಲವು ಶರಣ ವಚನ ಸಾಹಿತ್ಯ ಸುಟ್ಟರು ಈಗಿರುವ ವಚನ ಸಾಹಿತ್ಯ ಶರಣರು ತಮ್ಮ ಪ್ರಾಣದ ಹಂಗು ತೊರೆದು ಉಳಿಸಿರುವ ವಚನ ಭಂಢಾರವಾಗಿದೆ.

ಆಗ 12 ವರ್ಷದ ಬಾಲಕನಾಗಿದ್ದ ಚೆನ್ನಬಸವಣ್ಣನ ಹೆಗಲ ಮೇಲೆ ದೊಡ್ಡ ಜವಾಬ್ದಾರಿ ಬಿತ್ತು.

ಚೆನ್ನಬಸವಣ್ಣನ ನಿರ್ಧಾರ

ಚೆನ್ನಬಸವಣ್ಣ ತನ್ನ ತಾಯಿ ಅಕ್ಕ ನಾಗಲಾಂಬಿಕೆ ಮತ್ತು ಚಿಕ್ಕಮ್ಮ ಅಕ್ಕನಾಗಮ್ಮನ ಮಾರ್ಗದರ್ಶನದಲ್ಲಿ ಶರಣರ ಸಭೆ ಕರೆದನು. ಅವನು ಹೇಳಿದನು:

> “ಕಲ್ಯಾಣದಲ್ಲಿ ಶರಣರ ಮಣಿಹ ಮುಗಿಯಿತು. ಕ್ರಾಂತಿಯ ಕಿಚ್ಚು ಹರಡುವ ಮುನ್ನ ನಾವು ಕಲ್ಯಾಣ ಬಿಡಬೇಕು. ಈ ಗ್ರಂಥ ಭಂಡಾರ ನಾಶವಾಗದಂತೆ ಜನಸ್ಥಾನದಿಂದ ದೂರವಾದ ದುರ್ಗಮ ಸ್ಥಳದಲ್ಲಿ ಜೋಪಾನ ಮಾಡಬೇಕು. ಬಸವಣ್ಣನವರ ಕನಸಿನಂತೆ ಬನವಾಸಿ ನಾಡಿನ ಸಹ್ಯಾದ್ರಿಯ ನಡುವೆ ಆಶ್ರಮ ಕಟ್ಟೋಣ”.

ಬಸವಣ್ಣನವರು ಮೊದಲೇ ಯೋಚಿಸಿದ್ದರು – ಕಾಳಿ ಕಣಿವೆ, ಉಳವಿ ಘೋರಾರಣ್ಯದಲ್ಲಿ ಎರಡನೇ ಕಾರ್ಯಕ್ಷೇತ್ರ ಮಾಡಬೇಕೆಂದು.

ಮೂರು ದಿಕ್ಕಿಗೆ ಚದುರಿದ ಶರಣರು

ಶರಣರು ಗುಂಪು ಗುಂಪಾಗಿ ಹೊರಟರು – ಕೆಲವರು ಸೊನ್ನಲಾಪುರಕ್ಕೆ, ಕೆಲವರು ಶ್ರೀಶೈಲಕ್ಕೆ, ಅತಿ ದೊಡ್ಡ ಗುಂಪು ಚೆನ್ನಬಸವಣ್ಣನ ನೇತೃತ್ವದಲ್ಲಿ ಉಳವಿಯ ಕಡೆಗೆ ಹೊರಟಿತು.

ದಾರಿ ಸುಲಭವಿರಲಿಲ್ಲ.

ಬೆಳಗಾವಿ ಜಿಲ್ಲೆ ಕಾರೀಮನಿಯಲ್ಲಿ ಮಡಿವಾಳ ಮಾಚಿದೇವರು ರಕ್ತ ಕಾರಿಕೊಂಡರು ಎಂದು ಇಂದಿಗೂ ಹೇಳುತ್ತಾರೆ. ಪ್ರತಿ ಹೆಜ್ಜೆಗೂ ಕಲ್ಯಾಣದ ಸೈನ್ಯ ಅಡ್ಡಗಟ್ಟಿ ಹಲವು ಶರಣರ ಮಾರಣಹೋಮ ನಡೆಸಿತು. ಅನಿರೀಕ್ಷಿತವಾಗಿ ಶರಣರಿಗೆ ಸಹಾಯ ಬಂದು ಕಲ್ಯಾಣದ ಸೈನ್ಯ ಹಿಮ್ಮೆಟ್ಟಿತು ಎನ್ನುತ್ತವೆ ಕಥೆಗಳು.

ಅಕ್ಕನಾಗಮ್ಮ ವೀರಾವೇಶದಿಂದ ಶರಣಗಣದ ಜೊತೆ ನಿಂತು ವಚನ ಕಟ್ಟುಗಳನ್ನು ಎದೆಗವಚಿ ಕೊಂಡು ಹೋರಾಡಿದಳು.

“ಉಳವಿಯಲ್ಲಿ ವಚನ ಸಂರಕ್ಷಣೆ” ಮಾನವ ಕುಲಕ್ಕೆ ಶರಣರ ಬಹುದೊಡ್ಡ ಕೊಡುಗೆ “

ಕಾಡು ದಾಟಿ ಉಳವಿ ತಲುಪಿದ ಶರಣರು ಏನು ಮಾಡಿದರು?

1. ಗವಿಗಳಲ್ಲಿ ಭಂಡಾರ: ಆಕಳ ಗವಿ, ಅಕ್ಕನಾಗಮ್ಮನ ಗವಿ, ಗವಿಮಠದ ಗುಹೆಗಳಲ್ಲಿ ತಾಳೆಗರಿಗಳ ಕಟ್ಟುಗಳನ್ನು ಬಚ್ಚಿಟ್ಟರು. ಗುಹೆಯ ಒಳಗೆ ಒಣಗಿದ ಜಾಗ, ಸಣ್ಣ ಬಾವಿ ಇತ್ತು – ಗ್ರಂಥ ಹಾಳಾಗದಂತೆ. ಸಂರಕ್ಷಿಸಿದರು
2. ಎರಡನೇ ಅನುಭವ ಮಂಟಪ: ಉಳವಿಯನ್ನೇ ಎರಡನೇ ಕಲ್ಯಾಣ ಮಾಡಿದರು. ಕಲ್ಯಾಣದ ಮಹಾಮನೆ ಮತ್ತು ಅನುಭವ ಮಂಟಪದ ಕಾರ್ಯಗಳುb *ಉಳವಿಯ ನೆಲದಲ್ಲೇ ಪುನಃ ಆರಂಭಗೊಂಡವು*.
3.ವಿಭೂತಿ, ರುದ್ರಾಕ್ಷಿ ಕಣಜ: ಉಳವಿಯಲ್ಲಿ ಇಂದಿಗೂ ಕಾಣುವ ವಿಭೂತಿ ಕಣಜ, ರುದ್ರಾಕ್ಷಿ ಕಣಜಗಳು ಅಂದು ವಚನ ಭಂಡಾರದ ಸಂಕೇತಗಳಾಗಿ ಉಳಿದವು.

ಚೆನ್ನಬಸವಣ್ಣ ಉಳವಿಗೆ ಬಂದು ಕೆಲವೇ ವರ್ಷ ಗಳಲ್ಲಿ ಅಂದರೆ , ಕೇವಲ *24ನೇ ವಯಸ್ಸಿನಲ್ಲಿ ಲಿಂಗೈಕ್ಯರಾದರು*. 74 ವರ್ಷ ಕಾಲ ಜೀವಿಸಿದರು ಮಾಡುವದಕ್ಕಿಂತ ಹೆಚ್ಚಿನ ಲಿಂಗಾಯತ ಧರ್ಮದ ಕಾರ್ಯ ಮಾಡಿದರು.
“ಕರ್ಣ ಹೇಸಿಗೆ ” ಮಂತ್ರ ಗೊಪ್ಯ ” ದಂತಹ ಕೃತಿಗಳು ಮತ್ತು ವಚನ ರಚಿಸಿ  ಲಿಂಗಾಯತ ಧರ್ಮದ ಎರಡನೆಯ ಧರ್ಮ ಗುರುಗಳಾಗಿ ಅಪಾರ ಕೊಡುಗೆಯನ್ನು ಕೊಟ್ಟಿದ್ದಾರೆ.ಶರಣರು ಹೊತ್ತು ತಂದ  ಇತರ ಶರಣರ ಸಾವಿರಾರು ವಚನಗಳು ಉಳಿದವು. ಅದರಿಂದಲೇ ಇಂದು ನಾವು ವಚನ ಓದುತ್ತೇವೆ.

” ವೀರಮಾತೆ ಅಕ್ಕನಾಗಲಾಂಬಿಕೆ, ಚೆನ್ನಬಸವಣ್ಣ, ಮಡಿವಾಳ ಮಾಚಯ್ಯನವರು ವೀರಾಗ್ರಣಿಗಳಾಗಿ ಕಾದಾಡಿ ತಮ್ಮ ಪ್ರಾಣ ತ್ಯಾಗ ಮಾಡಿ ವಚನ ವಾಙ್ಮಯ ನಿಧಿಯನ್ನು ಉಳಿಸಿಕೊಟ್ಟರು. ಅದಿಂದು ವಿಶ್ವದ ಹೆಮ್ಮೆಯ ಆಸ್ತಿಯಾಗಿದೆ. ಕನ್ನಡ ಸಾಹಿತ್ಯಕ್ಕೆ ವಿಶ್ವ ಮನ್ನಣೆ ದೊರಕಿದೆ. “

ಆ ಕಾರಣಕ್ಕೇ ಉಳವಿಯನ್ನು *“ಎರಡನೇ ಕಲ್ಯಾಣ”* ಮತ್ತು *“ವಚನಗಳ ತೊಟ್ಟಿಲು”* ಎನ್ನುತ್ತಾರೆ. ನೀವು ಇಂದು ಉಳವಿ ಗವಿಯಲ್ಲಿ ಕೈ ಇಟ್ಟರೆ, ಅದು ಕೇವಲ ಕಲ್ಲಲ್ಲ, ಶರಣರು ತಮ್ಮ ಪ್ರಾಣ ಪಣಕ್ಕಿಟ್ಟು ಕಾಪಾಡಿದ ಅಕ್ಷರಗಳ ಸ್ಪರ್ಶ.

– – ವೀರಶೆಟ್ಟಿ ಐನಾಪುರ, ಚಿಟಗುಪ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!