
ಬಳ್ಳಾರಿ / ಕಂಪ್ಲಿ : ಪಟ್ಟಣದ ಎಸ್ಎನ್ ಪೇಟೆಯ ಶ್ರೀ ರಾಘವೇಂದ್ರ ಶಾಖಾ ಮಠದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ವಿಕಾಸ ಕ್ರೆಡಿಟ್ ಅಂಡ್ ಮಲ್ಪಿಪರ್ಪಸ್ ಸಹಕಾರ ಸಂಘದ 13ನೇ ವಾರ್ಷಿಕ ಮಹಾಜನ ಸಭೆ
ಸಹಕಾರ ಸಂಘದ ಅಧ್ಯಕ್ಷ ಎಂ. ಗೋವರ್ಧನ ಅಧ್ಯಕ್ಷತೆವಹಿಸಿ ಮಾತನಾಡಿ, ಸಣ್ಣ ಮಟ್ಟದಲ್ಲಿ 5.50 ಲಕ್ಷ ಬಂಡವಾಳದೊಂದಿಗೆ ಸಹಕಾರ ಸಂಘವನ್ನು 13 ವರ್ಷದ ಹಿಂದೆ ಸ್ಥಾಪಿಸಿ, ಉದ್ಯೋಗ ಸೃಷ್ಠಿಸಿ, ಗ್ರಹಕರಿಗೆ ಸಾಲ ಸೌಲಭ್ಯ ಕಲ್ಪಿಸುತ್ತಾ, ಪ್ರತಿಯೊಬ್ಬರ ಸಹಕಾರದೊಂದಿಗೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಕಂಪ್ಲಿ ಪಟ್ಟಣದಲ್ಲಿ ಕೇಂದ್ರ ಕಛೇರಿ ಆರಂಭಿಸಿ, ಈಗ ಗಂಗಾವತಿ, ಕುರುಗೋಡು, ಸಿರಿಗೇರಿ, ಬಳ್ಳಾರಿ, ಕರೂರು ಮತ್ತು ಹೊಸಪೇಟೆ ನಗರದಲ್ಲಿ ತನ್ನ ಶಾಖೆಗಳನ್ನು ಹೊಂದಿದ್ದು, ಅಲ್ಲಿ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುತ್ತಿದ್ದು, ಸಂಘದ ಸದಸ್ಯರು, ಸಾರ್ವಜನಿಕರು ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಬಿ.ಕೆ.ಅಶೋಕ ಕುಮಾರ್ ವಾರ್ಷಿಕ ವರದಿ ಮಂಡಿಸಿ ಮಾತನಾಡಿ, ಸಹಕಾರ ಸಂಘವು 3509 ಸದಸ್ಯರನ್ನು ಹೊಂದಿದ್ದು, 1,84,35,500 ರೂ.ಗಳ ಷೇರು ಬಂಡವಾಳ ಹೊದಿದೆ. ಸುಮಾರು 25,21,24,131 ರೂ.ಗಳನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಸಾಲದ ರೂಪದಲ್ಕಿ ವಿತರಿಸಲಾಗಿದೆ. ಸಂಘವು ಸುಮಾರು 33.05ಲಕ್ಷ ನಿವ್ವಳ ಲಾಭಗಳಿಸಿದೆ. ಮತ್ತು ಸಂಘದ ಸದಸ್ಯರಿಗೆ ಶೇ.11 % ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದರು.
ನಂತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಬಿ.ಮಲ್ಲಪ್ಪ, ನಿರ್ದೇಶಕರಾದ ಹೂವಣ್ಣ, ಎರೆಪ್ಪ, ಹನುಮಂತಪ್ಪ ಎನ್, ವೇಣುಗೋಪಾಲ್ ಎಂ, ಶೇಷಗಿರಿ ಆಚಾರ್ ಜೆ, ಮಲ್ಲಿಕಾರ್ಜುನ ಡಿ, ತಿಮ್ಮಪ್ಪ ಯು, ಶಿವಶಂಕ್ರಪ್ಪ ಕೆ, ಸತೀಶ್ ರಾಯ್ಕರ್, ಗಾದಿಲಿಂಗ ಬಿ, ಹೇಮಾವತಿ ಎಂ, ಉಮಾದೇವಿ ಬಿ, ಖಾಸಿಂಬೀ ಎನ್, ರಾಜಮ್ಮ ಎಚ್, ಸರಸ್ವತಿ ಎಚ್, ಪೂರ್ಣಿಮಾ ಜಿ ಮತ್ತು ಪುಷ್ಪಲತಾ ಗೌಡ ಇ ಹಾಗು ಸಿಬ್ಬಂದಿಗಳಾದ ವ್ಯವಸ್ಥಾಪಕ ಎಂ. ಬಿ.ಆಂಜಿನೇಯ, ಸಿಬ್ಬಂದಿಗಳಾದ ಮೈಬೂಬ್ ಪಾಷ ಡಿ, ಮಂಜುನಾಥ ಕೆ, ಸಚಿನ್ ಯು ಟಿ ಮತ್ತು ಸುಮಲತಾ ಡಿ ಸೇರಿದಂತೆ ಮುಖಂಡರು, ಗ್ರಾಹಕರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















