
ಕೊಪ್ಪಳ : ಸುವರ್ಣ ಕರ್ನಾಟಕ ರಕ್ಷಣಾ ಸೈನ್ಯ ಸಂಘಟನೆಯ ಕೊಪ್ಪ ಜಿಲ್ಲಾ ಮಾದ್ಯಮ ವಕ್ತಾರರನ್ನಾಗಿ “ಉತ್ತರ ಕರ್ನಾಟಕ ನೈಜತೆಯ ತಿರುವು” ಪ್ರಾದೇಶಿಕ ಕನ್ನಡ ದಿನ ಪತ್ರಿಕೆಯ ಸಂಪಾದಕರಾದ ಶ್ರೀ ಕನಕಪ್ಪ ತಳವಾರ ರವರನ್ನು ಆಯ್ಕೆ ಮಾಡಲಾಗಿದೆ.
ಸಂಘಟನೆಯ ರಾಜ್ಯ ಘಟಕದ ರಾಜ್ಯಾಧ್ಯಕ್ಷರಾದ ಟಿ.ಕೆ ನಾಯ್ಕ ಅವರ ಆದೇಶದ ಮೇರೆಗೆ ಜಿಲ್ಲಾ ವಕ್ತಾರಿಕೆಯ ಜವಾಬ್ದಾರಿಯನ್ನು ಕನಕಪ್ಪನವರ ಅವರಿಗೆ ವಹಿಸಲಾಗಿದೆ.
ನಾಡು, ನುಡಿ, ನೆಲ-ಜಲ, ಭಾಷೆ, ಸಂಸ್ಕೃತಿಯ ಘನತೆಯನ್ನು ಎತ್ತಿ ಹಿಡಿಯುವಲ್ಲಿ “ರಾಜ್ಯ ಸುವರ್ಣ ಕರ್ನಾಟಕ ರಕ್ಷಣಾ ಸೈನ್ಯ”ವು ಹಗಲಿರುಳು ಅನೇಕ ಹೋರಾಟಗಳ ಮೂಲಕ ಶ್ರಮಿಸುತ್ತಿದ್ದು, ರಾಜ್ಯಾದ್ಯಂತ ತನ್ನ ಸಂಘಟನಾತ್ಮಕ ಹೋರಾಟಗಳಲ್ಲಿ ಜೊತೆಯಾಗುವಂತೆ ಮತ್ತು ಸು.ಕ.ರ ಸೈನ್ಯದ ಜಿಲ್ಲಾ ವಕ್ತಾರಿಕೆಯನ್ನು ನೀಡಿ ಜಿಲ್ಲಾ ಮಟ್ಟದ ಜವಾಬ್ದಾರಿಯನ್ನು ಕನಕಪ್ಪ ತಳವಾರ ಹೆಗಲಿಗೆ ಹಾಕುವ ಮೂಲಕ ಕನಕಪ್ಪನವರಿಗೆ ಮಾದ್ಯಮ ಕ್ಷೇತ್ರದ ಜೊತೆ ಜೊತೆಗೆ ನಾಡು-ನುಡಿಯ ಕಾವಲುಗಾರರನ್ನಾಗಿಸಿದೆ.
- ಕರುನಾಡ ಕಂದ ಸುದ್ದಿ




















