
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಪ್ರಥಮ ಬಾರಿಗೆ ಮ್ಯಾರಾಥಾನ್ ಓಟವನ್ನು ಮಲೆನಾಡು ಕೆರಿಯರ್ ಅಕಾಡೆಮಿ ಹಾಗೂ ರೋಟರಿ ಕ್ಲಬ್ ಇವರು ಆಯೋಜಿಸಿದರು.
ಈ ಮ್ಯಾರಾಥಾನ್ ಓಟವನ್ನು ಮಲೆನಾಡಿನ ಹೆಮ್ಮೆಯ ಆಟಗಾರ್ತಿ ಸ್ನೇಹ ಶಾನುವಳ್ಳಿ ಉದ್ಘಾಟಿಸಿದರು. ಸುಮಾರು 250 ಹೆಚ್ಚು ಜನ ಭಾಗವಹಿಸಿದ್ದರು. ಅದರಲ್ಲಿ 5 ವರ್ಷದಿಂದ 65 ವರ್ಷದವರು ಸಹ ಇದ್ದರು. 14 ವರ್ಷಕ್ಕಿಂತ ಚಿಕ್ಕವರಿಗೆ 2 ಕಿಲೋಮೀಟರ್, 14 ದಿಂದ 19 ವರ್ಷದವರಿಗೆ 3 ಕಿಲೋಮೀಟರ್ , 19 ವರ್ಷದಿಂದ 35 ವರ್ಷದವರಿಗೆ 5 ಕಿಲೋಮೀಟರ್ ಹಾಗೂ 35 ವರ್ಷ ಮೇಲ್ಪಟ್ಟವರಿಗೆ 3 ಕಿಲೋಮೀಟರ್ ಓಟ ಏರ್ಪಡಿಸಲಾಗಿತ್ತು, ಅದರಲ್ಲಿ ಎಲ್ಲಾ ವಿಭಾಗಕ್ಕೂ ಮೊದಲನೇ, ಎರಡನೇ ಹಾಗೂ ತೃತೀಯ ಬಹುಮಾನ, ಮೆಡಲ್ ಸೇರಿದಂತೆ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಮೆಡಲ್ಗಳನ್ನು ನೀಡಲಾಯಿತು.
ಬಹುಮಾನ ವಿತರಿಸಿ ಸ್ನೇಹ ಶಾನುವಳ್ಳಿ ಸ್ಪರ್ಧಾಳುಗಳಿಗೆ ಆಟದಿಂದ ದೇಹ ಹಾಗೂ ಮನಸ್ಸಿಗೆ ಆಗುವ ಲಾಭ ಹಾಗೂ ನೆಮ್ಮದಿ ಬಗ್ಗೆ ವಿವರಿಸಿದರು. ಏಷಿಯನ್ ಗೇಮ್ ನಲ್ಲಿ ಕಂಚಿನ ಪದಕ ಗೆದ್ದ ಸ್ನೇಹ ಶಾನುವಳ್ಳಿಯವರಿಗೆ ಮಲೆನಾಡು ಕೆರಿಯರ್ ಅಕಾಡೆಮಿ ಹಾಗೂ ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಸ್ನೇಹ ಶಾನುವಳ್ಳಿ ಯವರು ಮಲೆನಾಡು ಕೆರಿಯರ್ ಅಕಾಡೆಮಿಯವರ ಕ್ರೀಡಾ ಅಭಿಮಾನ ಹೀಗೆಯೇ ಮುಂದುವರಿಯಲಿ ಎಂದು ಹೇಳಿದರು.
ವರದಿ : ಪ್ರಸಾದ್ ತೀರ್ಥಹಳ್ಳಿ.




















