ವಿದ್ಯುತ್ ಕಳ್ಳತನ ಮಹಾ ಅಪರಾಧ ಅರಿವು ಹಾಗೂ ವಿದ್ಯುತ್ತ ಬಿಲ್ ವಸೂಲಾತಿ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮೀರಗಿ ಗ್ರಾಮದಲ್ಲಿ ಅಕ್ರಮವಾಗಿ ವಿದ್ಯುತ್ ಬಳಕೆ ಮಾಡುತ್ತಿದ್ದವರ ವಿರುದ್ಧ ಹೆಸ್ಕಾಂ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಅನಧಿಕೃತವಾಗಿ ಬಳಕೆ ಮಾಡಲಾಗುತ್ತಿದ್ದ ನೀರಿನ ಮೋಟಾರ್, ವಾಟರ್ ಹೀಟರ್ ಹಾಗೂ ವಿದ್ಯುತ್ ಒಲೆ ಸೇರಿದಂತೆ ವಿವಿಧ ವಿದ್ಯುತ್ ಉಪಕರಣಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದೆ.
ಅಕ್ರಮ ವಿದ್ಯುತ್ ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು ಕೈಗೊಂಡ ಈ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ಗಮನ ಸೆಳೆದಿದೆ. ವಿದ್ಯುತ್ ಸಂಪರ್ಕವನ್ನು ಕಾನೂನು ಬದ್ಧವಾಗಿ ಪಡೆದು ವಿದ್ಯುತ್ತನ್ನು ಸುರಕ್ಷಿತವಾಗಿ ಹಾಗೂ ನಿಯಮಾನುಸಾರ ಬಳಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ನಾದ್ ಶಾಖೆಯ ಶಾಖಾಧಿಕಾರಿಗಳಾದ ಉಮೇಶ್ ಸೋಲಾಪುರ್ ಇವರ ನೇತೃತ್ವದಲ್ಲಿ ಶಾಖೆಯ ಸಿಬ್ಬಂದಿ ಒಡಗೂಡಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪಿ. ಎಸ್. ಮಾನೆ, ಎ.ಆರ್. ರೆಹಮಾನ್, ಮಹಾಂತೇಶ್ ಇಂಡಿ, ಶಿವಲಿಂಗ ತೆಗ್ಗೆಳ್ಳಿ ,ಸಂತೋಷ್ ರಾವೂರ, ಬಸವರಾಜ್ ಹೊನ್ನಳ್ಳಿ, ಸಾಹೇಬ್ ಗೌಡ ತಾವರಖೇಡ, ಮಲ್ಲು ಮನಗೂಳಿ, ಮೊಹ್ಮದ್ ಅರಿಫ್ ಇನಾಮ್ದಾರ್ ಹಾಗೂ ಗೌಡಪ್ಪ ಬಿರಾದಾರ್ ಇವರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಂಘಟಿತ ಪ್ರಯತ್ನದಿಂದ ಅಕ್ರಮವಾಗಿ ಬಳಸಲಾಗುತ್ತಿದ್ದ ವಿದ್ಯುತ್ ಸಾಮಗ್ರಿಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿ ಸಾಧಿಸಲಾಗಿದೆ.
ವಿದ್ಯುತ್ ಕಳ್ಳತನ ಹಾಗೂ ಅನಧಿಕೃತ ವಿದ್ಯುತ್ ಬಳಕೆಯಿಂದ ಇಲಾಖೆಗೆ ಆಗುವ ನಷ್ಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಂತಹ ಕಾರ್ಯಚರಣೆಗಳು ಮಹತ್ವದಾಗಿವೆ. ಸಾರ್ವಜನಿಕರು ವಿದ್ಯುತ್ ಸಂಪರ್ಕವನ್ನು ಕಾನೂನು ಬದ್ಧವಾಗಿ ಪಡೆದು ವಿದ್ಯುತ್ ನಿಯಮಗಳನ್ನು ಪಾಲಿಸುವ ಮೂಲಕ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಈ ಕಾರ್ಯಾಚರಣೆಯು ಸಂದೇಶ ನೀಡಿದೆ.
ಅಕ್ರಮ ವಿದ್ಯುತ್ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಧಿಕಾರಿಗಳು ಕೈಗೊಂಡ ಈ ಕ್ರಮ ಸಾರ್ವಜನಿಕರ ಗಮನ ಸೆಳೆದಿದೆ.




















