ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಪ್ಲಿ ವರ್ತಕರ ಅಂಗಡಿಗಳಿಗೆ ಶಾಸಕ ಜೆ.ಎನ್. ಗಣೇಶ್, ಹೊಸಕೋಟೆ ಜಗದೀಶ್ ಭೇಟಿ: ಲಕ್ಷ್ಮೀ ದೇವಿಗೆ ವಿಶೇಷ ನಮನ

ಕಂಪ್ಲಿ: ಇಲ್ಲಿನ ಮಾರುಕಟ್ಟೆ ಪ್ರದೇಶದ ವಿವಿಧ ವರ್ತಕರ ಅಂಗಡಿ ಮುಂಗಟ್ಟುಗಳಿಗೆ ಕಂಪ್ಲಿ ಕ್ಷೇತ್ರದ ಶಾಸಕರಾದ ಜೆ.ಎನ್. ಗಣೇಶ್ ಹಾಗೂ ಬಳ್ಳಾರಿ ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷರಾದ ಹೊಸಕೋಟೆ ಜಗದೀಶ್ ಅವರುಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
ಪಟ್ಟಣದ ಪ್ರಮೋದ್ ಭಟಾರಿ ಫೋಟೋ ಸ್ಟುಡಿಯೋ ಸೇರಿದಂತೆ ಸಾಲು ಸಾಲಾಗಿ ಇತರೆ ಎಲ್ಲಾ ಪ್ರಮುಖ ವ್ಯಾಪಾರ ಮಳಿಗೆಗಳಿಗೆ ಇಬ್ಬರು ನಾಯಕರು ಭೇಟಿ ನೀಡಿದರು. ಪ್ರತಿ ಅಂಗಡಿಯಲ್ಲೂ ಪ್ರತಿಷ್ಠಾಪಿಸಲಾಗಿದ್ದ ಜಗನ್ಮಾತೆ ಲಕ್ಷ್ಮೀ ದೇವಿಯ ಭವ್ಯ ಮೂರ್ತಿ ಹಾಗೂ ಭಾವಚಿತ್ರಗಳಿಗೆ ಶ್ರದ್ಧಾಭಕ್ತಿಯಿಂದ ನಮಸ್ಕರಿಸಿ, ಪುಷ್ಪಾರ್ಚನೆ ಮಾಡಿದರು.
ಶಾಸಕ ಜೆ.ಎನ್. ಗಣೇಶ್ ಮಾತನಾಡಿ,
“ಕಂಪ್ಲಿ ಪಟ್ಟಣದ ಆರ್ಥಿಕ ಪ್ರಗತಿಯಲ್ಲಿ ಸ್ಥಳೀಯ ವರ್ತಕರ ಪಾತ್ರ ದೊಡ್ಡದಾಗಿದೆ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ವ್ಯಾಪಾರಿಗಳು ಶ್ರದ್ಧೆಯಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಸಂತಸ ತಂದಿದೆ. ತಾಯಿ ಲಕ್ಷ್ಮೀದೇವಿ ಎಲ್ಲಾ ವರ್ತಕರಿಗೂ, ಸಾರ್ವಜನಿಕರಿಗೂ ಆಯುಷ್ಯ, ಆರೋಗ್ಯ ಹಾಗೂ ಸುಖ-ಸಮೃದ್ಧಿ ನೀಡಲಿ,” ಎಂದು ಆಶಿಸಿದರು.

ಬಳ್ಳಾರಿ ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷರಾದ ಹೊಸಕೋಟೆ ಜಗದೀಶ್ ಮಾತನಾಡಿ, “ನಮ್ಮ ಸಂಸ್ಕೃತಿ ಮತ್ತು ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಒಗ್ಗಟ್ಟನ್ನು ಮೂಡಿಸುತ್ತವೆ. ವರ್ತಕ ಮಹಾಶಯರು ಒಟ್ಟಾಗಿ ಇಂತಹ ವಿಶೇಷ ಪೂಜೆಗಳನ್ನು ಆಯೋಜಿಸುವ ಮೂಲಕ ಸೌಹಾರ್ದತೆ ಮೆರೆಯುತ್ತಿದ್ದಾರೆ. ಎಲ್ಲರ ವ್ಯಾಪಾರ-ವ್ಯವಹಾರಗಳು ಉತ್ತಮವಾಗಿ ನಡೆದು, ಸಮೃದ್ಧಿ ಕಾಣಲಿ,” ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವರ್ತಕ ಸಂಘದ ಪ್ರಮುಖ ಮುಖಂಡರಾದ ರಾಜಾರಾವ್, ಯುಗಾದಿ ಶಿವರಾಜ್, ಮತ್ತು ಡಿ. ಮೌನೇಶ್, ನಾಗರಾಜ್, ಹಂಪಾರೆಡ್ಡಿ, ಪ್ರಮೋದ್ ಸೇರಿದಂತೆ ಇತರ ಪ್ರಮುಖ ಪದಾಧಿಕಾರಿಗಳು ಹಾಗೂ ಸ್ಥಳೀಯ ವರ್ತಕರು ಉಪಸ್ಥಿತರಿದ್ದು, ಇಬ್ಬರೂ ಗಣ್ಯರನ್ನು ಗೌರವಪೂರ್ವಕವಾಗಿ ಬರಮಾಡಿಕೊಂಡು ಸನ್ಮಾನಿಸಿದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!