ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೆಸ್ಕಾಂ ಇಂಡಿ ಉಪವಿಭಾಗದ ಅಂಜುಟಗಿ ಶಾಖೆಯ ವ್ಯಾಪ್ತಿಯಲ್ಲಿ ಬಾಕಿ ಇರುವ ವಿದ್ಯುತ್ತ ಬಿಲ್ ವಸೂಲಾತಿಗಾಗಿ ವಿಶೇಷ ಕಂದಾಯ ವಸೂಲಾತಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಆಂದೋಲನವು ದಿನಾಂಕ: 21/11/2026 ರಿಂದ 30/11/2026 ರ ವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ಶಾಖೆಯ ಎಲ್ಲಾ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಬಾಕಿ ಬಿಲ್ಲುಗಳ ವಸೂಲಾತಿ ಮಾಡಲಿದ್ದಾರೆ.
ಅಂಜುಟಗಿ ಶಾಖೆಯ ವ್ಯಾಪ್ತಿಯಲ್ಲಿ ಅಂಜುಟಗಿ, ನಿಂಬಾಳ, ಭತಗುಣಕಿ,ಗ್ರಾಮದಲ್ಲಿ ಸಾಕಷ್ಟು ಗ್ರಾಹಕರು ತಿಂಗಳುಗಟ್ಟಲೆ ವಿದ್ಯುತ್ತ ಬಿಲ್ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದಾರೆ.ಇದರಿಂದ ಹೆಸ್ಕಾಂ ಇಲಾಖೆಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ.
ಬಾಕಿ ಬಿಲ್ಲು ಪಾವತಿಸದ ಗ್ರಾಹಕರ ವಿದ್ಯುತ್ತ ಸಂಪರ್ಕವನ್ನು ನಿಯಮದಂತೆ ಕಡಿತ ಗೊಳಿಸಲಾಗುವುದು. ಆದ್ದರಿಂದ ಗ್ರಾಹಕರು ವಿದ್ಯುತ್ ಕಡಿತದಿಂದ ತಪ್ಪಿಸಿಕೊಳ್ಳಲು ಕೂಡಲೇ ತಮ್ಮ ಬಾಕಿ ಬಿಲ್ಲನ್ನು ಪಾವತಿಸಿ ಸಹಕರಿಸಬೇಕು.
ಇಂದು ಅಂಜುಟಗಿ ಗ್ರಾಮದಲ್ಲಿ ಶಾಖಾಧಿಕಾರಿ ಎಸ್ ಎಸ್ ಇಮ್ಮನದವರ್ ನೈತ್ರತ್ವದಲ್ಲಿ ಹೆಸ್ಕಾ ಸಿಬ್ಬಂದಿಗಳಾದ
ಮೇಲ್ವಿಚಾರಕಾರದ ಎಸ್ ಬಿ ಕಂಠೀಕರ
ಸಿಬ್ಬಂದಿಗಳಾದ
ರಾಮನಗೌಡ ಇಬ್ರಾಹಿಂಪೂರ್
ಶಿವಾನಂದ ಡೊಳ್ಳಿ
ಅರ್ಜುನ ಗಂಗಾಧರ
ನಾಗೇಶ ಮೇತ್ರಿ
ಶಿವರಾಯ ಮಾಂಗ
ಬನಪ್ಪ ಮಳಿವಡೆರ
ಎಮ್ ಬಿ ಅಲಬಗೊಂಡ್ ಇವರೆಲ್ಲರೂ ಈ ಆಂದೋಲನದಲ್ಲಿ ಹಾಜರಿದ್ದರು.




















