ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಹಕಾರ ಕ್ಷೇತ್ರದಿಂದ ಆರ್ಥಿಕ ಅಭಿವೃದ್ಧಿ ಸಾಧ್ಯ : ಶೇಖರಗೌಡ ಮಾಲಿ ಪಾಟೀಲ್

ಕಾರಟಗಿ :ಅಧ್ಯಕ್ಷರು, ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ ಕಿಂದಕ್ಯಾಂಪ್-15, ಆರ್ಥಿಕವಾಗಿ ಸಬಲರಾಗಲು ಪ್ರತಿಯೊಂದು ಗ್ರಾಮದಲ್ಲಿ ಸಹಕಾರ ಸಂಘಗಳನ್ನು ಕಟ್ಟಿಕೊಂಡು ಸೇವಾ ಮನೋಭಾವದಿಂದ ಎಲ್ಲಾರು ಒಗ್ಗಟ್ಟಗಾಗಿ ಕೆಲಸ ನಿರ್ವಹಿಸುವದರ ಜೊತೆಗೆ ಸದಸ್ಯರ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯವೆಂದು ಯರಡೋಣ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಕಿಂದಕ್ಯಾಂಪ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿ., ಬಳ್ಳಾರಿ, ಯರಡೋಣ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಕಿಂದಕ್ಯಾಂಪ್ ಹಾಗೂ ಸಹಕಾರ ಇಲಾಖೆ, ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ 15-11-2026 ರಂದು ಮಧ್ಯಾಹ್ನಾ: 03.00 ಘಂಟೆಗೆ 73ನೇ ಸಹಕಾರ ಸಪ್ತಾಹದ ಅಂಗವಾಗಿ “ಸಹಕಾರ ಸಂಸ್ಥೆಗಳ ಬೆಳವಣಿಗೆಯಲ್ಲಿ ಉತ್ತಮ ಪರಿಸರ, ತಂತ್ರಜ್ಞಾನ, ಕೌಶಲ್ಯಾಧಾರಿತ, ವೃತ್ತಿಪರ ಸೇವೆ” ಎಂಬ ಸಪ್ತಾಹದ ಮುಖ್ಯಧೈಯದೊಂದಿಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಶೇಖರಗೌಡ ಮಾಲಿ ಪಾಟೀಲ್ ರವರು ವಹಿಸಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡುತ್ತಾ ಇಂತಹ ಪವಿತ್ರವಾದ ಕ್ಷೇತ್ರದಲ್ಲಿ ಕೆಲಸ ಮಾಡುವುದು ನಿಜವಾಗಿ ಸಾರ್ಥಕವಾದ ಬದುಕು ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿ., ಬಳ್ಳಾರಿ ಉಪಾಧ್ಯಕ್ಷರಾದ ಎನ್ ಸತ್ಯನಾರಾಯಣರವರು ಜ್ಯೋತಿ ಬೆಳಗಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿವೆ ಈ ನಿಟ್ಟಿನಲ್ಲಿ ಸಹಕಾರ ಸಂಘಗಳು ತಮ್ಮ ಆದಾಯದ ಜೋತೆಗೆ ಸದಸ್ಯರ ಅಭಿವೃದ್ದಿಗೊಸ್ಕರ ಸೇವೆ ಮಾಡುತ್ತಿವೆ ಎಂದು ಸಾಗಿಸಿದರು.

ಕಾರ್ಯಕ್ರಮದಲ್ಲಿ ಸಹಕಾರ ಸಪ್ತಾಹದ ಇಂದಿನ ವಿಷಯ ಗಣಕೀಕರಣ, ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲೈಜೇಷನ್ ಪ್ರಕ್ರಿಯೆಗಳು ಸಹಕಾರ ಸಂಸ್ಥೆಗಳ ಬೆಳವಣಿಗೆಗೆ ಪೋಷಕ ಎಂಬ ವಿಷಯದ ಕುರಿತು ಶರಣಬಸಪ್ಪ ಬಿಳೆಎಲಿ ಅರ್ಥಶಾಸ್ತ್ರ ಉಪನ್ಯಾಸಕರು, ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯ, ಕೊಪ್ಪಳ ಇವರು ಉಪನ್ಯಾಸ ನೀಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಆರ್.ಕೆ ಡಿ.ಸಿ.ಸಿ ಬ್ಯಾಂಕಿನ ನಿರ್ದೇಶಕರಾದ ಶರಣಗೌಡ ಕೊಂತನೂರು ಪೋಲಿಸ್ ಪಾಟೀಲ್, ಪಿ. ಅಜಯ್‌ಕುಮಾರ ಅಧ್ಯಕ್ಷರು, ಯರಡೋಣಕ್ಯಾಂಪ್ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಕಿಂದ್‌ಕ್ಯಾಂಪ್ ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ನಿನ ಉಪಾಧ್ಯಕ್ಷರಾದ ಹಾಲಯ್ಯ ಹುಡೇಜಾಲಿ, ನಿರ್ದೆಶಕರಾದ ಶರಣಗೌಡ ಸುಂದರ್ ರಡ್ಡಿ, ಯರಡೋಣಕ್ಯಾಂಪ್ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಕಿಂದ್‌ಕ್ಯಾಂಪ್ ಉಪಾಧ್ಯಕ್ಷರಾದ ಯು. ದೇವೇಂದ್ರಪ್ಪ ನಿರ್ದೇಶಕರುಗಳಾದ ವಿ.ವೆಂಕಟರಾಜು, ಪಿ. ರಾಜು, ಶ್ರೀಮತಿ ವಿ. ನಾಗಮಣಿ, ವಾಯ್. ವೆಂಕಣ್ಣ, ವಿ. ಸತ್ಯನಾರಾಯಣ, ಶ್ರೀಮತಿ ಪುಷ್ಪಾವತಿ, ಕೆ. ಸಿದ್ದಯ್ಯಸ್ವಾಮಿ, ಭೀಮಪ್ಪ, ಯಮನೂರಪ್ಪ, ಶ್ರೀಮತಿ ರೇಣುಕಮ್ಮ, ಶ್ರೀಮತಿ ಯು. ಲಕ್ಷ್ಮೀ ಹಿರಿಯ ಸಹಕಾರಿಗಳಾದ ಬಿ. ಶ್ರೀನಿವಾಸು.

  1. ಗಣಪತಿ. ವಾಯ್. ರಾಜು, ವೆಂಕಣ್ಣ ಮಾಜಿ ಅಧ್ಯಕ್ಷರು, ಸಹಕಾರ ಯೂನಿಯನ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಅಕ್ಷಯ್‌ ಕುಮಾರ ವ್ಯವಸ್ಥಾಪಕರಾದ ರಾಜಶೇಖರ ಹೊಸಮನಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಅಧಿಕಾರಿಯಾದ ರಮೇಶ, ಹಾಲು ಒಕ್ಕೂಟದ ಅಧಿಕಾರಿಗಳಾದ ಗವಿಸಿದ್ದಪ್ಪ ಹಣವಾಳ ಹಾಗೂ ಸಂಘದ ಕಾರ್ಯದರ್ಶಿಯಾದ ಆರ್ ಪಟ್ಟಾಭಿರಾಮು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಯೂನಿಯನ್ನಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾದ ಅಕ್ಷಯ್ ಕುಮಾರ ಇವರು ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಕಾರ್ಯಕ್ರಮವನ್ನು ರಾಜಶೇಖರ ಎಂ. ಹೊಸಮನಿ ನಿರೂಪಿಸಿದರು. ಕೊನೆಯಲ್ಲಿ ಸಂಘದ ಕಾರ್ಯದರ್ಶಿಯಾದ ಆರ್ ಪಟ್ಟಾಭಿರಾಮು ಇವರು ವಂದಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!