ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಾಂಗ್ರೆಸ್ ಪಕ್ಷದ ಚುನಾವಣೆಯ ಪ್ರಚಾರ

ಇಂಡಿ : ಕಾಂಗ್ರೆಸ್ ಜಾತಿ,ಮತ,ಪಂಥ ಎನ್ನದೇ ಅಖಂಡ ಭಾರತದ ಪ್ರತಿಯೊಬ್ಬ ಪ್ರಜೆಯ ಸಮಸ್ಯೆ ಆಲಿಸಿ ಪರಿಹರಿಸುವ ಕೆಲಸ ಮಾಡುತ್ತಿರುವ ಪಕ್ಷ ಆಗಿದೆ. ನುಡಿದಂತೆ ನಡೆಯುವ ಪಕ್ಷ ಎಂದು ಪೂನಾ ಮತಕ್ಷೇತ್ರದ ಶಾಸಕ ಸಂಗ್ರಾಮ ಗಂಗೇಕರ ಹೇಳಿದರು.
ತಾಲೂಕಿನ ಸಾತಲಗಾಂವ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಚುನಾವಣೆಯ ಪ್ರಚಾರದಲ್ಲಿ ಮಾತನಾಡುತ್ತಿದ್ದರು.
ಶಾಸಕ ಯಶವಂತರಾಯಗೌಡ ಪಾಟೀಲರು ಮಾತನಾಡಿ
ತಮ್ಮ ಆಡಳಿತಾವಧಿಯಲ್ಲಿ ಜನಪರ ಯೋಜನೆಗಳನ್ನು ಹಂಗಿನ ಬದುಕಿನಿಂದ ಹಕ್ಕಿನ ಬದುಕಿನೊಡೆಗೆ ತೆಗೆದುಕೊಂಡು ಹೋಗಿದ್ದೇನೆ.
ಹಸಿದವರು, ನೋವುಂಡವರು, ತುಳಿತಕ್ಕೊಳಗಾದವರಿಗೆ ಆದ್ಯತೆ ನೀಡಿದ್ದೇನೆ. ಎಲ್ಲರನ್ನು ಒಳಗೊಳ್ಳುವ ಅಭಿವೃದ್ಧಿ ದೃಷ್ಟಿಕೋನದೊಂದಿಗೆ ಅಭಿವೃದ್ಧಿಯತ್ತ ಇಂಡಿ ಮತಕ್ಷೇತ್ರ ನಿರ್ಮಾಣ, ಕೃಷಿ, ಹಳ್ಳಿಗಳ ಸಮಗ್ರ ಅಭಿವೃದ್ಧಿ, ಶಿಕ್ಷಣಕ್ಕೆ ಪ್ರಮುಖ ಆದ್ಯತೆ ನೀಡಿದ್ದೇನೆ ಮತ್ತು ಇಂಡಿ ಜಿಲ್ಲೆಯ ಕನಸು ಕಂಡಿದ್ದೇನೆ ಎಂದ ಅವರು ಬಿಜೆಪಿ ಸರಕಾರ ಪ್ರತಿಯೊಂದು ವಸ್ತುಗಳ ಬೆಲೆಏರಿಸಿ ಜನರನ್ನು ಸಂಕಷ್ಟದಲ್ಲಿ ಸಿಲುಕಿಸಿದ್ದಾರೆ ಎಂದರು.
ಮುಖಂಡ ಮಂಜುನಾಥ ಕಾಮಗೊಂಡ ಮಾತನಾಡಿ ಕೊರೊನಾ ಸಮಯದಲ್ಲಿ ಶಾಸಕ ಯಶವಂತರಾಯಗೌಡರು ಇಂಡಿಯಲ್ಲಿಯೇ ಇದ್ದು ಎಲ್ಲ ರೀತಿಯ ಸಹಕಾರ ನೀಡಿದ್ದಾರೆ.ಕಾರಣ ಪಾಟೀಲರಿಗೆ ಅತ್ಯಧಿಕ ಮತ ನೀಡುವುದರ ಮೂಲಕ ಅವರನ್ನು ಆಯ್ಕೆ ಮಾಡಬೇಕು ಎಂದರು.
ಗ್ರಾ.ಪA ಉಪಾಧ್ಯಕ್ಷ ಸಂಗಣ್ಣ ಹೊಸುರ,ಮಮ್ಮು ತಾಂಬೊಳಿ,ಗೌಡಪ್ಪಗೌಡ ಬಿರಾದಾರ,ಶಿವಯ್ಯ ಮಠ,ಕಾಂತು ಲಿಂಗದಳ್ಳಿ,ಅಲ್ಲಾವುದ್ದೀನ ಮುಲ್ಲಾ, ರವಿ ಮಡಗೊಂಡ, ಸಲೀಂ ಮಕಾನದಾರ,ಪ್ರಕಾಶ ಮುಳಸಾವಳಗಿ,ಎಲ್ಲು ಬಮಗೊಂಡ ಮತ್ತಿತರಿದ್ದರು.
ವರದಿ.ಅರವಿಂದ್ ಕಾಂಬಳೆ ಇಂಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!