ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ.
ತಾಲೂಕಿನ ಡಣಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ದಿನಾಂಕ: 04-07-2023 ರಂದು ಅಧ್ಯಕ್ಷರ ಚುನಾವಣೆ ನಡೆದಿದ್ದು ಕ್ರಮಬದ್ದವಾಗಿ ನಡೆದ ಚುನಾವಣೆಯ ಪ್ರಕ್ರಿಯೆಯಲ್ಲಿ ಜಗದೀಶ ಜಿ ತಂದೆ ಚಂದ್ರಶೇಖರಗೌಡ ಅವರನ್ನು ಚುನಾವಣಾಧಿಕಾರಿಯವರಾದ ಬಸಪ್ಪ ಗಾಳಿ ಅವರು ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆಂದು ಘೋಷಿಸಲಾಯಿತು
ಅದರ ನಿಮಿತ್ಯ ಇಂದು ಅಧ್ಯಕ್ಷರ ಸ್ಥಾನದ ಅಧಿಕಾರ ಸ್ವೀಕಾರ ಕಾರ್ಯಕ್ರಮ ಸಂಘದ ಕಾರ್ಯಲಯದಲ್ಲಿ ಜರುಗಿತು .
ಈ ವೇಳೆ ಗ್ರಾಮದ ಹಿರಿಯರಾದ ಮಲ್ಲನಗೌಡ ಮಾತನಾಡಿ ಸಹಕಾರ ಸಂಘಗಳು ರೈತರ ಪರವಾಗಿ ರೈತರ ಹೆಳಿಗಾಗಿ ಶ್ರಮವಹಿಸುತ್ತಿವೆ.ಸಂಘದ ಏಳಿಗೆಗಾಗಿ ಪ್ರಗತಿಗಾಗಿ ಶ್ರಮಹಿಸಿ ಸಂಘವನ್ನು ಮುನ್ನೆಡೆಸಿ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಜಗದೀಶ.ಜಿ.ಉಪಾಧ್ಯಕ್ಷರಾದ ಶಾಂತಮ್ಮ ಹಾಗೂ ಗ್ರಾಮದ ಹಿರಿಯ ಮುಖಂಡರಾದ ಮಲ್ಲನಗೌಡ, ಈರಣ್ಣ,ಶರಣೆಗೌಡ,ಚನ್ನಯ್ಯ,ನಾಗಪ್ಪ , ಮಲ್ಲಿಕಾರ್ಜುನಗೌಡ ಸಂಘದ ಸಿಇಒ ರಾಘವೇಂದ್ರ , ಸಂಘದ ಆಡಳಿತ ಮಂಡಳಿ ಸದಸ್ಯರಾದ ದೊಡ್ಡಭರಮಪ್ಪ,ಮಂಜುನಾಥ , ವೀರೇಶ,ನಾಗರಾಜ,ಸಂತೋಷ,ಜಂಬಣ್ಣ ಹಾಗೂ ರೈತರಾದ ರುದ್ರಗೌಡ,ರಾಮಣ್ಣ,ಶರಣೇಗೌಡ ಹಾಗೂ ಇತರರು ಭಾಗಿಯಾಗಿದ್ದರು.




















