ಕಲಬುರಗಿ:ಗ್ರಾಮೀಣ ಭಾಗದ ಯುವಕರು ಸೇರಿ ಉತ್ತಮ ಸಂದೇಶ ಇರುವ ಮಾದರಿ ಕಿರುಚಿತ್ರವನ್ನು ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ…ಜೀವ್ನಾ ಅಂದ್ರೆ ಇಷ್ಟೇನಾ..? ಎಂಬ ಕಿರುಚಿತ್ರದ ಸೂಗೂರ ಎನ್.ಗ್ರಾಮದ ಆರಾಧ್ಯ ದೈವ ಶ್ರೀ ಭೋಜಲಿಂಗೇಶ್ವರ ದೇವರ ಮಠದ ಪೀಠಾಧಿಪತಿಗಳಾಗಿರುವ ಶ್ರೀ ಶ್ರೀ ಶ್ರೀ ಹಿರಗಪ್ಪ ತಾತನವರ ಅಮೃತ ಹಸ್ತದಿಂದ ಟ್ರೈಲರ್ ಬಿಡುಗಡೆ ಮಾಡಲಾಯಿತು.ಈ ಚಿತ್ರವು ಸಮಾಜಕ್ಕೆ ಮಾದರಿಯಾಗುವ ಹಾಗೂ ನಮ್ಮ ಮಕ್ಕಳ ಜೀವನದ ಬಗ್ಗೆ ಅನೇಕ ದುಶ್ಚಟಗಳಿಂದಾಗುವ ಪರಿಣಾಮಗಳ ಬಗ್ಗೆ ಉತ್ತಮ ಸಂದೇಶ ಸಾರುವ ಕಿರುಚಿತ್ರ ಇದಾಗಿದ್ದು…ಟ್ರೈಲರ್ ಅನ್ನು ಜನರು ತುಂಬಾ ಸಂತೋಷದಿಂದ ಅಪ್ಪಿಕೊಂಡು ಯಶಸ್ವಿಯಾಗಿ ಮುನ್ನೆಡೆಸುತಿದ್ದಾರೆ,ಉತ್ತಮ ಪ್ರತಿಕ್ರಿಯೆಗಳು ಜನರಿಂದ ಬರುತ್ತಿವೆ.ಈ ಚಿತ್ರಕ್ಕೆ ದೇವರಾಜ ಯಾಲಿ ಉತ್ತಮ ಮೋಟಿವೇಷನ್ ನಿರೂಪಕರು ಸಾಥ್ ನೀಡಿದ್ದಾರೆ.ಶ್ರೀ ಗಳು ತುಂಬಾ ಶುಭ ಹಾರೈಸಿ ಆಶೀರ್ವಾದ ನೀಡಿ ಈ ಚಿತ್ರತಂಡಕ್ಕೆ ಸನ್ಮಾನಿಸಿ ಆಶೀರ್ವದಿಸಿದರು.ನಾಯಕ ನಟರಾಗಿ ಕೊಲ್ಲೂರು ಗ್ರಾಮದ ರಾಜೇಂದ್ರ ಅವರು ನಟಿಸಿದ್ದಾರೆ, ನಾಯಕಿಯಾಗಿ ಲಕ್ಷ್ಮೀ ಯಾದಗಿರಿ,ಕಥೆ ಮತ್ತು ನಿರ್ದೇಶನ ಭೀಮರಾಯ ಮಲ್ಲರೆಡ್ಡಿ ಹಾಗೂ ಮಹೇಶ ನಾಯ್ಕಲ್ ರವರ ಸಂಗೀತದಲ್ಲಿ ಮೂಡಿ ಬಂದ ಕಿರುಚಿತ್ರ ಇದಾಗಿದೆ.ಕಲಾವಿದರಾಗಿ ದೇವಣ್ಣ ಚಿಗರಿ ಇಬ್ರಾಹಿಂಪೂರ,ಮಹಾದೇವ ನಾಲವಾರ,ಲಕ್ಷ್ಮಣ ನಾಲವಾರ,ಜಗನ್ನಾಥ ಸುಗಂಧಿ ಕೊಲ್ಲೂರು,ವಿಜಯ ಅರಕೇರಾ ಬಿ,ಚಂದಾಸ್ ಸನ್ನತಿ,ಸಂಜನಾ ಯಾದಗಿರಿ, ಮಲ್ಲರೆಡ್ಡಿ ಹೋನಿಗೇರಿ ಮಕ್ಲಪ್ಪನಳ್ಳಿ,ಅಜಯ್ ಮಲ್ಕಪನ್ನಳ್ಳಿರವರು ನಟಿಸಿದ್ದಾರೆ.




















