ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ನೇಹಕ್ಕೊಂದು ಧನ್ಯವಾದ

ಪ್ರತಿಯೊಬ್ಬರ ಬದುಕಿನ ಅರ್ಥಪೂರ್ಣ ಸಂಬಂಧ ಸ್ನೇಹ,
ಸ್ನೇಹ ಬೆಲೆ ಕಟ್ಟಲಾಗದ ಅಪೂರ್ವ ಬಂಧ ಜೀವನದ ಪ್ರತಿ ಹಂತದಲ್ಲೂ ಒಬ್ಬ ಸ್ನೇಹಿತ-ಸ್ನೇಹಿತೆ ಜೊತೆ ಬರುತ್ತಾರೆ ಅವರ ಭೇಟಿ ನಮಗೆ ಸುಮಧುರ ನೆನಪುಗಳನ್ನ ಬದುಕಿಗೊಂದು ಭರವಸೆಯ ಪಾಠ ಹೇಳಿ ಸವಿ ನೆನಪಾಗುತ್ತದೆ ಒಂದು ಸ್ನೇಹ ನಿಷ್ಕಲ್ಮಶ ಪ್ರೀತಿ ನಂಬಿಕೆ ವಿಶ್ವಾಸದಿಂದ ಕೂಡಿದ್ದರೆ ಅದು ನಿಜವಾದ ಸ್ನೇಹ ಸ್ವಾರ್ಥ ಇಲ್ಲದೆ ನಂಬಿಕೆ ಇಂದ ಕೂಡಿದ ಗೆಳೆತನ ಇಂದಿನ ದಿನದಲ್ಲಿ ಎಲ್ಲೋ ಬೆರಳೆಣಿಕೆಯಷ್ಟು ಬಲವಾದ ನಂಬಿಕೆ ನಿಸ್ವಾರ್ಥ ಪ್ರೀತಿ ಯಾವುದೇ ಬೇಧ ಭಾವ ಇಲ್ಲದ ಮೇಲು ಕೀಳು ಇಲ್ಲದ ಅಮೂಲ್ಯ ಸಂಬಂಧ ಗೆಳೆತನ.
ಈ ಗೆಳೆತನಕ್ಕೆ ಇತಿಹಾಸ ಪುಟದಲ್ಲಿ ಅದರದ್ದೇ ಆದ ಸ್ಥಾನಮಾನ ಗೌರವ ಇದೆ.ಸ್ನೇಹಕ್ಕೆ ಕುಲ,ಜಾತಿ,ಬಡವ, ಶ್ರೀಮಂತ,ಪ್ರತಿಷ್ಠೆ ಎನ್ನುವ ಭೇದ ಭಾವ ಇಲ್ಲ
ಕುಚೇಲನು ಬಡವನಾದರೂ ಕೃಷ್ಣನ ಆತ್ಮೀಯ ಸ್ನೇಹಿತನಾಗಿದ್ದ,ಬಡತನದ ಬೇಲಿ ಇದ್ದರೂ ಒಂದು ತುತ್ತು ತಿನ್ನಲು ಬೇದ ತೋರದ ಕೃಷ್ಣ ಸುಧಾಮರ ಸ್ನೇಹ ಮಾದರಿ,ಕುಲದಲ್ಲಿ ಕೆಳಗಿದ್ದರೂ ಜಾತಿ ಕುಲ ಬೇರೆಯಾದರೂ ದುರ್ಯೋಧನ ಕರ್ಣರು ಜೀವದ ಗೆಳೆಯರಾಗಿದ್ದರು ಕುಲ ಬೇಧ ಇದ್ದರೂ ಕೀಳಾಗಿ ನೋಡದೆ ಸಮಾಜದಲ್ಲಿ ತಲೆ ಎತ್ತುವಂತೆ ಅಧಿಕಾರ ರಾಜ್ಯ ಕೊಟ್ಟು ಕೀರ್ತಿ ಹೆಚ್ಚಿಸಿದ ದುರ್ಯೋಧನ, ಗೆಳೆಯನಿಗಾಗಿ ತನ್ನ ಅಸ್ತಿತ್ವವನ್ನು ಧಾರೆ ಎರೆದು, ಯಾವುದೇ ಸ್ವಾರ್ಥ ಇಲ್ಲದೆ ಸ್ನೇಹಕ್ಕಾಗಿ ನಿಂತ ನಿಷ್ಕಲ್ಮಶ ಹೃದಯದ ಕರ್ಣ.
ಸ್ನೇಹಿತನ ಅಪರಾಧಕ್ಕೆ ಅವನ ಅನುಪಸ್ಥಿತಿಯಲ್ಲಿ ಶಿಕ್ಷೆ ಅನುಭವಿಸಿ,ಸಾವಿಗೂ ಭಯ ಪಡದೆ ಸಾವಿಗಿಂತ ಸ್ನೇಹ ದೊಡ್ಡದು ಎಂದು ನಿರೂಪಿಸಿ
ಸ್ನೇಹಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧರಾದ ಡೇಮನ್ ಮತ್ತು ಪಿಥಿಯಾಸ್ ನಿಜಕ್ಕೂ ಸ್ನೇಹ ಅನ್ನೋ ಪದಕ್ಕೆ ನಿಜವಾದ ಅರ್ಥ ಕೊಟ್ಟವರು.
ಇಂದಿನ ಕಾಲಮಾನದಲ್ಲಿ ಕೇವಲ ಸಹಾಯಕ್ಕಾಗಿ, ಸ್ವಾರ್ಥಕ್ಕಾಗಿ ಗೆಳೆತನ ಅನ್ನುವ ಪದ ಬಳಸಿ ಮೋಸ ಮಾಡುವವರಿದ್ದಾರೆ.
ಭಾವನೆಗಳಿಗೆ ನಿಷ್ಕಲ್ಮಶ ಸ್ಪಂದನೆಯಿಂದ ಅರಿತು ನಡೆಯುವ ಸಂಬಂಧಗಳ ಜೊತೆ ನಿಸ್ವಾರ್ಥ ಪ್ರೀತಿ, ಕಾಳಜಿ ನೀಡಿ ಕಷ್ಟ ಸುಖಗಳ ಪಾಲುದಾರರಾಗಿ ಸ್ನೇಹ ಎನ್ನುವ ಸಂಬಂಧಕ್ಕೆ ಬೆಲೆ ಕೊಡುವವರು ಎಲ್ಲೊ ಬೆರಳು ಎಣಿಕೆಯಷ್ಟು ಜನರಿದ್ದಾರೆ.
-ಮಾನಸ.ಎಂ.ಸೊರಬ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!