ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಸ್ಸಿಗಾಗಿ ಸರ್ಜಾಪುರ,ಕುಪ್ಪಿಗುಡ್ಡ ವಿದ್ಯಾರ್ಥಿಗಳ ಪರದಾಟ

ರಾಯಚೂರು:ಪ್ರತಿನಿತ್ಯ ವಿದ್ಯಾರ್ಥಿಗಳ ಗೋಳು ಕೇಳುವವರು ಇಲ್ಲದಂತಾಗಿದೆ ಲಿಂಗಸೂಗೂರ ತಾಲೂಕಿಗೆ ಹಳ್ಳಿಗಳಿಂದ ಪ್ರತಿ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಿಂಗಸಗೂರು ತಾಲೂಕಿನ ವಿವಿಧ ಕಾಲೇಜುಗಳಿಗೆ ಬರುತ್ತಿದ್ದು ಇವರಿಗೆ ಬಸ್ಸಿನ ಸೌಲಭ್ಯ ಸರಿಯಾದ ಸಮಯಕ್ಕೆ ಇಲ್ಲದಂತಾಗಿದೆ.ಕವಿತಾಳ,ವಟಗಲ್, ಅಮೀನಗಡ,ಪಾಮನಕೇಲ್ಲೂರು,ಚಿಕ್ಕಹೇಸರೂರು, ಸರ್ಜಾಪುರ,ಕುಪ್ಪಿಗುಡ್ಡ ಮಾರ್ಗದಿಂದ ಸಾವಿರಾರು ವಿದ್ಯಾರ್ಥಿಗಳು ಲಿಂಗಸೂಗೂರಿಗೆ ವಿದ್ಯಾಭ್ಯಾಸಕ್ಕೆ ಬರುತಿದ್ದು ಮಾರ್ಗ ಮಧ್ಯದಲ್ಲಿ ಪಾಮನಕೇಲ್ಲೂರಲ್ಲಿ ಬಸ್ ತುಂಬಿಕೊಂಡು ಬರುತಿದ್ದು,ಉಳಿದ ಮೂರು ಹಳ್ಳಿ ವಿದ್ಯಾರ್ಥಿಗಳು ಬಸ್ಸನ್ನು ಹತ್ತಲು ಸ್ಥಳ ಇಲ್ಲದಂತಾಗುತ್ತಿದೆ ಮತ್ತು ಹೆಣ್ಣುಮಕ್ಕಳು ಇದರಿಂದ ಬಹಳ ಸಮಸ್ಯೆ ಎದರಿಸುತ್ತಿದ್ದು ಬಸ್ಸನ್ನು ಹತ್ತಲು ಹರ ಸಾಹಸ ಪಡುತ್ತಿರುವ ಘಟನೆ ಇವತ್ತು ಕುಪ್ಪಿಗುಡ್ಡದಲ್ಲಿ ನಡೆದಿರುವ ಈ ಚಿತ್ರವೇ ಎಲ್ಲದಕ್ಕೂ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳಿಗೆ ಕಾಲೇಜಿಗೆ ಹೋಗಲು ತೊಂದರೆ ಆಗುತ್ತದೆ ಎಂದು ಅರಿತು ಡ್ರೈವರ್ ತಮ್ಮ ಬಾಗಿಲಿನಲ್ಲಿ ಹತ್ತಿಸಿ ಕರೆದುಕೊಂಡು ಹೋಗುತ್ತಿರುವ ಘಟನೆ ನಡೆದಿದೆ.
ಇದು ಒಂದು ದಿನದ ಘಟನೆ ಅಲ್ಲ ದಿನಾಲೂ ಇದೆ ಗೋಳು ಮತ್ತು ಬಹಳ ದೂರದ ಊರಿನಿಂದ ಬರುವ ಪ್ರಯಾಣಿಕರಿಗೂ ಕೂಡಾ ತೊಂದರೆ ಆಗುತ್ತಿದೆ ಇದಕ್ಕೆ ದಯವಿಟ್ಟು ಪರಿಹಾರ ಮಾಡಿಕೊಡಬೇಕು ಎಂದು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಕರುನಾಡ ಕಂದ ಪತ್ರಿಕೆ ಯೊಂದಿಗೆ ಮಾತನಾಡಿ ಸಾರಿಗೆ ವ್ಯವಸ್ಥಾಪಕರಿಗೆ ಮನವಿ ಮಾಡಿಕೊಂಡಿದ್ದಾರೆ.
ವರದಿ-ಪುನೀತ ಕುಮಾರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!