ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಪಿಡಬ್ಲ್ಯೂಡಿ ಕ್ಯಾಂಪ್ ನಲ್ಲಿರುವ ಮರುಜೀವ ಪಡೆದ ಅಮರಶ್ರೀ ಆಲದ ಮರದ ಹತ್ತಿರ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ್ ಅವರ ೩೫ನೇ ಹುಟ್ಟು ಹಬ್ಬವನ್ನು ಜೀವ ಸ್ಪಂದನ ಚಾರಿಟೇಬಲ್ ಟ್ರಸ್ಟ್ ಹಾಗೂ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ವತಿಯಿಂದ ಸರಳವಾಗಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಆಚರಿಸಲಾಯಿತು.
ನಂತರ ಮಾತನಾಡಿದ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ್ ಹಲವಾರು ಟ್ರಸ್ಟ್ ಗಳು ಹಾಗೂ ಪರಿಸರ ಪ್ರೇಮಿಗಳು ನನ್ನ ಸೇವೆಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ನನ್ನ ಜವಾಬ್ದಾರಿ ಹೆಚ್ಚಿಗೆ ಮಾಡಿದೆ ಪರಿಸರ ಸಂರಕ್ಷಣೆಯೇ ನಮ್ಮೆಲ್ಲರ ಧ್ಯೇಯವಾಗಿರಬೇಕು ಎಂದರು.
ಜೀವ ಸ್ಪಂದನ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಅವಿನಾಶ್ ದೇಶಪಾಂಡೆ ಮಾತನಾಡಿ ವನಸಿರಿ ಫೌಂಡೇಶನ್ ಮೂಲಕ ರಾಜ್ಯಾದ್ಯಂತ ಮನೆಮಾತಾಗಿರುವ ರಾಜ್ಯ ಸರ್ಕಾರದಿಂದ ಪರಿಸರ ಪ್ರಶಸ್ತಿ ಪುರಸ್ಕೃತರಾದ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ್ ಅವರಿಂದ ಸ್ಫೂರ್ತಿ ಪಡೆದು ಇನ್ನಷ್ಟು ಪರಿಸರ ಪ್ರೇಮಿಗಳು ಹೆಚ್ಚಾಗಲಿ ಎಂದರು.
ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಕಾರ್ಯದರ್ಶಿ ಅಶೋಕ್ ನಲ್ಲಾ ಮಾತನಾಡಿ,ವನಸಿರಿ ಫೌಂಡೇಶನ್ ಮೂಲಕ ಅಮರೇಗೌಡ ಮಲ್ಲಾಪೂರ ಅವರು ನೆಟ್ಟ ಗಿಡಗಳು ಹೆಮ್ಮರವಾಗಿ ಪರಿಸರ ಸ್ನೇಹಿ ವಾತಾವರಣ ಸೃಷ್ಟಿಯಾಗಲಿ ಎಂದರು.
ಜೀವ ಸ್ಪಂದನ ಚಾರಿಟೇಬಲ್ ಟ್ರಸ್ಟ್ ಸಹ ಕಾರ್ಯದರ್ಶಿ ಚನ್ನವೀರನಗೌಡ ಮಾತನಾಡಿ ವನಸಿರಿ ಅಮರೇಗೌಡರ ಪರಿಸರ ಕಾಳಜಿಯು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಂಡು ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಪರಿಸರ ಪ್ರೇಮಿಗಳಾದ ರಂಜಾನ್ ಸಾಬ್ ನಾಗರಾಜ ಬಗ್ಗೂರು,ಚನ್ನಪ್ಪ ವಿಶ್ವಕರ್ಮ, ಪತ್ರಿಕಾ ಮಿತ್ರರಾದ ಯಮನೂರ,ಶರಣಬಸವ ಚನ್ನಳ್ಳಿ,ರಾಜು ಬಳಗಾನೂರ ಸೇರಿದಂತೆ ಹಲವರಿದ್ದರು.




















