ಹನೂರು ತಾಲ್ಲೂಕಿನಲ್ಲಿ ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯ ವತಿಯಿಂದ ಸ್ವ ಉದ್ಯೋಗ ಮಾಹಿತಿ ಸಂಕೀರ್ಣ ಕಾರ್ಯಕ್ರಮವನ್ನು ಡಾ!! ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದು ಇದರ ಜೊತೆಗೆ CSC ಜಾಗೃತಿ ಆಂದೋಲನ ಕಾರ್ಯಕ್ರಮವನ್ನು ಮಾನ್ಯ ಗೌರವನ್ವಿತ ಜಿಲ್ಲಾ ನಿರ್ದೇಶಕರಾದ ಲತಾ ಬಂಗೇರ ಮೇಡಂ ರವರು ಉದ್ಘಾಟನೆ ಮಾಡುವ ಮೂಲಕ ಚಾಲನೆ ನೀಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯು ಪ್ರತಿ ಗ್ರಾಮ ಮಟ್ಟದಲ್ಲಿ (CSC ಕೇಂದ್ರ) ಸಾಮಾನ್ಯ ಸೇವಾ ಕೇಂದ್ರ ತೆರೆದು ಕೇಂದ್ರ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದು ಕೊಳ್ಳುಬಹುದು ಎಂದು ಮಾಹಿತಿ ನೀಡಿ ಹೊಸ CSC ಕೇಂದ್ರದ ಹೊಸ ವಿ.ಎಲ್.ಇ ಗಳಿಗೆ ಲ್ಯಾಪ್ಟಾಪ್ ಲ್ಯಾಪ್ಟಾಪ್ ಓಕೆ ವಿತರಣೆ ಮಾಡಿ ಜನರಿಗೆ ಆರೋಗ್ಯ ಭಾಗ್ಯ ಆಯಾಷ್ಮನ್ ಕಾರ್ಡ್ ನೋಂದಣಿ ಮಾಡುವ ಮೂಲಕ ಚಾಲನೆ ನೀಡಿದರು. ಯೋಜನಾಧಿಕಾರಿಗಳಾದ ಪ್ರವೀಣ್ ಕುಮಾರ್ ಸರ್, ಜಿಲ್ಲಾ ನೋಡಲ್ ಅಧಿಕಾರಿ ರಾಜು ಸರ್, ತಾಲ್ಲೂಕು ನೋಡಲ್ ಅಧಿಕಾರಿ ಶೇಖರ್, ಮೇಲ್ವಿಚಾರಕರಾದ ಸುರೇಶ್, ಕೃಷ್ಣ, ಪರಶಿವಮೂರ್ತಿ, ಗಂಗಾಧರ್, ನಾಗಭೂಷಣ್, ಸತೀಶ್, ಸಂಧ್ಯಾ, ಸುವರ್ಣ, ಭಾನುಪ್ರಿಯಾ, ಹಾಗೂ ಯೋಜನೆಯ ಕಾರ್ಯಕರ್ತರು ಹಾಜರಾಗಿದ್ದರು.ವರದಿ: ಉಸ್ಮಾನ್ ಖಾನ್ ಬಂಡಳ್ಳಿ.




















