
ಜೇವರ್ಗಿ: ದಿನಾಂಕ 11.11.2022ರಂದು ಜೇವರ್ಗಿಯ ದತ್ತ ನಗರ ಬಡಾವಣೆಯಲ್ಲಿರುವ ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ ಶಾಲೆ ದತ್ತ ನಗರ ಜೇವರ್ಗಿಯಲ್ಲಿ ಅದ್ಭುತವಾಗಿ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವು ವಿದ್ಯಾರ್ಥಿನಿಯರಿಂದ ದೇಶಭಕ್ತಿಗೀತೆಗಳೊಂದಿಗೆ ಪ್ರಾರಂಭಿಸಲಾಯಿತು. ಹಲವಾರು ಮಕ್ಕಳು ಕನಕದಾಸರ ಜಯಂತೋತ್ಸವ ಕುರಿತು ಭಾಷಣ ಮಾಡಿದರು ಹಾಗೂ ಶಾಲೆಯ ಶಿಕ್ಷಕ/ಶಿಕ್ಷಕೀಯರು ಕೂಡ ಮಾತನಾಡಿದರು ವಿಶೇಷವಾಗಿ ಶಾಲೆಯ ಅದ್ಯಕ್ಷರಾದ ಹಣಮಂತ್ರಾಯಗೌಡ ಪಾಟೀಲ್ ರವರು ಕನಕದಾಸರ ಜಯಂತ್ಯೋತ್ಸವ ಕುರಿತು ಮಾತನಾಡಿದರು ಮತ್ತು ಸಂಸ್ಥೆಯ ಕಾರ್ಯದರ್ಶಿಗಳಾದ ಚಂದ್ರಶೇಖರ ಪಾಟೀಲ್ ರವರು ಕೂಡಾ ಭಕ್ತ ಕನಕದಾಸರ ಜೀವನ ಚರಿತ್ರೆ ಮತ್ತು ಕನಕದಾಸರ ಕೊಡುಗೆಯಾದ ಕೀರ್ತನೆಗಳು ಹಾಗೂ ಮುಂತಾದ ವಿಚಾರಗಳನ್ನು ಸವಿವರವಾಗಿ ಭಾಷಣದ ಮೂಲಕ ನುಡಿದರು. ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಜಿ.ಸಿ.ಪಾಟೀಲ್ ಹಾಗೂ ಸಹ-ಶಿಕ್ಷಕರಾದ ದೊಡ್ಡಪ್ಪ,ಪ್ರತಾಫ್,ಶಿವರಾಜ,ಭುವನೇಶ್ವರಿ,ಸಿದ್ದಮ್ಮ,ಲಕ್ಷ್ಮೀ,ದೀಪಾ,ಮಂಜುಳಾ,ರಾಜಮ್ಮ,ಈರಮ್ಮ ಹಾಗೂ ವಿದ್ಯಾರ್ಥಿ/ ನೀಯರು ಹಾಜರಿದ್ದರು.ಈ ಕಾರ್ಯಕ್ರಮವನ್ನು ಸಾಹೇಬಗೌಡ ಮುರಡಿ ದೈ.ಶಿಕ್ಷಕರು ವಂದನಾರ್ಪಣೆಯೊಂದಿಗೆ ಮುಗಿಸಿದರು.




















