ನಾನಿದ್ದೆ ನನ್ನ ಪಾಡಿಗೆ
ನೀನೇಕೆ ಬಂದೆ ನನ್ನ ಎದೆಯ ಗೂಡಿಗೆ
ನಿನ್ನ ಈ ಒಳ್ಳೆಯ ಗುಣಕ್ಕೆ
ಮೈಮರೆತು ನಡೆದೆ ನಿನ್ನೆಡೆಗೆ
ಜೊತೆಯಲಿ ಹೆಜ್ಜೆ ಹಾಕಲಿಲ್ಲ
ಮತ್ತೆ ಮತ್ತೆ ಬೇಟಿ ಆಗಲಿಲ್ಲ
ಹೇಳಿದಂಗೆ ಕೇಳಲಿಲ್ಲ
ಆದರೂ ಸ್ನೇಹ ಬಿಡಲಿಲ್ಲ
ನಿನ್ನ ನೆನಪುಗಳು ಕಾಡಿದಾಗ
ನೆನಪುಗಳೇ ಜೀವಂತ ಜ್ವಾಲೆ
ಸುಡುತ್ತಿದೆ ನನ್ನ ಈ ಮನವ
ನೀನಿಲ್ಲದ ಬಾಳು ಶೂನ್ಯ ಶೂನ್ಯ
-ರತ್ನಾ
ಹೊನ್ನನಾಯಕನಹಳ್ಳಿ




















