ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಮುಖ್ಯ ರಸ್ತೆಯಾದ ಬೆಂಗಳೂರು -ಹೊನ್ನಾವರ ರಸ್ತೆ (ಬಿ.ಹೆಚ್ ರಸ್ತೆ) ರಸ್ತೆ ಗುಂಡಿ ಗೊಟರುಗಳಿಂದ ಕೂಡಿದ್ದು ವಾಹನ ಸವಾರರ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ.
ಮುಖ್ಯವಾಗಿ ಹುತ್ತಾಬಸ್ ನಿಲ್ದಾಣದಿಂದ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದ ಕಡೆ ತೆರಳುವ ಪ್ರಯಾಣಿಕರಿಗೆ ಸಂಚಾರ ದುಸ್ಥರವಾಗಿದೆ. ಅಪಘಾತಗಳು ಸಂಭವಿಸಿದ್ದರೂ ಸಹ ಸಂಬಂಧಪಟ್ಟವರು ನಿರ್ಲಕ್ಷವಹಿಸಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.ಮಳೆ ಬಂದಾಗ ಗುಂಡಿಗಳಲ್ಲಿ ನೀರು ತುಂಬಿ ರಸ್ತೆಯೆಲ್ಲಾ ಕೆಸರುಗದ್ದೆಯಂತಾಗಿ ಅಪಘಾತಗಳು ಹೆಚ್ಚುತ್ತವೆ. ಅಲ್ಲದೆ ರಸ್ತೆಗಳು ಭತ್ತದ ನಾಟಿಗೆ ಯೋಗ್ಯವಾಗಿವೆ ಎನ್ನುವ್ ಅಭಿಪ್ರಾಯ ಸಹ ಕೇಳಿಬರುತ್ತಿದೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಿ ವಾಹನ ಸವಾರರು ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿ.
ವರದಿ:ಕೆ.ಆರ್.ಶಂಕರ್,ಭದ್ರಾವತಿ




















