ನಮ್ಮ ಪ್ರಭು ಶ್ರೀ ಕೃಷ್ಣ ಪರಮಾತ್ಮನ ತಲೆಯ ಮೇಲೆ ಯಾವಾಗಲೂ ನವಿಲು ಗರಿಯನ್ನು ಹೊಂದಿರುವ ಪೋಟೋವನ್ನಾಗಲಿ,ವಿಡಿಯೋವನ್ನಾಗಲಿ ಬಹಳ ಜನರು ನೋಡಿದ್ದರೂ ಯಾವ ಕಾರಣಕ್ಕೆ ಧರಿಸಿದ್ದಾರೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜವೇ ಆಗಿದೆ.
ಹಾಗಾದರೆ ಕಾರಣವೇನು ಎನ್ನುವುದಕ್ಕೆ ಚಿಕ್ಕ ಮಾಹಿತಿ ನಿಮಗಾಗಿ.
ನಮ್ಮ ಶ್ರೀ ಕೃಷ್ಣ ಪರಮಾತ್ಮನು ತಲೆಯಲ್ಲಿನ ಗುಣ ಚಕ್ರವನ್ನು ಮತ್ತು ಬ್ರಹ್ಮನಾಡಿಯನ್ನು ಹೋಲುವ ನವಿಲು ಗರಿಯನ್ನು ಧರಿಸಿದ್ದು ತನ್ನದೇ ಆದ ವಿಶೇಷತೆಗಳನ್ನು ಹೊಂದಿದೆ.
1)ಎಲ್ಲಾ ಜೀವರಾಶಿಗಳ ಶರೀರದಲ್ಲಿ ಈ ವಿಧದ ಜೋಡಣೆಯು ಇದೆಯೆಂಬ ಜ್ಞಾನವನ್ನು ತಿಳಿಸುವ ಕಾರಣದಿಂದ ಧರಿಸಿದ್ದು ಎಲ್ಲ ಜೀವರಾಶಿಗಳಿಗೆ ಆತ್ಮ ಸಾಕ್ಷಿಯಾಗಿದೆ ಎಂಬ ಸೂಚನಾರ್ಥಕವಾಗಿ ನವಿಲುಗರಿಯನ್ನು ಧರಿಸಿದ್ದಾನೆ.
2)ಆತ್ಮವು ಮೂರು ಗುಣಗಳಿಗೆ ಮಧ್ಯದಲ್ಲಿದ್ದು ಯಾವ ಗುಣಗಳಿಗೂ ಸಂಬಂಧವಿಲ್ಲವೆಂದು ತಿಳಿಸುವ ಕಾರಣದಿಂದ ಮತ್ತು ಯಾವ ಕೆಲಸಗಳನ್ನು ಮಾಡುತ್ತಿದ್ದರೂ ಅವುಗಳ ಕರ್ಮದ ಮಧ್ಯದಲ್ಲಿರುವ ನನಗೆ ಅಂಟುವುದಿಲ್ಲ ಎಂಬುದನ್ನು ತಿಳಿಸುವುದಕ್ಕಾಗಿಯೇ ನವಿಲುಗರಿಯನ್ನು ಧರಿಸಿದ್ದಾನೆ.
3) ಎಲ್ಲಾ ಜೀವರಾಶಿಗಳಿಗೆ ಶಿರಸ್ಸಿನಲ್ಲಿಯೇ ಆತ್ಮ ಮತ್ತು ಗುಣಗಳಿವೆ ಎಂದು ತಿಳಿಸುವುದಕ್ಕಾಗಿ ತಲೆಯ ಮೇಲೆ ಧರಿಸಿದ್ದು ಕೊನೆಯ ಅಂಚು ಬಣ್ಣ ತೆಳುವಾದುದಾಗಿ,ಎರಡನೆಯದು ಇದಕ್ಕಿಂತ ಹೆಚ್ಚಾಗಿ ಮೂರನೆಯದು ಎರಡನೆಯದಕ್ಕಿಂತ ಇನ್ನಷ್ಟು ಹೆಚ್ಚಾಗಿ ಕಾಣುವುದು,ಅದರಲ್ಲೂ ನಾಲ್ಕನೆಯದು ಎಲ್ಲಕ್ಕಿಂತ ಹೆಚ್ಚಾಗಿ ಕಾಣಿಸುವುದಕ್ಕಾಗಿ ಇಂತಹ ನವಿಲು ಗರಿಯನ್ನು ಧರಿಸುವುದರಲ್ಲಿ ಯಾವ ಜೀವರಾಶಿಯಾದರೂ ಕೊನೆಗೆ ಇಲ್ಲಿಗೆ ಬರಬೇಕು ಎಂಬ ಅರ್ಥವನ್ನು ತಿಳಿಸುವುದಕ್ಕಾಗಿ ಧರಿಸಿದ್ದಾನೆ.
4) ಕರ್ಮ ಯೋಗದ 28 ನೇ ಶ್ಲೋಕದಲ್ಲಿ ತತ್ವವಿತ್ತು ಮಹಾಭಾಹೋ ಗುಣ ಕರ್ಮವಿಭಾಗಯೋ,ಗುಣಾ ಗುಣೇಷು ವರ್ತಂತ ಇತಿ ಮತ್ವಾನ ಸಜ್ಜತೆ ಎಂದರೆ ಗುಣಕರ್ಮಗಳ ವಿಭಾಗವನ್ನು ತಿಳಿದವನು ಆತ್ಮವನ್ನು ತಿಳಿದಿದ್ದು ಅಂತಹವನು ಗುಣಗಳಿಂದ ನಡೆಯುವ ಕೆಲಸಗಳನ್ನು ಮಾಡುತ್ತಿದ್ದರೂ ಮಾಡದವನೇ ಎಂಬುದನ್ನು ತಿಳಿಸುವ ಕಾರಣಕ್ಕಾಗಿ ಶ್ರೀ ಕೃಷ್ಣ ಪರಮಾತ್ಮನು ನವಿಲುಗರಿಯನ್ನು ಧರಿಸಿದ್ದಾನೆ. -ಸಂದೀಪ ಜೋಶಿ,ಗಂಗಾವತಿ




















