ಬಳ್ಳಾರಿ/ ಕಂಪ್ಲಿ : ಸಂಕೇಶ್ವರದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನಮಠದಲ್ಲಿ ಜು.10ರಿಂದ ಸೆ.7 ರ ತನಕ ತಮ್ಮ 11ನೇ ಚಾತುರ್ಮಾಸ ಆಚರಿಸುವುದಾಗಿ ಇಲ್ಲಿನ ಶ್ರೀಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಶ್ರೀಗಳು ತಿಳಿಸಿದರು.
ಅವರು ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿ, ಸಂಕೇಶ್ವರ-ಕರವೀರದ ಶ್ರೀಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಸ್ವಾಮೀಜಿ ಆಹ್ವಾನದ ಮೇರೆಗೆ, ಗುರುಪೂರ್ಣಿಮೆ ದಿವಸ ವ್ಯಾಸ ಮಹಾಪೂಜೆ ನೆರವೇರಿಸುವ ಮೂಲಕ ಚಾತುರ್ಮಾಸ ವ್ರತ ಸಂಕಲ್ಪ ಆರಂಭಿಸುವುದಾಗಿ ತಿಳಿಸಿದರು.
ವರದಿ : ಜಿಲಾನಸಾಬ್ ಬಡಿಗೇರ



















