ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಶ್ರೀ ಪಂಪಾಪತಿ ಅಂಗಡಿ ಇವರನ್ನು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಕೊಟ್ಟೂರು ನಗರ ಘಟಕದ ನೂತನ ಅಧ್ಯಕ್ಷರನ್ನಾಗಿ ಅದೇಶ ಪತ್ರ ನೀಡಿ ಆಯ್ಕೆ ಮಾಡಲಾಗಿದೆ ಎಂದು
ಭಾರತೀಯ ಜನತಾ ಪಾರ್ಟಿಯ ಹಗರಿಬೊಮ್ಮನಹಳ್ಳಿ ಮಂಡಲ ಅಧ್ಯಕ್ಷರಾದ ಶ್ರೀ ಬೆಣಕಲ್ ಪ್ರಕಾಶ್ ಕೆ.ಎಸ್. ರವರು ತಿಳಿಸಿದ್ದಾರೆ.
ಹಗರಿಬೊಮ್ಮನಹಳ್ಳಿ ಮಂಡಲ ಅಧ್ಯಕ್ಷರಾದ ಶ್ರೀ ಬೆಣಕಲ್ ಪ್ರಕಾಶ್ ಕೆ. ಎಸ್. ರವರು ಮಾತನಾಡಿ
ಈ ಹೊಣೆಗಾರಿಕೆಯನ್ನು ಕೊಟ್ಟೂರು ನಗರ ಘಟಕದ ಬಿಜೆಪಿ ನೂತನ ಅದ್ಯಕ್ಷರಾದ ಶ್ರೀ ಪಂಪಾಪತಿ ಅಂಗಡಿ ರವರು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಸದೃಢಗೊಳಿಸುತ್ತಾ ಮುಂಬರುವ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬುತ್ತಾ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ಸತತ ಪ್ರಯತ್ನಿಸುತ್ತಾರೆ ಎಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.
ವರದಿ ಶಶಾಂಕ್.ಪಿ



















