ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ರ‌್ಯಾವಣಿಕಿ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಯುವಕರಾದ ಪ್ರಕಾಶ ಹಾಲಕೇರಿ ಮಾತನಾಡಿ ಭಾವೈಕ್ಯತೆ ಸಾರುವ ಹಬ್ಬವಾದ ಮೊಹರಂ ಹಬ್ಬವನ್ನು ಯಾವುದೇ ಜಾತಿ, ಮತ, ಪಂಥ, ಎನ್ನದೆ ಎಲ್ಲರೊಡಗೂಡಿ ಆಚರಣೆ ಮಾಡುತ್ತಿದ್ದು ಅನೇಕ ವರ್ಷಗಳಿಂದ ಈ ಹಬ್ಬ ಆಚರಣೆಯನ್ನು ಗ್ರಾಮದಲ್ಲಿ ಆಚರಿಸಿಕೊಂಡು ಬರುತ್ತಿದ್ದು ಯುವಕರು ವಿಶೇಷವಾಗಿ ಹೆಜ್ಜೆಯನ್ನು ಹಾಕುವುದರ ಮೂಲಕ ಹಬ್ಬ ಆಚರಣೆಯನ್ನು ನೆರವೇರಿಸಿಕೊಂಡು ಬರುತ್ತಿದ್ದು ಗ್ರಾಮದ ಎಲ್ಲರ ಸಹಕಾರ ದೊರೆಯುತ್ತಿದ್ದು ಭಾವೈಕ್ಯತೆಯಿಂದ ಹಬ್ಬ ಆಚರಿಸುತ್ತಿದ್ದೇವೆ ಎಂದು ಮಾತನಾಡಿದರು.
ಸುಮಾರು ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ, ಪೀರಲ ದೇವರ ದರ್ಶನ ಪಡೆದರು. ಕತಲ್ ರಾತ್ರಿ ದಿನದಂದು ಅಲಾಯಿ ದೇವರಿಗೆ ಸಕ್ಕರೆ ನೈವೇದ್ಯ, ಹರಕೆ ತೀರಿಸಿದರು.
ಬೆಳಿಗ್ಗೆ ದೇವರು ಹೊತ್ತುವರು ಅಗ್ನಿ ಕುಂಡ ತುಳಿದು, ಗ್ರಾಮದಲ್ಲಿ ಸಂಚರಿಸಿದರು. ಗ್ರಾಮದ ಯುವಕರು ಹೆಜ್ಜೆ ಕುಣಿತ, ವೇಷಗಾರರ ಕುಣಿತು ಸಾವಿರಾರು ಮಂದಿ ಗಮನ ಸೆಳೆದವು. ಅತ್ಯಂತ ಸಡಗರ ಸಂಭ್ರಮದಿಂದ ಮೊಹರಂ ಹಬ್ಬ ಆಚರಣೆ ಯಾಗಬೇಕಾದರೆ ಗ್ರಾಮದ ಗುರುಹಿರಿಯರು ಹಾಗೂ ಯುವಕರ ಸಹಕಾರದಿಂದ ಸಾಧ್ಯವಾಗುತ್ತಿದೆ ಎಂದು ಹೇಳಿದರು.
ಸಂದರ್ಭದಲ್ಲಿ ಪ್ರಕಾಶ್ ಹಾಲಕೇರಿ, ನಾಗರಾಜ ಸಿಪಾಯಿ, ಮಾರುತಿ ಚಂದ ದಾಸರ್, ಮಲ್ಲೇಶ್ ಕಪಾಲಿ, ಮುತ್ತು ಒಣಗೇರಿ, ಫಕೀರ ಸಾಬ್ ಕುಕನೂರು, ನಾಗರಾಜ್ ನೋಟಗಾರ, ರ‌್ಯಾವಣಿಕಿ
ಗ್ರಾಮದ ಗುರು ಹಿರಿಯರು ಇತರರು ಇದ್ದರು.
- ಕರುನಾಡ ಕಂದ



















