
ಯಾದಗಿರಿ/ಗುರುಮಠಕಲ್: ಇಂದು ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ MRPS ಸಂಸ್ಥಾಪಕ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮಂದಕೃಷ್ಣ ಮಾದಿಗ ಅವರ 60 ನೆಯ ಹುಟ್ಟು ಹಬ್ಬವನ್ನು ತಾಲೂಕಿನ ಮಾದಿಗ ದಂಡೋರ ಸಂಘಟನೆಯ ಪದಾಧಿಕಾರಿಗಳು ಹಾಗೂ ವಿವಿಧ ದಲಿತ ಸಂಘಟನೆಗಳು, ರಾಜಕೀಯ ಮುಖಂಡರ ಸಮ್ಮುಖದಲ್ಲಿ ಅವರ ಫ್ಲೆಕ್ಸ್ ಗೆ ಹಾಲಿನಿಂದ ಅಭಿಷೇಕ ಮಾಡಿ ಆಚರಣೆ ಮಾಡಲಾಯಿತು.
ಡಾ. ಅಂಬೇಡ್ಕರ್ ಭವನದ ಮುಂಭಾಗದಲ್ಲಿರುವ ಡಾ. ಅಂಬೇಡ್ಕರ್ ಹಾಗೂ ಬಾಬು ಜಗ್ ಜೀವನ ರಾಮ ಅವರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ ತದ ನಂತರ ಮಂದ ಕೃಷ್ಣ ಮಾದಿಗ ಅವರ ಜನ್ಮದಿನ ಆಚರಣೆ ಮಾಡಲಾಯಿತು.
MRPS ತಾಲೂಕ ಅಧ್ಯಕ್ಷರಾದ ರವಿ ಬುರನೊಳ ಮಾತನಾಡಿ ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಚಳುವಳಿಯನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವ ಮಹಾನ ವ್ಯಕ್ತಿ ಅಭಿನವ ಅಂಬೇಡ್ಕರ್ ಮಂದಕೃಷ್ಣ ಮಾದಿಗ ಅವರು ನಮಗೆ ಸದಾ ಪ್ರೇರಣೆ ಎಂದು ಹೇಳಿದರು.
ತದ ನಂತರ ಮಾತನಾಡಿದ ಭೀಮಶಪ್ಪ ಗುಡಿಸೆ ಮಾಜಿ ಪುರಸಭೆ ಅಧ್ಯಕ್ಷರು ಮಂದ ಕೃಷ್ಣ ಅವರು ಸಾರ್ವಜನಿಕ ಪ್ರದರ್ಶನಗಳ ಮೂಲಕ ಮಾದಿಗ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಷ್ಟ್ರೀಯ ಜಾಗೃತಿ ಮೂಡಿಸಿ ಮಾದಿಗ ಸಮುದಾಯ ಎದುರಿಸುತ್ತಿರುವ ಅನ್ಯಾಯಗಳನ್ನು ನಿರಂತರವಾಗಿ ಮಾಡುತ್ತ ಬಂದಿದ್ದಾರೆ ಎಂದು ಹೇಳಿದರು.
ಆರ್ಥಿಕ ಮತ್ತು ಶೈಕ್ಷಣಿಕ ಉದ್ಯೋಗಾವಕಾಶಗಳಿಗೆ ಮಂದ ಕೃಷ್ಣ ಮಾದಿಗ ಅವರ ಸಮರ್ಪಣೆ ಮತ್ತು ನಾಯಕತ್ವವು ಅನೇಕರಿಗೆ ಸ್ಫೂರ್ತಿ ನೀಡುತ್ತಿದೆ ಎಂದು ದೇವದಾಸ ಹಿರಿಯ ಭಾ. ಜ. ಪ ಮುಖಂಡರು ತಿಳಿಸಿದರು.
ಭಾಜಪ ಮುಖಂಡರಾದ ಚಂದೂಲಾಲ್ ಚೌಧರಿ ಮಾತನಾಡಿ ಮಾದಿಗ ಸಮುದಾಯದೊಳಗಿನ ಉದ್ದೇಶಿತ ಫಲಾನುಭವಿಗಳಿಗೆ ಮೀಸಲಾತಿ ನೀತಿಗಳ ಪ್ರಯೋಜನಗಳನ್ನು ನ್ಯಾಯಯುತವಾಗಿ ಒದಗಿಸಲು ಹಗಲಿರುಳು ಹೋರಾಟ ಎಲ್ಲಾ ಮಾದಿಗ ಸಮಾಜದವರಿಗೆ ಫಲ ನೀಡಲಿ ಎಂದು ಹೇಳಿದರು.
ಮಂದಕೃಷ್ಣ ಮಾದಿಗ ಅವರ ಪ್ರಮುಖವಾಗಿ ದಲಿತ ಜಾತಿಯ ಅಂಚಿನಲ್ಲಿರುವ ಮಾದಿಗ ಸಮುದಾಯದ ಹಕ್ಕುಗಳಿಗಾಗಿ ಕಳೆದ 30 ವರ್ಷಗಳಿಂದ ಹೋರಾಟ ಮಾಡುತ್ತಿದ್ದು, ಹಾಗೆಯೇ ಮಕ್ಕಳ ಮತ್ತು ಅಂಗ ವಿಕಲರ ಪರ ಅವರ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದಾರೆ. ಪರಿಶಿಷ್ಟ ಜಾತಿಗಳಲ್ಲಿ ಮೀಸಲಾತಿ ಸವಲತ್ತುಗಳ ಸಮಾನ ವಿತರಣೆಗಾಗಿ ಹೋರಾಡಲು ಮೀಸಲಾಗಿರುವ ಮಾದಿಗ ಮೀಸಲಾತಿ ಹೋರಾಟ ಸಮಿತಿ (MRPS) ಸ್ಥಾಪನೆ ಅವರ ಹೋರಾಟದ ಫಲವಾಗಿ ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಸಹ ಇತ್ತೀಚಿಗೆ ಪಡೆದಿದ್ದಾರೆ.
ಈ ಜನ್ಮ ದಿನದ ಆಚರಣೆಯಲ್ಲಿ ಅನಂತಪ್ಪ ಮುಕುಡಿ, ಮಾಣಿಕ್ ಮುಕುಡಿ, ಅಶೋಕ್ ಶನಿವಾರಂ, ಭೀಮಶಪ್ಪ ಕೆಳಮನಿ, ಕೃಷ್ಣ, ರಾಕೇಶ್, ಶಂಕರ, ಭೀಮು ಮಿನಿಂಟಿ, ರಮೇಶ್ ಗಾಜರಕೋಟ, ಕಿಸ್ಟಪ್ಪ ಸೈದಾಪುರ, ಮೋಹನ್ ಮುಕುಡಿ, MRPS ಪದಾಧಿಕಾರಿಗಳಾದ ಶ್ರೀನಿವಾಸ ಕಿಂದಿಂಟಿ, ಅನಿಲ್ ಬಸಪೊಳ್, ನವೀನ ಮಿನಿಂಟಿ, ನಾಗೇಶ್ ಚಂಡರಿಕಿ, ಶರಣಪ್ಪ ಅಮ್ಮಪಲ್ಲಿ, ನೀಲೇಶ್ ಇನ್ನೂ ಹಲವು ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















