ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬೀದರ್ ಜಿಲ್ಲೆಯಲ್ಲಿ ಶೆಲ್ ಎನ್‌ಎಕ್ಸ್‌ಪ್ಲೋರರ್ಸ್ ಎಂಬ ನೂತನ ಕಾರ್ಯಕ್ರಮಕ್ಕೆ ಚಾಲನೆ

ಬೀದರ್ :ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಮತ್ತು ನೀತಿ ಆಯೋಗದ ಅಟಲ್ ಇನೋವೇಷನ್ ಮಿಷನ್ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಶಿಕ್ಷಕರಿಗೆ ಶೆಲ್ ಎನ್‌ಎಕ್ಸ್‌ಪ್ಲೋರರ್ಸ್ ತರಬೇತಿಯನ್ನು “ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಗದಲ” ಶಾಲೆಯಲ್ಲಿ ಆಯೋಜಿಸಲಾಯಿತು.
ಈ ತರಬೇತಿಯಲ್ಲಿ ಬೀದರ್ ಜಿಲ್ಲೆಯ 15 ಶಾಲೆಗಳಿಂದ ( 09 ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಶಾಲೆಗಳು ಮತ್ತು 06 ಖಾಸಗಿ ಶಾಲೆಗಳ ಶಿಕ್ಷಕರು) 23 ಎ.ಟಿ.ಎಲ್ ಶಿಕ್ಷಕರು ಹಾಜರಾಗಿದ್ದರು.
ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಸ್ಟೆಮ್ ಆಧಾರಿತ ಯೋಜನೆಗಳ ಮೂಲಕ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು, ಮಾರ್ಗದರ್ಶನ ನೀಡಲು ಸಹಕಾರಿಯಾಗಿದೆ.
ಕಾರ್ಯಕ್ರಮಕ್ಕೆ ಬೀದರ್ ನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಶ್ರೀಮತಿ ಸಂಗೀತ ಬಿರಾದರ್ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಈ ಕಾರ್ಯಕ್ರಮವು ನಮ್ಮ ಭಾಗದ ಮಕ್ಕಳಿಗೆ ತುಂಬಾ ಅವಶ್ಯಕತೆ ಇದೆ ಇಂತಹ ಕಾರ್ಯಕ್ರಮವು ಶಿಕ್ಷಕರ ತರಬೇತಿ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸುವ ಕಾರ್ಯ ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಶೆಲ್ ಎನ್‌ಎಕ್ಸ್‌ಪ್ಲೋರರ್ಸ್ ಕಾರ್ಯಕ್ರಮದ ಮೂಲಕ ನೀಡುತ್ತಿರುವುದು ಶ್ಲಾಘನೀಯ, ಎಲ್ಲಾ ಶಿಕ್ಷಕರು ಈ ತರಬೇತಿ ಸದುಪಯೋಗ ಪಡೆದುಕೊಂಡು ಇದನ್ನು ವಿದ್ಯಾರ್ಥಿಗಳ ಹಂತದಲ್ಲಿ ಅನುಷ್ಠಾನಗೊಳಿಸುವುದು ಅತ್ಯವಶ್ಯಕ ಎಂದು ತಿಳಿಸಿದರು. ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ಬರುವ ಶಾಲೆಗಳ ತಪಾಸಣಾ ತಂಡದ ಸದಸ್ಯರಾದ ಶ್ರೀ ಶರಣಪ್ಪ ಬಿರಾದರ್ ಅತಿಥಿಯಾಗಿ ಭಾಗವಹಿಸಿ ನೀತಿ ಆಯೋಗದವರು ಎಲ್ಲಾ ವಿದ್ಯಾರ್ಥಿಗಳಲ್ಲಿ ಸ್ಟೆಮ್ ಆಧರಿತ ಜ್ಞಾನ ನೀಡಲು ಮುಂದಾಗಿ ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಗಳನ್ನು ಸ್ಥಾಪಿಸಲಾಗಿದೆ ಅಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಟೆಮ್ ಜ್ಞಾನ ಒದಗಿಸಿ ವಿನೂತನ ಪ್ರಾಜೆಕ್ಟ್‌ ಗಳನ್ನು ರೂಪಿಸಲು ಶೆಲ್ ಎನ್‌ಎಕ್ಸ್‌ಪ್ಲೋರರ್ಸ್ ತಮ್ಮ ಪಠ್ಯವನ್ನು ಸಿದ್ದಪಡಿಸಿ ಶಿಕ್ಷಕರಿಗೆ ತರಭೇತಿ ನೀಡುತ್ತಿದ್ದಾರೆ ಇದನ್ನು ವಿದ್ಯಾರ್ಥಿಗಳ ಮಟ್ಟಕ್ಕೆ ತಲುಪಿಸಿ ಮಕ್ಕಳಲ್ಲಿ ಹೊಸತನವನ್ನು ಎಕ್ಸ್‌ಪ್ಲೋರ್ ಮಾಡಲು ತರಬೇತಿ ಪಡೆದ ಶಿಕ್ಷಕರು ಸಹಕರಿಯಾಗಬೇಕು ಎಂದು ತಿಳಿಸಿದರು.
ಶ್ರೀ ಚನ್ನಬಸವ ಹೆಡೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಶಾಲೆಗಳ ಬೀದರ್ ಜಿಲ್ಲಾ ಸಮನ್ವಯ ಅಧಿಕಾರಿಗಳು ಉಪಸ್ಥಿತರಿದ್ದು ಈ ತರಬೇತಿಯು ರಾಷ್ಟ್ರೀಯ ಶಿಕ್ಷಣ ಉದ್ದೇಶಗಳೊಂದಿಗೆ ಹೊಂದಿಕೆಯಾಗಿರುವುದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮವು ಭಾರತಾದ್ಯಂತ ಹಲವು ವರ್ಷಗಳಿಂದ ನಡೆಯುತ್ತಿದ್ದು ಈ ವರ್ಷ ಅಂದರೆ 2025 ರಿಂದ ಬೀದರನಲ್ಲಿ ಪ್ರಾರಂಭಗೊಳ್ಳುತ್ತಿರುವುದು ಈ ಜಿಲ್ಲೆಗೆ ಲಾಭದಾಯಕ, ಶೆಲ್ ಎನ್‌ಎಕ್ಸ್‌ಪ್ಲೋರರ್ಸ್ ಕಾರ್ಯಕ್ರಮದ ಮೂಲಕ ತರಬೇತಿ ಪಡೆಯುತ್ತಿರುವ ಎಲ್ಲಾ ಶಿಕ್ಷಕರು ತಮ್ಮನ್ನು ತಾವು ಹೊಸತನವನ್ನು ಕಂಡುಕೊಳ್ಳಲು ತೊಡಗಿಸಿಕೊಳ್ಳಬೇಕು, ಆ ಮೂಲಕ ವಿದ್ಯಾರ್ಥಿಗಳಿಗೆ ಹೊಸದಾಗಿ ಯೋಚಿಸುವುದು, ಸೃಜನಾತ್ಮಕವಾಗಿರುವುದು ಮತ್ತು ನೈಜ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೌಶಲ್ಯವನ್ನು ಅಭಿವೃದ್ಧಿಪಡಿಸುತ್ತದೆ. ಇದು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಗಟ್ಟಿಯಾದ ಹಾದಿಯನ್ನು ಕಲ್ಪಿಸುತ್ತದೆ ಮತ್ತು ವಿದ್ಯಾರ್ಥಿಗಳು ರಚಿಸಿದ ಹೊಸತನದ ಯೋಜನೆಗಳು ಜಿಲ್ಲಾ ಮಟ್ಟ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡರೆ ಇಲಾಖೆಗೆ ಎ.ಐ.ಎಮ್ ಹಾಗೂ ಶೆಲ್ ಎನ್‌ಎಕ್ಸ್‌ಪ್ಲೋರರ್ಸ್ ತಂಡಕ್ಕೆ ಖುಷಿಯನ್ನು ನೀಡುತ್ತದೆ ಎಂದು ತಿಳಿಸಿದರು.
ತರಬೇತಿಯಲ್ಲಿ ಎನ್‌ಎಕ್ಸ್‌ಪ್ಲೋರರ್ಸ್ ಫೌಂಡೇಶನ್ ಪಠ್ಯಕ್ರಮದ ಸಂಪೂರ್ಣ ಪರಿಚಯ ನೀಡಲಾಯಿತು. ಇದರ ಮೂಲಕ ಶಿಕ್ಷಕರು ತಮ್ಮ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ನಾಯಕರಾಗಿ ರೂಪಿಸಿ, ನೈಜ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗದರ್ಶನ ನೀಡುವ ಜ್ಞಾನ ಹಾಗೂ ಕೌಶಲ್ಯಗಳನ್ನು ಗಳಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!