ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪ್ರೇಮದ “ನಶೆ “ಏರಿಸುವ, ಪ್ರೇಮದ ” ಗುಂಗು ” ಹಿಡಿಸುವ ಪ್ರೇಮಲೋಕದ ಪ್ರೇಮ ಹನಿಗಳು…

ಪುಸ್ತಕ ಅವಲೋಕನ

ಪುಸ್ತಕದ ಹೆಸರು ‘ ಪ್ರೇಮ ಲೋಕ ‘ ಪ್ರೇಮ ಹನಿಗಳು.


ಕವಿ : ಶ್ರೀ ಕರಿಸಿದ್ಧನಗೌಡ ಮಾಲಿ ಪಾಟೀಲ್ ಬೂದಗುಂಪ.

ಪ್ರಕಟಣೆಯ ವರ್ಷ : 2018.


ಹನಿಗವನ ಸಂಕಲನ.

ಪ್ರತಿಭೆ ಯಾರ ಸ್ವತ್ತೂ ಅಲ್ಲ, ಪ್ರತಿಭೆಯ ಮೂಲಕ ಕವಿ, ಕಲಾವಿದ, ನಾಟಕಕಾರ, ಚಿತ್ರಕಾರ ಕಾದಂಬರಿಕಾರ, ಹೀಗೆ ಏನಾದರೂ ಆಗಬಹುದು, ವೃತ್ತಿಯಿಂದ ರೈತರಾದರೂ, ಪ್ರವೃತ್ತಿಯಿಂದ ಸಾಹಿತ್ಯ ಕ್ಷೇತ್ರವನ್ನು ಆಯ್ದುಕೊಂಡು, ಎಂ. ಎ. ಪದವೀಧರರಾಗಿರುವ ಬೂದಗುಂಪ ಗ್ರಾಮದ ಕರಿಸಿದ್ದನಗೌಡ ಮಾಲಿಪಾಟೀಲ್ ಅವರು ಕವಿತ್ವವನ್ನು ಹೊಂದಿರುವುದು, ಅವರ ಪ್ರಥಮ ಸಾಹಿತ್ಯ ಕೃತಿ,

ಪ್ರೇಮಲೋಕ… ಪ್ರೇಮದ ಹನಿಗಳ ಮೂಲಕ ಸಾಬೀತಾಗಿದೆ..

ಕರಿಸಿದ್ಧನಗೌಡರು ಗ್ರಾಮೀಣ ಪ್ರತಿಭೆ ಎಂಬುದರಲ್ಲಿ ಎರಡು ಮಾತಿಲ್ಲ, ಪಾಟೀಲರು ಹಲವಾರು ಕವನ, ಗಜಲ್, ಶಾಯಿರಿಗಳನ್ನು ಬರೆದಿದ್ದರೂ ಹನಿಗವನ, ಅವರ ಆಕರ್ಷಣೆಯಾಗಿದ್ದು ಈ ಪ್ರೇಮಲೋಕದ ಹನಿಗಳಲ್ಲಿ ಜಿನುಗಿದೆ.

ಪ್ರೇಮಲೋಕದಲ್ಲಿ ಓಲಾಡುವಾಗ, ತೇಲಾಡುವಾಗ 

ಅದರ ಮಜವೇ ಬೇರೆ, ಪ್ರೇಮ ಎಂಬುದು ಒಂದು ಮೌಲ್ಯ, ಅದು ಕೇವಲ ಹೆಣ್ಣು ಗಂಡಿನ ದೈಹಿಕ ಆಕರ್ಷಣೆಗೆ ಸೀಮಿತವಾಗದೆ ವಿಶಾಲ ಅರ್ಥವನ್ನು ಹೊಂದಿದೆ.

ಯೌವನ ವಯಸ್ಸು ಸಹಜವಾಗಿ ಚಂಚಲತೆಯಿಂದ 

ಕೂಡಿರುತ್ತದೆ, ಇದಕ್ಕೆ ಕರಿಸಿದ್ದನಗೌಡರು ಹೊರತಲ್ಲ,
ಗೌಡರ ಈ ಪ್ರೇಮಲೋಕವು ಒಂದು ನೂರಾ ಎಪ್ಪತ್ತು (೧೭0) ಪ್ರೇಮಹನಿಗಳನ್ನು ಒಳಗೊಂಡಿದೆ.

ಪ್ರೀತಿ, ಪ್ರೇಮ, ಪ್ರಣಯ ಕುರಿತು ಈಗಾಗಲೇ ಸಾಕಷ್ಟು 

ಕವನ ಸಂಕಲನಗಳು ಪ್ರಕಟವಾಗಿದ್ದರೂ ಕೇವಲ ಪ್ರೇಮದ ಬಗ್ಗೆ ಪ್ರಕಟವಾದ ಹನಿಗವನ ಸಂಕಲನಗಳು ಬೆರಳೆಣಿಕೆಯಷ್ಟು. ಅವುಗಳಲ್ಲಿ ಕರಿಸಿದ್ದನಗೌಡ ಮಾಲಿಪಾಟೀಲರ ಪ್ರೇಮ ಲೋಕ, ಪ್ರೇಮ ಹನಿಗಳು ಹನಿಗವನ ಸಂಕಲನವೂ ಒಂದಾಗಿದೆ. ಎಲ್ಲಾ ಹನಿಗವನಗಳೂ ಪ್ರೇಮದ ಸುತ್ತಲೇ ಗಿರಿಕಿ ಹೊಡೆದರೂ ವಿಶಿಷ್ಟ ಪದಪಂಜಗಳ ಮೂಲಕ ಓದುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ, ಅದಕ್ಕೆ ಉದಾಹರಣೆಯಾಗಿ 

” ನೀನು

ಮೇಕಪ್ ಮಾಡಿಕೊಂಡತೆಲ್ಲ,

ಏನೋ ಕೊರತೆ ಕಾಣುತ್ತಿತ್ತು,

ಮೇಕಪ್ ಬಿಟ್ಟೆ,

ಸಹಜ ಸೌಂದರ್ಯ ಮರಳಿದೆ

ಕೃತಕ ಮಳೆಗೆ

ಮರೆಯಾದೀತೇ ಬರಗಾಲ”?

ಎಂಬ ಈ ಹನಿಗವನದಲ್ಲಿ ಕವಿ

ಕೃತಕತೆ ಮತ್ತು ಸಹಜತೆಗೆ ಇರುವ ವ್ಯತ್ಯಾಸವನ್ನು ಸರಳವಾದ ಪದಗಳಲ್ಲಿ ಗೊತ್ತಾಗುವುದು.

ಇವರ ಮತ್ತೊಂದು ಪ್ರೇಮ ಹನಿಯಲ್ಲಿ

ಪ್ರೇಯಸಿಯನ್ನು ಕುರಿತು ಹೇಳುವ ಮಾತು ಹೀಗಿದೆ.

 ” ನೀನು ನನ್ನ ಜೊತೆಗಿಲ್ಲವೆಂದು

 ನಾನು ಎಂದೂ ಭಾವಿಸಿಕೊಳ್ಳಲಿಲ್ಲ,

 ಭಾವಿಸಿಕೊಳ್ಳಲು ನೀ ಬಿಟ್ಟೆ ಇಲ್ಲ, ನೀನು -ನಾನು -ನಾನು ನೀನು, ಐಕ್ಯ ” ಎಂದು ಹೇಳುವ 

ಈ ಮಾತಿನಿಂದ ಪ್ರೇಮಕ್ಕೆ ಎಂತಹ ಶಕ್ತಿ ಇದೆ, ಎಂದು ಗೊತ್ತಾಗದೇ ಇರದು.

ಇವರ ಈ ಪ್ರೇಮದ ಹನಿಗಳನ್ನು ಓದುತ್ತಾ ಹೋದಂತೆ ಓದುಗರು ಕೂಡಾ ಪ್ರೇಮಲೋಕಕ್ಕೆ ಹೋದಂತಹ, ಪ್ರೇಮ ಲೋಕದಲ್ಲಿ ತೇಲಾಡುವಂತಹ ಅನುಭವ ಆಗಿ ಓದುಗರಿಗೆ, ಪ್ರೇಮದ ಗುಂಗು ಹಿಡಿಸಿ ಬಿಡುತ್ತವೆ, ಅಂತಹ ಕೆಲವು ಹನಿಗಳನ್ನು ನೋಡಿದಾಗ,

“ಆಕಾಶದಲ್ಲಿ ಮೂಡಿದ

ಕಾಮನ ಬಿಲ್ಲಿಗೂ,

ಮನದೊಳಗೆ ನೀ ಮೂಡಿಸಿದ ಕಾಮನ ಬಿಲ್ಲಿಗೂ

ಬಣ್ಣಗಳು ತುಂಬಿವೆ ಎಂಬ ಈ ಹನಿ, ಕಾಮನ ಬಿಲ್ಲು ಅದೆಷ್ಟು ಸುಂದರವಾಗಿದ್ದು ಮನಮೋಹಕವಾಗುತ್ತದೆ ಎಂದು ತಿಳಿಸುತ್ತದೆ.

” ನಿನಗೆ ಕಾಣಿಕೆ ನೀಡಬೇಕೆಂದು

ಜತನದಿಂದ ಕಾಯ್ದುಕೊಂಡೇ ಬಂದೆ,

ನಿನ್ನ ದಾರಿಯೊಳಗೆ

ಕಾಯುತ್ತಾ ಕುಳಿತೆ,

ನೀ ಬಂದೆ, ಕಂಡೊಡನೆ

ಎಲ್ಲವನೂ ಮರೆತೆ, ನೀ

ಸಾಗಿದ ಮೇಲೆ ನೆನಪಾದದ್ದು .”

ಪ್ರೇಮದ ಪಾಶದಲ್ಲಿ ಬಿದ್ದಾಗ

ಮೈ ಮರೆವು ಸಹಜ, ಎಂಬುದನ್ನಿಲ್ಲಿ ತುಂಬಾ ಚೆನ್ನಾಗಿ 

ನಿರೂಪಿಸಿದ್ದಾರೆ. ಪ್ರೇಯಸಿಯನ್ನು ಹೇಗೆಲ್ಲಾ ವರ್ಣಿಸಬಹುದು ಎನ್ನುವುದಕ್ಕೆ,

“ಆಕಾಶದಲ್ಲಿ

ಮಿಂಚಿದಾಗ ನೀ ಕಾಣುವೆ,

ಗುಡುಗಿದಾಗ ನೀ ಮಾತಾಡುವೆ,

ಮಳೆ ಸುರಿದಾಗ ನೀ 

ಪ್ರೀತಿಯಿಂದ ತೋಯಿಸಿದಂತೆ,

ನೀ ಸಿಟ್ಟಾಗಿದ್ದರೆ ಅದುವೇ ಸಿಡಿಲು, ಇದೆಲ್ಲ ನಿನಗಾಗಿ

ಈ ಭೂಮಿಯಲಿ,” ಎಂದಿರುವ 

ಈ ಹನಿಯಲ್ಲಿ ಪ್ರೇಮಕ್ಕಿರುವ ಶಕ್ತಿ ಎಂತಹುದು ಎಂದು ಗೊತ್ತಾಗುವುದರ ಜೊತೆಗೆ ಪ್ರಿಯತಮೆಯ ಒಂದೊಂದು ಭಾವದ ಹೋಲಿಕೆಯೂ ಅರ್ಥಗರ್ಭಿತವಾಗಿರುವುದು ತಿಳಿಯುತ್ತದೆ.

ಮತ್ತೊಂದು ಪ್ರೇಮದ ಹನಿಯಲ್ಲಿ ಹೀಗೆ ಹೇಳಿದ್ದಾರೆ,

ಬಿರು ಬಿಸಿಲಿನಲ್ಲೂ

ಬೇವಿನ ಮರದ ನೆರಳಿರುವ

ಆ ಕಟ್ಟೆ, ನಮ್ಮಿಬ್ಬರ ಮಾತುಗಳಿಗೂ ಪ್ರತ್ಯಕ್ಷ ಸಾಕ್ಷಿ

ಯಾರೇ ಕೇಳಿದರೂ ಮೌನ ವಹಿಸುತ್ತದೆ “. ಪ್ರೇಮಿಗಳಿಬ್ಬರ ಭಾವನಾತ್ಮಕ ಪ್ರಪಂಚದ ಅನಾವರಣವೇ ಇಲ್ಲಿದೆ.

ಕವಿ ಎಂದರೆ ಕೇವಲ ಕಲ್ಪನಾ ಪ್ರಪಂಚದಲ್ಲಿ ಮುಳುಗಿ ಕವನ ಬರೆಯುವುದಲ್ಲ, ವಾಸ್ತವಿಕ ನೆಲೆಗಟ್ಟಿನ ಮೇಲೆ, ಪ್ರಸ್ತುತ ಕಾಲಮಾನಕ್ಕನುಗುಣವಾಗಿ

ಭಾವಪೂರ್ಣವಾಗಿ ಬರೆಯುವವನೇ ನಿಜವಾದ ಕವಿ, ಇಂತಹ ಕವಿಗಳ ಸಾಲಿಗೆ ಸೇರುವ ಕವಿಗಳೇ ಕರಿ ಸಿದ್ದನಗೌಡ ಮಾಲಿ ಪಾಟೀಲರು.

ಪಾಟೀಲರ ಈ ಪ್ರೇಮಲೋಕದ ಪ್ರೇಮ ಹನಿಗಳು ಸಹೃದಯರಿಗೆ ಪ್ರೇಮದ ಅಮಲಿನ ನಶೆ ಏರಿಸಿ ಗುಂಗು ಹಿಡಿಸಿ ಕಾಡುತ್ತವೆ. ಓದಿದಾಗ ಮತ್ತೊಮ್ಮೆ ಓದಬೇಕು ಎನಿಸುವ ಈ ಪ್ರೇಮ ಹನಿಗಳು, ಹನಿಗವನ ಸಂಕಲನ ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟವಾದ ಸ್ಥಾನ ಪಡೆಯುವ, ಎಲ್ಲಾ ಸಾಮರ್ಥ್ಯ 

ಹೊಂದಿದೆ..

ಸಾವಯವ ಕೃಷಿಕರಾದ ಕರಿಸಿದ್ಧನ ಗೌಡ ಮಾಲಿ ಪಾಟೀಲರ ಸಾಹಿತ್ಯ ಪ್ರೇಮವು ಇನ್ನೂ ಉಜ್ವಲವಾಗಿ, ಇವರಿಂದ ಮತ್ತಷ್ಟು ಸಾಹಿತ್ಯ ಕೃತಿಗಳು ಪ್ರಕಟವಾಗಲೆಂಬ ಆಶಯದೊಂದಿಗೆ ಈ ಪುಸ್ತಕ ಅವಲೋಕನದ ಬರಹಕ್ಕೆ ವಿರಾಮ ನೀಡುವೆ.


– ಶಿವಪ್ರಸಾದ್ ಹಾದಿಮನಿ.

ಕನ್ನಡ ಉಪನ್ಯಾಸಕರು.

ಕೊಪ್ಪಳ. 583231.

ಮೊಬೈಲ್ ಸಂಖ್ಯೆ. 7996790189.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!