ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೆಲವು ಹನಿಗವನಗಳು.

೧. ಕೆಲಸ.

ಆಶ್ವಾಸನೆಗಳ
ಕೊಡೋದಷ್ಟೇ ಅಲ್ಲ,
ರಾಜಕಾರಣಿಗಳ ಕೆಲಸ,
ಕೊಟ್ಟ ಆಶ್ವಾಸನೆಗಳ
ಮರೆಯುವುದೂ
ಅವರದೇ ಕೆಲಸ!.

೨. ಕಟ್ಟೋಣ.

ಕಟ್ಟುವುದು ಬೇಡ ಅಲ್ಲಿ
ಮಸೀದಿ, ಮಂದಿರ,
ಕಟ್ಟೋಣ ನಾವಿಲ್ಲಿ
ಮನೋ ಮಂದಿರ,
ಆದೀತು ಆಗ
ಈ ಜಗ ಸುಂದರ.

೩. ಕಠೋರ ಸತ್ಯ.

ನಮ್ಮದು ಜಾತ್ಯಾತೀತ ( ಜಾತ್ಯತೀತ ) ರಾಷ್ಟ್ರ,
ಪತ್ರಿಕೆಗಳಲ್ಲಿ,
ಜನಪ್ರತಿನಿಧಿಗಳ
ಬಾಯಿ, ಭಾಷಣದಲ್ಲಿ!
ವಾಸ್ತವದಲಿ!?
ಜಾತೀಯತೆಯ ರಾಷ್ಟ್ರ,
ಇದಲ್ಲವೇ ಕಠೋರ ಸತ್ಯ!.

೪.ಅಸಮಾನತೆ.

ಹಣವಿದ್ದಾಗ ಇವ ನಮ್ಮವ
ಇವ ನಮ್ಮವ ಎನ್ನುವ
ಜನರೇ ಹಣವಿಲ್ಲದ
ಬಡವನಕಂಡು, ಇವನಾರವ,
ಅನ್ನುತ್ತಿರುವರಲ್ಲ, ಇದು
ಎಂತಹ ವಿಪರ್ಯಾಸ!

  • ಶಿವಪ್ರಸಾದ್ ಹಾದಿಮನಿ. ಕೊಪ್ಪಳ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!