ಸಮಾನತೆಯ ಸೌಗಂಧ ಬೀರುತ
ವೈವಿಧ್ಯತೆಯಲಿ ಏಕತೆ ಬಿಂಬಿಸಿ
ದೇಶದ ಪ್ರಗತಿ ಎತ್ತಿ ಹಿಡಿದು
ಸಹೋದರತ್ವ ಬಾಂಧವ್ಯ ಬೆಳೆಸುವ ಹಬ್ಬವು.
ಸಂವಿಧಾನ ಜಾರಿಗೆ ದ್ಯೋತಕ
ರಾಷ್ಟ್ರ ಧ್ವಜಕೆ ಗೌರವಿಸುತ
ಸೈನಿಕರ ಶೌರ್ಯ ಪ್ರದರ್ಶನದಿ
ದೇಶಕಿದುವೆ ಹೆಮ್ಮೆಯ ಪರ್ವವು.
ಕಲೆ ಸಾಹಿತ್ಯ ಸಂಸ್ಕೃತಿ ಬೆಳೆಸಲು
ಪ್ರಜೆಗಳೇ ಪ್ರಭುಗಳಾಗಿ
ಬೇಧ ಭಾವ ಮರೆತು ಒಂದಾಗುತ
ಪ್ರಜಾಪ್ರಭುತ್ವದ ಅಡಿಪಾಯದ ಸಂಭ್ರಮವು.
- ರೇಷ್ಮಾ ಕಂದಕೂರ, ಶಿಕ್ಷಕಿ
ಸಿಂಧನೂರು.




















