ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಎಲ್ಲ ಧರ್ಮಗಳ ಸಾರ ಶಾಂತಿ ಮತ್ತು ಪ್ರೀತಿ : ಸಹಾಯಕ ಪ್ರಾಧ್ಯಾಪಕಿ ಸುಮಿತ್ರಾ

ಕೊಪ್ಪಳ : ಎಲ್ಲಾ ಧರ್ಮಗಳ ಸಾರ ಶಾಂತಿ ಮತ್ತು ಪ್ರೀತಿ ಆಗಿದೆ ಎಂದು ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಪಕರಾದ ಸುಮಿತ್ರ ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೋಮವಾರದಂದು ಆಂತರಿಕ ಗುಣಮಟ್ಟ ಭರವಸಾ ಕೋಶ, ದರೋಜಿ ಈರಮ್ಮ ರೆಂಜರ್ಸ್ ಘಟಕ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ಕೌಟ್ ಅಂಡ್ ಗೈಡ್ಸ್ ಸಂಸ್ಥಾಪಕ ದಿನಾಚರಣೆ ಮತ್ತು ಸರ್ವಧರ್ಮ ಪ್ರಾರ್ಥನೆ ಸಮಾರಂಭದಲ್ಲಿ ಮಾತನಾಡಿದರು.
ಧರ್ಮಗಳಲ್ಲಿರುವ ಒಳ್ಳೆಯ ವಿಚಾರಗಳನ್ನು ಮತ್ತು ನೀತಿಗಳನ್ನು ನಾವು ಅರ್ಥ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಧರ್ಮ ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು.
ಎಲ್ಲಾರು ಉನ್ನತ ಶಿಕ್ಷಣ ಪಡೆಯಬೇಕು. ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು. ಇದರಿಂದ ಜೀವನದಲ್ಲಿ ನೆಮ್ಮದಿಯಿಂದ ಜೀವನ ಮಾಡಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಹುಲಿಗೆಮ್ಮ ಅವರು ಮಾತನಾಡುತ್ತಾ ಧರ್ಮಗಳು ಮಾನವರಿಗೆ ಒಳ್ಳೆಯದು ಮಾಡುವುದಕ್ಕೆ ಹುಟ್ಟಿಕೊಂಡಿವೆ. ಧರ್ಮಗಳ ಆಚರಣೆಗಳು ಮನಸಿಗೆ ತೃಪ್ತಿ ನೀಡುತ್ತಿವೆ. ಧರ್ಮಗಳು ಸಂಹಿಷ್ಣತೆ ಬೆಳೆಸುತ್ತವೆ.
ನಾವೆಲ್ಲರೂ ಧರ್ಮಗಳ ಸ್ಥಾಪಕರನ್ನು ನೆನೆಯಬೇಕು ಎಂದು ತಿಳಿಸಿದರು.
ಕಾಲೇಜಿನ ದೈಹಿಕ ಶಿಕ್ಷಣ ಭೋಧಕರಾದ ಡಾ. ಪ್ರದೀಪ್ ಕುಮಾರ ಅವರು ಮಾತನಾಡುತ್ತ ಸ್ಕೌಟ್ಸ್ ಅಂಡ್ ಗೈಡ್ಸ್ ನ ವಿದ್ಯಾರ್ಥಿಗಳು ಶಿಸ್ತು ಮತ್ತು ಒಳ್ಳೆಯ ವ್ಯಕ್ತಿತ್ವವನ್ನು ಬೆಳಿಸಿಕೊಳ್ಳಬೇಕು. ಅವಕಾಶಗಳನ್ನು ಉಪಯೋಗ ಮಾಡಿಕೊಂಡು ಜೀವನದಲ್ಲಿ ಯಶಸ್ವಿಯಾಗಬೇಕು. ನಾವು ಯಾವಾಗಲೂ ಧನತ್ಮಕವಾಗಿ ಆಲೋಚನೆ ಮಾಡಬೇಕು ಎಂದು ತಿಳಿಸಿದರು.
ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುಮಯ್ಯ ಅವರು ಮಾತನಾಡುತ್ತ ವಿದ್ಯಾರ್ಥಿಗಳು ದೊಡ್ಡ ಗುರಿ ಇಟ್ಟುಕೊಳ್ಳಿ, ಎಲ್ಲ ಕಡೆಯಿಂದ ಜ್ಞಾನವನ್ನು ಪಡೆಯಿರಿ, ಕಠಿಣ ಪರಿಶ್ರಮ ಪಡೆಯಿರಿ. ಜೀವನದಲ್ಲಿ ನಿರಾಶೆ ಆಗಬಾರದು ಎಂದು ತಿಳಿಸಿದರು.
ಕಾಲೇಜಿನ ಸ್ಕೌಟ್ ಅಂಡ್ ಗೈಡ್ಸ್ ಸಂಚಾಲಕಿ ಶುಭಾ ಅವರು ಮಾತನಾಡುತ್ತ ಸ್ಕೌಟ್ ಅಂಡ್ ಗೈಡ್ಸ್ ಸಂಸ್ಥಾಪನ ದಿನವನ್ನು ವಿಶ್ವ ಚಿಂತನ ದಿನ ಅಂತ ಆಚರಣೆ ಮಾಡಲಾಗುತ್ತಿದೆ. ಬಿಡಾನ್ ಪೊವಲ್ ಅವರ ಹುಟ್ಟಿದ ದಿನವನ್ನು ವಿಶ್ವ ಸ್ಕೌಟ್ ಅಂಡ್ ಗೈಡ್ಸ್ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.
ಈ ದಿನಾಚರಣೆಯ ಮೂಲಕ ವಿಶ್ವದ ಯುವಕರು ಒಗ್ಗಟ್ಟು, ಶಿಸ್ತು, ಸಂವಯಂ ಮತ್ತು ಉದಾತವಾದ ಆಲೋಚನೆಗಳು ಬರಬೇಕು ಎಂಬ ದೃಷ್ಟಿಯಿಂದ ಇದನ್ನು ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ನರಸಿಂಹ ಅವರು ಮಾತನಾಡುತ್ತ ನಾವೆಲ್ಲರೂ ಒಂದೇ ಧರ್ಮದವರು ಅಂತ ತಿಳಿದುಕೊಂಡು ಜೀವನ ಮಾಡಬೇಕು. ಪ್ರತಿಯೊಂದು ಧರ್ಮವು ಮಾನವನ ಕಲ್ಯಾಣವನ್ನು ಬಯಸುತ್ತಿವೆ ಎಂದು ತಿಳಿಸಿದರು.
ರೇಂಜರ್ ವಿದ್ಯಾರ್ಥಿ ನಾಗರತ್ನ ನಂದಿನಿ, ಶಾಂತವ್ವ, ಅಂಜಲಿ, ಶಂಕ್ರಮ್ಮ ವಿವಿಧ ಧರ್ಮಗಳ ಪರಿಚಯ ಮಾಡಿಕೊಟ್ಟರು.
ರೇಂಜರ್ ವಿದ್ಯಾರ್ಥಿನಿರಾದ ದುರ್ಗಮ್ಮ, ಅಂಜಲಿ, ಭವ್ಯ, ರಾಧಿಕಾ ಸರ್ವಧರ್ಮ ಪ್ರಾರ್ಥನಾ ಸಭೆಯನ್ನು ನಡೆಸಿಕೊಟ್ಟರು.
ಕಾರ್ಯಕ್ರಮವನ್ನು ಶಾಹೀನ ಬೇಗಂ ನಿರೂಪಿಸಿದರು. ಶಂಕ್ರಮ್ಮ ಸ್ವಾಗತಿಸಿದರು. ಯಮುನ ವಂದಿಸಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!