ಬೆಂಗಳೂರು: ಬೆಂಗಳೂರಿನ ಆರ್ಯಸಮಾಜದಲ್ಲಿ ಪುಸ್ತಕ ಬಿಡುಗಡೆ ನೆರವೇರಿತು. ಈ ಸಂಧರ್ಭ ಶೋಭಾ ಪುರೋಹಿತ್ ರ ಭಾವನೆಯ ಬಲೆಯಲ್ಲಿ ಕೃತಿಯ ಕುರಿತು ಮಾತಿನ ಮನೆಯ ರಾಸು ವೆಂಕಟೇಶ, ಕ ವಿ ಶಶಿಧರ ಅವರ ಮೆಟ್ರೋ ಟ್ರೈನ್ ಕುರಿತು ನಾಗೇಶ್ ಕುಮಾರ್ ಸಿ ಎಸ್, ಆನಂದ್ ಅವರ ರಿವರ್ಸ್ ಲಂಚ ಕುರಿತು ವೈ ವಿ ಗುಂಡೂರಾವ್ ಹಾಗೂ ಮಧುರ ಕರಣಂ ಅವರ ಕಣ್ಣಾಮುಚ್ಚೆ ಕಾಡೆಗೂಡೆ ಕುರಿತು ನಾ ದಾಮೋದರ ಅವರು ಮಾತನಾಡಿದರು.
ತೇಜು ಪ್ರಕಾಶನದ ಎನ್ ರಾಮನಾಥ್ ಎಲ್ಲರನ್ನೂ ಸ್ವಾಗತಿಸಿದರು. ಕುಮಾರಿ ಸುಮೇಧ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಗಿತ್ತು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ಬೆಂಗಳೂರು




















